ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವೈದ್ಯರ ತಂಡದಿಂದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

10:14 AM, Tuesday, August 2nd, 2016
Share
1 Star2 Stars3 Stars4 Stars5 Stars
(No Ratings Yet)
Loading...

A-J-Hospitalಮಂಗಳೂರು: ಮೂರು ಗುಂಡಿಗೆಯ ಮೇಲ್ಕೋಣೆ ಹೊಂದಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಮಗುವಿಗೆ ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.

ಪಾವನ (ಹೆಸರು ಬದಲಿಸಲಾಗಿದೆ) ಎಂಬ ಹೆಸರಿನ 2 ವರ್ಷದ ಪ್ರಾಯದ ಅಂಕೋಲದ ಮಗು ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಹೀಗಾಗಿ ಪೋಷಕರು ಆಗಾಗ ಮಗುವನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದರು. ಬಳಿಕ ಎ.ಜೆ. ಆಸ್ಪತ್ರೆಯ ಮಕ್ಕಳ ಹೃದ್ರೋಗ ತಜ್ಞ ಡಾ| ಪ್ರೇಮ್‌ ಆಳ್ವ ಅವರು ಮಗುವನ್ನು ಪರೀಕ್ಷಿಸಿ ಹೃದಯದ ಸ್ಕ್ಯಾನ್‌(ಎಕೋ) ಮೂಲಕ ಮಗುವಿಗೆ ತೀರಾ ಅಪರೂಪದ ಕೊರಿóಯೇಟ್ರಿಟಮ್‌ ತೊಂದರೆ ಇರುವುದನ್ನು ಪತ್ತೆಹಚ್ಚಿದರು.

ಇದು ಹೃದಯದಲ್ಲಿ ಹೆಚ್ಚುವರಿ ಕೋಣೆ ಮತ್ತು 2 ರಂಧ್ಯಗಳನ್ನೊಳಗೊಂಡ ನ್ಯೂನತೆಯಾಗಿದೆ. ಹೃದಯದಲ್ಲಿ 4 ಕೋಣೆಗಳಿದ್ದು, 2 ಮೇಲ್ಕೋಣೆ ಮತ್ತು 2 ಕೆಳ ಕೋಣೆಗಳಿವೆ. ಆದರೆ ಈ ಮಗುವಿಗೆ ಹೃದಯದಲ್ಲಿ 3 ಮೇಲ್ಕೋಣೆಗಳಿದ್ದು, ಎರಡು ರಂಧ್ರಗಳಿದ್ದವು. ಹೀಗಾಗಿ ಮಗುವಿಗೆ ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ| ಗೌರವ್‌ ಶೆಟ್ಟಿ ಶಸ್ತ್ರಚಿಕಿತ್ಸೆ ನಡೆಸಿದರು. ಮುಖ್ಯ ಅರಿವಳಿಕೆ ತಜ್ಞ ಡಾ| ಗುರುರಾಜ್‌ ತಂತ್ರಿ ಅರಿವಳಿಕೆ ಮತ್ತು ತೀವ್ರ ನಿಗಾ ಘಟಕವನ್ನು ನಿರ್ವಹಿಸಿದ್ದರು.

ಶಸ್ತ್ರಚಿಕಿತ್ಸೆಯ ಬಳಿಕ ಒಂದು ವಾರದೊಳಗೆ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಮಗು ಈಗ ಸಂಪೂರ್ಣ ಆರೋಗ್ಯದಿಂದಿದ್ದು, ಶಸ್ತ್ರಚಿಕಿತ್ಸೆಯನ್ನು ಸರಕಾರಿ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಮಾಡಲಾಗಿತ್ತು. ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಮಕ್ಕಳ ಹೃದ್ರೋಗ ವಿಭಾಗ ನವಜಾತ ಶಿಶು, ಶಿಶುಗಳು ಮತ್ತು ಮಕ್ಕಳ ಅನೇಕ ಜನ್ಮತಃ ಹೃದ್ರೋಗ ದೋಷಗಳಿಗೆ ಸರಳ ಮತ್ತು ಸಂಕೀರ್ಣ ರೀತಿಯ ಚಿಕಿತ್ಸೆ ನೀಡಲು ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದೆ.

ವಿಭಾಗ ಮಕ್ಕಳ ಹೃದ್ರೋಗ ಚಿಕಿತ್ಸೆ, ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸೆ, ಮಕ್ಕಳ ಹೃದಯ ಅರಿವಳಿಕೆ, ಮಕ್ಕಳ ಹೃದಯ ತೀವ್ರ ನಿಗಾ ಘಟಕ ಒಳಗೊಂಡಿದ್ದು, ವಿಶೇಷ ಪರಿಣತಿ ಹೊಂದಿರುವ ವೈದ್ಯರು, ದಾದಿಯರು, ಉಸಿರಾಟದ ಚಿಕಿತ್ಸಕರನ್ನು ಒಳಗೊಂಡಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್‌ ಮಾರ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English