ಮಂಗಳೂರು: ಬೆಳ್ತಂಗಡಿ ತಾಲೂಕು ಬಂಗಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಕೆ.ಜಿ.ಲಕ್ಷ್ಮಣ ಶೆಟ್ಟಿ ಮತ್ತು ಅದೇ ಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾದ ಶ್ರೀ ಬಿ.ರಾಜು ಇವರು ಶಾಲೆಯಲ್ಲಿ ಸರಕಾರ ನಿಗಧಿಪಡಿಸಿರುವ ಶುಲ್ಕಗಿಂತ ಹೆಚ್ಚುವರಿಯಾಗಿ ಶುಲ್ಕ ರೂ.28,071 ಗಳನ್ನು ಖೋಟಾ ರಶೀದಿ ನೀಡಿ ವಸೂಲಿ ಮಾಡಿದ ಕಾರಣ ಇವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಬೆಳ್ತಂಗಡಿಗೆ ಭೇಟಿ ನೀಡಿದಾಗ, ಪತ್ರಕರ್ತರು ಮೌಖಿಕ ದೂರು ನೀಡಿದ ಮೇರೆಗೆ, ಜಿಲ್ಲಾಧಿಕಾರಿ ಡಾ.ಎನ್.ಎಸ್.ಚೆನ್ನಪ್ಪ ಗೌಡ ಅವರು ತನಿಖೆ ಕೈಗೊಳ್ಳುವಂತೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದ್ದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಬೆಳ್ತಂಗಡಿ ತಾಲೂಕು ಶಿಕ್ಷಣಾಧಿಕಾರಿಯವರಿಗೆ ಪರಿಶೀಲಿಸಿ ವರದಿನೀಡಲು ಸೂಚಿಸಿದ್ದರು.ಇದರನ್ವಯ ಶಿಕ್ಷಣಾಧಿಕಾರಿಯವರು ದಿನಾಂಕ5-7-2011 ರಂದು ಸದ್ರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲ್ಕಂಡ ಇಬ್ಬರು ಅಧಿಕಾರಿಗಳು ಶಾಲಾಭಿವೃದ್ಧಿ ಶುಲ್ಕ/ಪರೀಕ್ಷಾ ಶುಲ್ಕವೆಂದು ಒಟ್ಟು ರೂ.28,071 ಗಳನ್ನು ಮಕ್ಕಳಿಂದ ವಸೂಲಿ ಮಾಡಿರುವುದಾಗಿ ವರದಿ ನೀಡಿರುವ ಹಿನ್ನಲೆಯಲ್ಲಿ ಇವರುಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದ.ಕ. ಜಿಲ್ಲಾ ಪಂಚಾಯತ್,ಮಂಗಳೂರು ಇವರು ಅಮಾನತುಗೊಳಿಸಿ ಆದೇಶಿಸಿರುತ್ತಾರೆ.
Click this button or press Ctrl+G to toggle between Kannada and English