ಅಮಲು ಪದಾರ್ಥ ಸೇವಿಸಿ ನಡುರಸ್ತೆಯಲ್ಲೇ ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ

Saturday, January 8th, 2022
Students Clash

ಮಂಗಳೂರು : ಖಾಸಗಿ ಕಾಲೇಜಿನ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಅಮಲು ಪದಾರ್ಥ ಸೇವಿಸಿ ಪಡುಬಿದ್ರಿ ಪೇಟೆಯ ನಡುರಸ್ತೆಯಲ್ಲೇ ಹೊಡೆದಾಟ ನಡೆಸಿ ರಂಪಾಟ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಇಬ್ಬರು ಯುವಕರು ಒರ್ವ ಯುವತಿಯ ತಂಡದಲ್ಲಿದ್ದು ಮೂವರು ಕೂಡಾ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಪೆಟ್ರೋಲ್ ಖಾಲಿಯಾಗಿ ಸ್ಕೂಟರ್ ನಿಂತಾಗ ಗಲಾಟೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳ ಬೀದಿ ರಂಪಾಟ ಹೆಚ್ಚಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರಿಗೂ”ನಮ್ಮನ್ನು ಮುಟ್ಟಿದರೆ ಪರಿಣಾಮ ಚೆನ್ನಾಗಿರೋಲ್ಲ” ಎಂದು ಅವಾಜ್ ಹಾಕಿದ್ದಾರೆ. ಕೊನೆಗೂ ಪೊಲೀಸರು […]

ಸಿಇಟಿ: ಮೊದಲ 10ರಲ್ಲಿ 6 ರ‍್ಯಾಂಕ್ ಪಡೆದ ಮಂಗಳೂರಿನ ಎಕ್ಸ್ ಫರ್ಟ್ ವಿದ್ಯಾರ್ಥಿಗಳು

Monday, September 20th, 2021
expert

ಮಂಗಳೂರು : 2021ನೇ ಸಾಲಿನ ಸಿಇಟಿ ಪರೀಕ್ಷೆಯ ಐದು ವಿಭಾಗದ ಮೊದಲ 10 ರ‍್ಯಾಂಕ್‌ಗಳಲ್ಲಿ 6 ರ‍್ಯಾಂಕ್‌ಗಳನ್ನು ಮಂಗಳೂರಿನ ಎಕ್ಸ್ ಫರ್ಟ್  ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಕಾಲೇಜಿನ ವಿದ್ಯಾರ್ಥಿ ರೀತಮ್ ಬಿ. ಅವರು ಕೃಷಿಯಲ್ಲಿ 2ನೇ ರ‍್ಯಾಂಕ್, ಪಶುವೈದ್ಯಕೀಯದಲ್ಲಿ 3ನೇ ರ‍್ಯಾಂಕ್, ಬಿಎನ್‌ವೈಎಸ್‌ನಲ್ಲಿ 3ನೇ ರ‍್ಯಾಂಕ್, ಬಿ ಫಾರ್ಮಾದಲ್ಲಿ 10 ಹಾಗೂ ಇಂಜಿನಿಯರಿಂಗ್ ನಲ್ಲಿ 13ನೇ ರ‍್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ತೇಜಸ್ ಕೃಷಿಯಲ್ಲಿ 4, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 24, ಇಂಜಿನಿಯರಿಂಗ್ ನಲ್ಲಿ […]

ಕೊರೊನಾ ವೈರಸ್ ಶಂಕೆ : ವಿದೇಶದಿಂದ ಮಣಿಪಾಲಕ್ಕೆ ಆಗಮಿಸಿದ್ದ ಮೂರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

