ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಲು ಸಮಿತಿ ರಚನೆ

4:34 PM, Saturday, August 6th, 2016
Share
1 Star2 Stars3 Stars4 Stars5 Stars
(No Ratings Yet)
Loading...

Medical-collageಪುತ್ತೂರು: ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರಾಜಕೀಯ ಮರೆತು ಎಲ್ಲರೂ ಒಂದಾಗಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಹಕರಿಸಬೇಕು. ಇದಕ್ಕಾಗಿ ವೇದಿಕೆ ಹಾಗೂ ಹೋರಾಟ ಸಮಿತಿಯೂ ರಚನೆಯಾಗಿದೆ.

ಶುಕ್ರವಾರ ಪುತ್ತೂರಿನ ಮಾದೈ ದೇವುಸ್ ಚರ್ಚ್‍ ಸಭಾಂಗಣದಲ್ಲಿ ಪುತ್ತೂರು ಕೆನರಾ ಮತ್ತು ವಾಣಿಜ್ಯ ಸಂಘದ ಆಶ್ರಯದಲ್ಲಿ ನಾಗರಿಕರ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಶಾಸಕರ ಗೌರವಾಧ್ಯಕ್ಷತೆಯಲ್ಲಿ ಹೋರಾಟ ಸಮಿತಿ ರಚನೆ ಮಾಡಿ ಘೋಷಿಸಲಾಯಿತು.

ಸರ್ಕಾರಿ ಮೆಡಿಕಲ್ ಕಾಲೇಜಿಗೆಂದೇ ಪುತ್ತೂರಿನಲ್ಲಿ 40 ಎಕರೆ ಸ್ಥಳ ಕಾದಿರಿಸಲಾಗಿದ್ದು, ದ.ಕ. ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಸಂದರ್ಭ ಅದನ್ನು ಪುತ್ತೂರಿಗೆ ನೀಡಬೇಕೆಂದು ಸರ್ಕಾರದ ಮೇಲೆ ಹೋರಾಟ ಸಮಿತಿ ಮೂಲಕ ಒತ್ತಡ ತರಲು ನಿರ್ಧರಿಸಲಾಯಿತು.

ಸಭೆಯಲ್ಲಿ ಎಂ.ಎಸ್. ರಘುನಾಥ ರಾವ್ ಅವರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ವಿಶ್ವಪ್ರಸಾದ್ ಸೇಡಿಯಾಪು ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ದಿನೇಶ್ ಭಟ್ ಸಂಚಾಲಕರಾಗಿ ಆಯ್ಕೆಯಾದರು. 15 ಗಣ್ಯರನ್ನು ವೈಯಕ್ತಿಕ ಸದಸ್ಯರನ್ನಾಗಿಯೂ, ಸಂಘ ಸಂಸ್ಥೆಗಳನ್ನು ಸಾಂಸ್ಥಿಕ ಸದಸ್ಯರನ್ನಾಗಿಯೂ ಆರಿಸಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English