ಧರ್ಮತ್ತಡ್ಕ ಶಾಲೆಯಲ್ಲಿ ಮೊಳಗಿದ ಗೆಜ್ಜೆನಾದ

Tuesday, July 26th, 2016
Dharmatthadka-school

ಕುಂಬಳೆ: ಆಧುನಿಕ ಯುವ ಜನಾಂಗಕ್ಕೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಎಳವೆಯಿಂದಲೇ ಕಲಿಸುವ ಅಗತ್ಯವಿದೆ.ಬಾಲ್ಯದಲ್ಲಿ ನಾವು ನೀಡುವ ಶಿಕ್ಷಣ ಮುಂದಿನ ಬದುಕನ್ನು ಗಟ್ಟಿಗೊಳಿಸುತ್ತದೆ,ಜೊತೆಗೆ ಸಾಂಸ್ಕೃತಿಕ ಬೇರುಗಳ ಉಳಿಯುವಿಕೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆಯೆಂದು ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪಾ ಅಮ್ಮೆಕ್ಕಳ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಾಸರಗೋಡಿನ ಸಾಮಾಜಿಕ -ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ದಶಮಾನೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಸರಣಿ ಸಂಗೀತ ನೃತ್ಯೋತ್ಸವ ಗೆಜ್ಜೆ-ನಾದ ಕಾರ್ಯಕ್ರಮವನ್ನು ಸೋಮವಾರ ಸಂಜೆ ಧರ್ಮತ್ತಡ್ಕ ಶ್ರೀ […]

ಮುಖ್ಯಮಂತ್ರಿಯವರ ನಿರೀಕ್ಷೆಯಲ್ಲೇ ಕೊನೆಯುಸಿರೆಳೆದ ಐತ ಕೊರಗ

Wednesday, February 3rd, 2016
Itha Koraga

ಉಪ್ಪಳ: ಮುಖ್ಯಮಂತ್ರಿಯವರ ಸಹಾಯದ ನಿರೀಕ್ಷೆಯಲ್ಲೇ ಬಹುಕಾಲ ಶರಶಯ್ಯೆಯಲ್ಲಿದ್ದ ವ್ಯಕ್ತಿಯೋರ್ವರು ಕೊನೆಗೂ ಹುಸಿ ನಿರೀಕ್ಷೆಯೊಂದಿಗೆ ಇಹ ತ್ಯಜಿಸಿದ ಘಟನೆ ಬಾಯಾರು ದಳಿಕುಕ್ಕು ಕೊಲೋನಿಯಲ್ಲಿ ನಡೆದಿದೆ. ಪೈವಳಿಕೆ ಬಾಯಾರು ಸಮೀಪದ ದಳಿಕುಕ್ಕು ಕೊರಗ ಕೊಲೋನಿಯ ಐತ ಕೊರಗ ಸುಧೀರ್ಘ ಕಾಲಗಳಿಂದ ಪಾರ್ಶ್ವವಾಯು ಪೀಡಿತರಾಗಿ ಸೂಕ್ತ ಚಿಕಿತ್ಸೆಗೆ ಅನುಕೂಲವಿಲ್ಲದೆ ಸಂಕಷ್ಟದಲ್ಲಿದ್ದರು. ಇವರೀಗ ಕಳೆದ ಜ.28ರಂದು ರೋಗ ಉಲ್ಬಣಗೊಂಡು ಅಸುನೀಗಿದರು. ಐತರ ಪತ್ನಿ ಗಿರಿಜಾ ಆಸ್ಮ ರೋಗಿಯಾಗಿ ದೃಷ್ಟಿ ದೋಷವೂ ಬಾಧಿಸಿ ನಿತ್ರಾಣರಾಗಿದ್ದಾರೆ. ಇವರ ಒಂದು ಕಣ್ಣಿಗೆ ಇತ್ತೀಚೆಗೆ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು. […]