Friday, March 13th, 2020
coronavirus

ಉಡುಪಿ : ವಿದೇಶದಿಂದ ಮಣಿಪಾಲಕ್ಕೆ ಆಗಮಿಸಿದ್ದ ಮೂರು ವಿದ್ಯಾರ್ಥಿಗಳನ್ನು ಕೊರೊನಾ ವೈರಸ್ ಸೋಂಕಿರುವ ಶಂಕೆಯ ಮೇರೆಗೆ ಮಣಿಪಾಲ ಮಾಹೆಯ ಮೂವರನ್ನು ಕೆಎಂಸಿ ಆಸ್ಪತ್ರೆಯ ಪ್ರತ್ಯೇಕಿತ ವಾರ್ಡ್‌ಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ಗುರುವಾರ ಅಮೇರಿಕಾ ಮತ್ತು ಕುವೈತ್‌ಯಿಂದ ಬಂದಿದ್ದರು. ಇನ್ನೋರ್ವ ವಿದ್ಯಾರ್ಥಿ ಶುಕ್ರವಾರ ಮಲೇಶ್ಯದಿಂದ ಆಗಮಿಸಿದ್ದ. ವಿದೇಶದಿಂದ ಆಗಮಿಸಿದ್ದ ಈ ಮೂವರಲ್ಲಿ ಕೆಮ್ಮು ಮತ್ತು ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದು, ಈ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಯ ಪ್ರತ್ಯೇಕಿತ ಐಸೋಲೇಟೆಡ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ […]

ಪಾಕ್ ಪರ ಘೋಷಣೆ : ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಮತ್ತೆ ಪೊಲೀಸ್ ವಶಕ್ಕೆ

Monday, February 17th, 2020
kashmiri

ಹುಬ್ಬಳ್ಳಿ : ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ ರಸ್ತೆ ಪೊಲೀಸರು ಸೋಮವಾರ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಭಾನುವಾರ ತಡರಾತ್ರಿ ಮತ್ತೆ ಬಂಧಿಸಿದ್ದು, ಸೋಮವಾರ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಇಲ್ಲಿನ 3ನೇ ಜೆಎಂಎಫ್ ಸಿ ಕೋರ್ಟ್ ನ ನ್ಯಾಯಾಧೀಶೆ ಪುಷ್ಪಾ ಅವರು ಮೂವರು ವಿದ್ಯಾರ್ಥಿಗಳನ್ನು ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ ಎಂದು ವರದಿ ತಿಳಿಸಿದೆ. ಹುಬ್ಬಳ್ಳಿ ತಾಲೂಕು ಕೊಟಗುಣಸಿಯಲ್ಲಿರುವ ಕೆಎಲ್ ಇ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ಪುಲ್ವಾಮಾ ದಾಳಿಯ ಕರಾಳ ದಿನಾಚರಣೆ ಸಂದರ್ಭದಲ್ಲೂ […]

ಸ೦ತ ಅಲೋಶಿಯಸ್ ಕಾಲೇಜು ಪ್ರಾಥಮಿಕ ಶಾಲೆಯಲ್ಲಿ ಸ೦ಭ್ರಮದ ಕಲಾ ಜಾತ್ರೆ

Tuesday, February 11th, 2020
Annual-day

ಮಂಗಳೂರು :  ಸ೦ತ ಅಲೋಶಿಯಸ್ ಕಾಲೇಜು ಪ್ರಾಥಮಿಕ ಶಾಲೆಯಲ್ಲಿ 2019-20ರ ಸಾಲಿನ ಸ೦ಭ್ರಮದ ಶಾಲಾ ವಾರ್ಷಿಕೋತ್ಸವವು ದಿನಾ೦ಕ 8-02-2020ರ೦ದು ಸ೦ತ ಅಲೋಶಿಯಸ್ ಹೈಸ್ಕೂಲ್ ನ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರು ಮುಖ್ಯ ಅತಿಥಿಗಳಾದ ಡಾ!ನಿಶ್ಚಿತ್ ಡಿ ಸೋಜ ಯುರೋಲೋಜಿಸ್ಟ್, ಹಾಗೂ ಶಾಲಾ ಹಳೆ ವಿದ್ಯಾರ್ಥಿರವರನ್ನು ಭಾರತೀಯ ಸ೦ಸ್ಕ್ರತಿಯ೦ತೆ ಪೂರ್ಣ ಕು೦ಭ ಸ್ವಾಗತ ನೀಡಿ, ಮಧುರವಾದ ಬ್ಯಾ೦ಡ್ ವಾದ್ಯಗಳ ಮೂಲಕ ವೇದಿಕೆಗೆ ಸ್ವಾಗತಿಸಿದರು. ಈ ಸ೦ದರ್ಭದಲ್ಲಿ ಸ೦ತ ಅಲೋಶಿಯಸ್ ಸಮೂಹ ಸ೦ಸ್ಥೆಗಳ ರೆಕ್ಟರ್ […]

