ದ.ಕ. ಜಿಲ್ಲೆಯ ಮೂರು ತಾಲೂಕು ಒಟ್ಟುಗೂಡಿ ಪುತ್ತೂರು ಜಿಲ್ಲೆ ರಚನೆಯಾಗಬೇಕು: ಹೋರಾಟ ಸಮಿತಿ ಒತ್ತಾಯ

Friday, November 16th, 2018
puttur

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂರು ತಾಲೂಕುಗಳು ಒಟ್ಟುಗೂಡಿ ಪ್ರತ್ಯೇಕ ಪುತ್ತೂರು ಜಿಲ್ಲೆ ರಚನೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈಗಾಗಲೇ ಈ ಕುರಿತು ಹೋರಾಟ ಸಮಿತಿಯನ್ನೂ ರಚಿಸಲಾಗಿದೆ ಎನ್ನಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಉಡುಪಿ ಜಿಲ್ಲೆಯನ್ನು ಸರ್ಕಾರ ಪ್ರತ್ಯೇಕ ಜಿಲ್ಲೆಯಾಗಿ‌ ಘೋಷಿಸಿದ ಬಳಿಕ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ. ಇದರಲ್ಲಿ ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳನ್ನು ಸೇರಿಸಿ ಪ್ರತ್ಯೇಕ ಪುತ್ತೂರು ಜಿಲ್ಲೆ ಮಾಡಬೇಕೆಂಬ ಕೂಗು ಕೇಳಿಬಂದಿದೆ. ಇದಕ್ಕಾಗಿ ಈ ಭಾಗದ ಪ್ರಮುಖರು ಒಂದು ಹಂತದ ಸಭೆಯನ್ನು […]

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಲು ಸಮಿತಿ ರಚನೆ

Saturday, August 6th, 2016
Medical-collage

ಪುತ್ತೂರು: ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರಾಜಕೀಯ ಮರೆತು ಎಲ್ಲರೂ ಒಂದಾಗಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಹಕರಿಸಬೇಕು. ಇದಕ್ಕಾಗಿ ವೇದಿಕೆ ಹಾಗೂ ಹೋರಾಟ ಸಮಿತಿಯೂ ರಚನೆಯಾಗಿದೆ. ಶುಕ್ರವಾರ ಪುತ್ತೂರಿನ ಮಾದೈ ದೇವುಸ್ ಚರ್ಚ್‍ ಸಭಾಂಗಣದಲ್ಲಿ ಪುತ್ತೂರು ಕೆನರಾ ಮತ್ತು ವಾಣಿಜ್ಯ ಸಂಘದ ಆಶ್ರಯದಲ್ಲಿ ನಾಗರಿಕರ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಶಾಸಕರ ಗೌರವಾಧ್ಯಕ್ಷತೆಯಲ್ಲಿ ಹೋರಾಟ ಸಮಿತಿ ರಚನೆ ಮಾಡಿ ಘೋಷಿಸಲಾಯಿತು. ಸರ್ಕಾರಿ ಮೆಡಿಕಲ್ ಕಾಲೇಜಿಗೆಂದೇ ಪುತ್ತೂರಿನಲ್ಲಿ 40 ಎಕರೆ […]