ಮಂಗಳೂರು: ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯ ವೆಬ್ಸೈಟ್ನಲ್ಲಿ ರವಿ ಪೂಜಾರಿ, ಕಲಿ ಯೋಗೀಶ್, ಕೊಗರ ವಿಶ್ವನಾಥ ಶೆಟ್ಟಿ, ವಿಕ್ಕಿ ಶೆಟ್ಟಿ, ಆಸ್ಗರ್ ಆಲಿ, ರಶೀದ್ ಮಲಬಾರಿ ಸಹಿತ 153 ಮೋಸ್ಟ್ ವಾಂಟೆಡ್ ಆರೋಪಿಗಳ ಭಾವಚಿತ್ರವನ್ನು ಪ್ರಕಟಿಸಲಾಗಿದ್ದು, ಜನತೆ ಇವರ ಅಥವಾ ಇವರ ಸಹಚರರ ಮಾಹಿತಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಹಿತಿ ನೀಡುವವರ ಹೆಸರು ಸಹಿತ ವಿವರವನ್ನು ಗೌಪ್ಯವಾಗಿಡಲಾಗುವುದು. ಸೂಕ್ತ ಬಹುಮಾನ ನೀಡಲಾಗುವುದು. ಹಾಗಾಗಿ ಮಾಹಿತಿ ನೀಡಿ ಸಹಕರಿಸುವಂತೆ ಕೋರಿದರು.
153 ಮಂದಿಯ ಪೈಕಿ 7 ಮಂದಿಗೆ ರೆಡ್ ಕಾರ್ನರ್ ನೋಟಿಸ್ ಮತ್ತು 5 ಮಂದಿ ವಿರುದ್ಧ ಲುಕ್ಔಟ್ ಸರ್ಕ್ಯೂಲರ್ ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬ ಆರೋಪಿಯ ಅಪರಾಧದ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದರು.
Click this button or press Ctrl+G to toggle between Kannada and English