ಕೃಷಿಯಲ್ಲಿ ಖುಷಿ ಕಂಡ ವಿದ್ಯಾರ್ಥಿಗಳು

Monday, January 13th, 2020
krishi

ಉಜಿರೆ : ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕಿ ಪರಿಮಳಾ ನೇತೃತ್ವದಲ್ಲಿ ಬೂಡುಜಾಲು ವಿಶ್ವನಾಥ ಗೌಡರ ಮನೆಗೆ ಭೇಟಿ ನೀಡಿ ಕೃಷಿ ಹಾಗೂ ಪೂರಕ ಚಟುವಟಿಕೆಗಳ ಬಗ್ಯೆ ಮಾಹಿತಿ ಕಲೆ ಹಾಕಿ ಖುಷಿ ಪಟ್ಟರು. ಶಿಕ್ಷಕಿಯರಾದ ಸೌಮ್ಯ, ಜಯಂತಿ ಮತ್ತು ಸಂತೋಷ ಸಹಕರಿಸಿದರು. ತೋಟಗಾರಿಕಾ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಮತ್ತು ಅರಣ್ಯ ಇಲಾಖಾ ಅಧಿಕಾರಿ ಅಶೋಕ್ ಮಾಹಿತಿ, ಮಾರ್ಗದರ್ಶನ ನೀಡಿದರು. ಜೇನು ಸಾಕಣೆ, ಕಸಿ ಕಟ್ಟುವ ಬಗ್ಯೆ ಪ್ರಾತ್ಯಕ್ಷಿಕೆಯನ್ನು ಕುತೂಹಲದಿಂದ ವೀಕ್ಷಿಸಿದರು. ವಿವಿಧ […]

ವಿದ್ಯಾರ್ಥಿ ಶಿಕ್ಷಕರಲ್ಲಿ ಪಠ್ಯಕ್ರಮವನ್ನು ಮೀರಿದಚಿಂತನೆ ಬಹುಮುಖ್ಯ : ಪ್ರೊ. ಯಡಪಡಿತ್ತಾಯ

Monday, November 11th, 2019
shakti

ಮಂಗಳೂರು : ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯವಾಗಿರುವಜತೆಯಲ್ಲೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಠ್ಯಕ್ರಮವನ್ನು ಮೀರಿಚಿಂತಿಸಬೇಕಾಗುತ್ತದೆ. ಇದಕ್ಕೆ ಸುಧಾರಿತ ಕಲಿಕಾ ಕ್ರಮಅತ್ಯಂತ ಪೂರಕಎಂದು ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಯಡಪಡಿತ್ತಾಯ ಹೇಳಿದರು. ಶಕ್ತಿನಗರದ ಶಕ್ತಿ ಎಜ್ಯುಕೇಶನ್‌ಟ್ರಸ್ಟ್ ನಡೆಸುತ್ತಿರುವ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದಅನ್ವಯವಾಗಲಿರುವ ಶಕ್ತಿ ಎಡ್ವಾನ್ಸ್‌ಡ್ ಲರ್ನಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ನಿಖರವಾದಗುರಿ, ಶಿಸ್ತು ಹಾಗೂ ಸಮರ್ಪಣಾ ಮನೋಭಾವದಿಂದ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು […]

ಮಂಗಳೂರು : ಶಿಕ್ಷಕರ ವರ್ಗಾವಣೆ ರದ್ದುಪಡಿಸಲು ಒತ್ತಾಯಿಸಿ; ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ

