ಕಡಲ್ಕೊರೆತದಿಂದ ಅಪಾಯದ ಅಂಚಿನಲ್ಲಿರುವ ಮನೆಗಳು

9:06 PM, Thursday, July 7th, 2016
Share
1 Star2 Stars3 Stars4 Stars5 Stars
(No Ratings Yet)
Loading...

sea erosion ಉಳ್ಳಾಲ: ಉಳ್ಳಾಲ ಹಾಗೂ ಉಚ್ಚಿಲದಲ್ಲಿ ಕಡಲ್ಕೊರೆತ ಮುಂದುವರಿದಿದ್ದು, ಉಚ್ಚಿಲದಲ್ಲಿ ಮೂರು ಮನೆ ಸಹಿತ ಒಟ್ಟು 16 ಮನೆಗಳಿಗೆ ಹಾನಿಯಾಗಿದ್ದು, 49 ಮನೆಗಳು ಅಪಾಯದ ಅಂಚಿ ನಲ್ಲಿದ್ದರೆ, ಉಳ್ಳಾಲದ ಕಿಲೇರಿಯಾ ನಗರ ದಲ್ಲಿ 6 ಮನೆಗಳು, ಮುಕ್ಕಚ್ಚೇರಿ 4 ಮನೆಗಳು, ಮೊಗವೀರಪಟ್ಣದಲ್ಲಿ 3 ಮನೆಗಳಿಗೆ ಹಾನಿಯಾಗಿದೆ.

ಒಟ್ಟು ಮೂರು ಮನೆಗಳನ್ನು ಸ್ಥಳಾಂತರಿಸ ಲಾಗಿದ್ದು, ಮುಸ್ಲಿಂ ಸಮುದಾಯವೇ ಹೆಚ್ಚಿರುವ ಪ್ರದೇಶದಲ್ಲಿ ಬುಧವಾರ ಸಂಭ್ರಮದಲ್ಲಿರಬೇಕಾದವರು ಕಡಲ್ಕೊ ರೆತದಿಂದಾಗಿ ಹಬ್ಬದ ಆಚರಣೆ ಕಳೆಗುಂದಿತ್ತು.

ತಾತ್ಕಾಲಿಕ ತಡೆಗೋಡೆಯಾಗಿ ಕಲ್ಲು ಗಳನ್ನು ಹಾಕಿದ್ದರೂ ಕೆಲವೊಂದು ಕಡೆ ಯಲ್ಲಿ ತಡೆಗೋಡೆಯ ಹಾಕದ ಜಾಗ ದಲ್ಲಿ ಸಮುದ್ರ ನೀರು ಒಳ ಬರುತ್ತಿದ್ದು, ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ನೀರು ನಿಂತು ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಬುಧವಾರ ಮೂರು ಮನೆಗಳಲ್ಲಿದ್ದ ಕುಟುಂಬ ಸ್ಥಳಾಂತರಗೊಂಡಿದೆ.

ಈದ್‌–ಉಪ್‌–ಫಿತ್ರ್‌ ಹಬ್ಬದ ನಡುವೆಯೂ ಸಚಿವ ಖಾದರ್ ಮಂಗ ಳೂರಿನ ನಿವಾಸದಲ್ಲಿ ಊಟ ಮುಗಿಸಿ ಕಿಲೇರಿಯಾನಗರಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು. ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿ ಅವರಿಗೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಈ ವಿಚಾರದಲ್ಲಿ ಬಂದರು ಇಲಾಖೆಯ ಸಚಿವ ಮಹಾದೇವಪ್ಪ ಅವರಿಗೆ ಮಾಹಿತಿ ನೀಡಿದ್ದು, ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು. ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೇನ್ ಕುಂಇಮೋನು, ಸದಸ್ಯರಾದ ಮಹಮ್ಮದ್ ಮುಕ್ಕಚ್ಚೇರಿ, ಸೂರ್ಯ ಕಲಾ ಎ.ಆರ್ ಅಬ್ದುಲ್ ರಹೆಮಾನ್, ಶರೀಫ್, ಮುಕ್ಷಿಲ್, ಉಳ್ಳಾಲ ಇನ್‌ ಸ್ಪೆಕ್ಟರ್ ಶಿವಪ್ರಕಾಶ್ ಇತರರು ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English