ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮೆಕ್ಕಳ, ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಜೆ.ಅರುಣಾ, ಗ್ರಾ.ಪಂ ಸದಸ್ಯ ಎಂ.ಕೆಆನಂದ್, ಡಿಡಿಇಡಿ ಮಹಾಲಿಂಗೇಶ್ವರ ಭಟ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿ.ವಿ ರಾಜನ್, ಪಿ.ಇಬ್ರಾಹಿಂ, ಸಾವಿತ್ರಿ, ಸುಬ್ಬಣ್ಣ ಆಳ್ವ, ಗೋಪಾಲಕೃಷ್ಣ ಭಟ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು .ಶಿಕ್ಷಕರಕ್ಷಕ ಸಂಘದ ಬಶೀರ್ ಸ್ವಾಗತಿಸಿ ಮುಖ್ಯ ಶಿಕ್ಷಕ ಅಶೋಕ ಡಿ ವಂದಿಸಿದರು.
ಸುಮಾರು584 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿರುವ ಶಾಲೆಯಲ್ಲಿ ಬಹಳ ಮಂದಿ ಆಧಾರ್ ಗುರುತುಚೀಟಿ ಪಡೆದಿದ್ದು ಇನ್ನುಳಿದ ವಿದ್ಯಾರ್ಥಿಗಳು ಆಧಾರ್ ತಮ್ಮ ಅಧಿಕಾರವೆಂಬಂತೆ ತಮ್ಮ ಹೆಸರನ್ನು ನೊಂದಾಯಿಸಿ ಆಧಾರ್ ಮಾದರಿ ಶಾಲೆಯಾಗಬೇಕೆಂದು ಮಂತ್ರಿ ಚಂದ್ರಶೇಖರನ್ ಸಲಹೆಯಿತ್ತರು.
Click this button or press Ctrl+G to toggle between Kannada and English