ಧರ್ಮತ್ತಡ್ಕ ಶಾಲೆಯಲ್ಲಿ ಮೊಳಗಿದ ಗೆಜ್ಜೆನಾದ

12:11 PM, Tuesday, July 26th, 2016
Share
1 Star2 Stars3 Stars4 Stars5 Stars
(No Ratings Yet)
Loading...

Dharmatthadka-schoolಕುಂಬಳೆ: ಆಧುನಿಕ ಯುವ ಜನಾಂಗಕ್ಕೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಎಳವೆಯಿಂದಲೇ ಕಲಿಸುವ ಅಗತ್ಯವಿದೆ.ಬಾಲ್ಯದಲ್ಲಿ ನಾವು ನೀಡುವ ಶಿಕ್ಷಣ ಮುಂದಿನ ಬದುಕನ್ನು ಗಟ್ಟಿಗೊಳಿಸುತ್ತದೆ,ಜೊತೆಗೆ ಸಾಂಸ್ಕೃತಿಕ ಬೇರುಗಳ ಉಳಿಯುವಿಕೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆಯೆಂದು ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪಾ ಅಮ್ಮೆಕ್ಕಳ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಾಸರಗೋಡಿನ ಸಾಮಾಜಿಕ -ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ದಶಮಾನೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಸರಣಿ ಸಂಗೀತ ನೃತ್ಯೋತ್ಸವ ಗೆಜ್ಜೆ-ನಾದ ಕಾರ್ಯಕ್ರಮವನ್ನು ಸೋಮವಾರ ಸಂಜೆ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಂದಿನ ಶಿಕ್ಷಣ ಎಲ್ಲವನ್ನೂ ನೀಡುವುದರಲ್ಲಿ ವಿಫಲಗೊಂಡಿದೆ.ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಸಂಘಟಕರು ಶಾಲಾ ಕಾಲೇಜುಗಳಲಲಿ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಲಸ್ಪರ್ಶಿಯಲ್ಲದಿದ್ದರೂ ಪ್ರೇರಣಾತ್ಮಕ,ಪರಿಚಯ ಕಾರ್ಯಕ್ರಮಗಳನ್ನು ನಡೆಸುವುದು ಉತ್ತಮ ಬೆಳವಣಿಗೆಯೆಂದು ಅವರು ತಿಳಿಸಿದರು.

ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷೆ ಅರುಣಾ.ಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ ಅಸಾಮಾನ್ಯರಿಗೆ ಸಿಗುವ ದೇವರ ವರದಾನ. ಅದರೊಂದಿಗೆ ಕಲೆಗಾರ ತನ್ನ ಸ್ವಪ್ರಯತ್ನದಿಂದ ಕಲೆಯನ್ನು ಸಿದ್ಧಿಸಿಕೊಳ್ಳುತ್ತಾನೆ ಎಂದು ಅಭಿಪ್ರಾಯತಪಟ್ಟರು.

ಮುಖ್ಯ ಅತಿಥಿಗಳಾಗಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲಾ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್, ಶಾಲಾ ಪ್ರಬಂಧಕ ಎನ್. ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.

ರಂಗ ಚಿನ್ನಾರಿ ಸಂಸ್ಥೆಯ ನಿರ್ದೇಶಕರಾದ ಚಿನ್ನ ಕಾಸರಗೋಡು ಪ್ರಾಸ್ಥಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಇನ್ನೋರ್ವ ನಿರ್ದೇಶಕ,ಕ್ಯಾಂಪ್ಕೋದ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ ವಂದಿಸಿದರು. ಶಾಲಾ ಶಿಕ್ಷಕ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ದೂರದರ್ಶನ ಕಲಾವಿದೆಯರಾದ ಆಯನಾ ರಾವ್ ಮತ್ತು ವಿದುಷಿ ಮೋನಿಕಾ ರಾವ್ ಅವರಿಂದ ನಾಟ್ಯಾಯನ ಕಾರ್ಯಕ್ರಮ ಹಾಗೂ ರಂಗಭಾರತಿ ಮಂಗಳೂರು ಇವರ ಆಕಾಶವಾಣಿ ಕಲಾವಿದ ಕೆ.ವಿ.ರಮಣ್ ಅವರ ನಿರ್ದೇಶನದಲ್ಲಿ ಕೆ.ಸುರೇಖಾ ತಂಡದವರಿಂದ ಭಕ್ತಿ-ಭಾವ-ಜನಪದ-ದೇಶಭಕ್ತಿಗೀತೆಗಳ ಭಾವಗಾನ ಮೂಡಿಬಂತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English