Wednesday, October 16th, 2019
tanniru-baavi

ಮಂಗಳೂರು : ವರ್ಗಾವಣೆಗೊಳ್ಳುತ್ತಿರುವ ಶಿಕ್ಷಕರ ಹುದ್ದೆಗಳಿಗೆ ಪರ್ಯಾಯವಾಗಿ ಹೊಸ ಶಿಕ್ಷಕರ ನೇಮಕಾತಿ ಮಾಡದಿರುವುದನ್ನು ಖಂಡಿಸಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ ಘಟನೆ ತಣ್ಣಿರುಬಾವಿ ಸಮೀಪದ ಕಸ್ಬಾ ಬೆಂಗ್ರೆ ಸರಕಾರಿ ಶಾಲೆಯಲ್ಲಿ ನಡೆದಿದೆ. 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಸ್ಬಾ ಬೆಂಗ್ರೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 5 ಮಂದಿ ಖಾಯಂ ಶಿಕ್ಷಕರನ್ನು ಕಡ್ಡಾಯ ವರ್ಗಾವಣೆಗೊಳಿಸಲಾಗಿದೆ. ಆದರೇ ಹೊಸ ಶಿಕ್ಷಕರ ನೇಮಕಾತಿ ನಡೆದಿರಲಿಲ್ಲ. ಶಿಕ್ಷಣ ಇಲಾಖೆಯ ಈ ನೀತಿಯನ್ನು ಖಂಡಿಸಿ ಮತ್ತು 5 ಶಿಕ್ಷಕರ ಕಡ್ಡಾಯ […]

ಮಡಿಕೇರಿ : ಮಕ್ಕಳ ದಸರಾ ಸಂಭ್ರಮದಲ್ಲಿ ಮಿಂಚಿದ ವಿದ್ಯಾರ್ಥಿಗಳು

Friday, October 4th, 2019
madikeri

ಮಡಿಕೇರಿ : ಎಡೆಬಿಡದೆ ಸುರಿಯುತ್ತಿದ್ದ ಮಳೆ, ರಜಾ ದಿನಗಳನ್ನು ಸರಿಹೊಂದಲು ನಡೆಯುತ್ತಿದ್ದ ಒತ್ತಡದ ಓದು, ಬರಹದಿಂದ ಕೊಂಚ ಮುಕ್ತರಾದಂತೆ ಕಂಡ ವಿದ್ಯಾರ್ಥಿ ಸಮೂಹ ಇಂದು ನಡೆದ ಮಕ್ಕಳ ದಸರಾ ಸಂಭ್ರಮದಲ್ಲಿ ಮಿಂಚಿದರು. ಮಡಿಕೇರಿ ದಸರಾ ಜನೋತ್ಸವಕ್ಕೆ ಮೆರಗು ನೀಡಿದ ”ಮಕ್ಕಳ ದಸರಾ ಉತ್ಸವ” ಬಾಲಪ್ರತಿಭೆಗಳ ಪ್ರತಿಭಾ ಅನಾವರಣಕ್ಕೆ ಸೂಕ್ತ ವೇದಿಕೆಯಾಯಿತು. ಅತ್ಯಂತ ಕುತೂಹಲ ಮತ್ತು ಆಸಕ್ತಿಯಿಂದ ತರಕಾರಿ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನಿರಿಸಿಕೊಂಡು ನಡೆಸುತ್ತಿದ್ದ ವ್ಯಾಪಾರ ಮಕ್ಕಳ ಸಂತೆಯ ಕುತೂಹಲವನ್ನು ಹೆಚ್ಚಿಸಿತು. ಯಾವುದುಂಟು ಯಾವುದಿಲ್ಲ ಎನ್ನುವಂತೆಯೇ ಇಲ್ಲ, ವಿವಿಧ […]

ಗಾಂಜಾ ಸೇವಿಸಿದ ನಾಲ್ವರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

Saturday, September 22nd, 2018
Manipal-police

ಮಣಿಪಾಲ : ಗಾಂಜಾ ಸೇವಿಸಿದ್ದ ಮಣಿಪಾಲದ ನಾಲ್ವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಸೆ.19ರಂದು ಸಂಜೆ ವೇಳೆ ಹೆರ್ಗಾ ಗ್ರಾಮದ ಸರಳಬೆಟ್ಟು ಸಮೀಪ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಾದ ರಿಷಿವೀರ್(20), ಪ್ರೀತಂ ಗುಪ್ತ(19), ಜಿ.ಪ್ರತೀಕಣ (20) ಹಾಗೂ ಸಾಯಿ ಚರಣ್(20) ಎಂಬವರನ್ನು ವಶಕ್ಕೆ ಪಡೆದ ಪೊಲೀಸರು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದರು. ಇವರನ್ನು ಪರೀಕ್ಷಿಸಿದ ವೈದ್ಯರು ಈ ನಾಲ್ವರು ಕೂಡ ಗಾಂಜಾ ಸೇವಿಸಿರುವುದಾಗಿ ದೃಢ ಪತ್ರ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.