ಅಮಲು ಪದಾರ್ಥ ಸೇವಿಸಿ ನಡುರಸ್ತೆಯಲ್ಲೇ ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ

5:10 PM, Saturday, January 8th, 2022
Share
1 Star2 Stars3 Stars4 Stars5 Stars
(No Ratings Yet)
Loading...

Students Clashಮಂಗಳೂರು : ಖಾಸಗಿ ಕಾಲೇಜಿನ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಅಮಲು ಪದಾರ್ಥ ಸೇವಿಸಿ ಪಡುಬಿದ್ರಿ ಪೇಟೆಯ ನಡುರಸ್ತೆಯಲ್ಲೇ ಹೊಡೆದಾಟ ನಡೆಸಿ ರಂಪಾಟ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಇಬ್ಬರು ಯುವಕರು ಒರ್ವ ಯುವತಿಯ ತಂಡದಲ್ಲಿದ್ದು ಮೂವರು ಕೂಡಾ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಪೆಟ್ರೋಲ್ ಖಾಲಿಯಾಗಿ ಸ್ಕೂಟರ್ ನಿಂತಾಗ ಗಲಾಟೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳ ಬೀದಿ ರಂಪಾಟ ಹೆಚ್ಚಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರಿಗೂ”ನಮ್ಮನ್ನು ಮುಟ್ಟಿದರೆ ಪರಿಣಾಮ ಚೆನ್ನಾಗಿರೋಲ್ಲ” ಎಂದು ಅವಾಜ್ ಹಾಕಿದ್ದಾರೆ.

ಕೊನೆಗೂ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ಸಾರ್ವಜನಿಕರ ಸಹಾಯದಿಂದ ಅಂಬುಲೆನ್ಸ್‌ನಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಮೂವರು ಚೆನೈ ಮೂಲದ ಖಾಸಗಿ ಕಾಲೇಜಿನ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English