ಸುಲಿಗೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳೆಯರಿಬ್ಬರ ಬಂಧನ

11:15 AM, Monday, August 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

Tamil-Womans arrestಮಂಗಳೂರು: ಸುಲಿಗೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳೆಯರಿಬ್ಬರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ, 2.64 ಲಕ್ಷ ಮೌಲ್ಯದ 80 ಗ್ರಾಂ ತೂಕದ ಚಿನ್ನಾಭರಣ ಮತ್ತು 1,45,000 ನಗದು ವಶಪಡಿಸಿಕೊಂಡಿದ್ದಾರೆ.

ಬಂಧಿತ ಮಹಿಳೆಯರನ್ನು ತಮಿಳನಾಡಿನ ಮೆಟ್ಟು ಪಾಳಯಮ್‌ನ ಸಿಲ್ವಿ (24), ಅರೈ (22) ಎಂದು ಗುರುತಿಸಲಾಗಿದೆ. ಆರೋಪಿಗಳು ಸುಲಿಗೆ ಮಾಡಿದ ಚಿನ್ನಾಭರಗಳನ್ನು ಮಾರಲು ಬಂದಿರುವ ಬಗ್ಗೆ ಖಚಿತಿ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸ್ ನಿರೀಕ್ಷಕ ಬೆಳ್ಳಿಯಪ್ಪ ಕೆ.ಯು. ಮತ್ತು ಸಿಬ್ಬಂದಿ ನಗರದ ರೂಪವಾಣಿ ಚಿತ್ರಮಂದಿರದ ಬಳಿ ಬಂಧಿಸಿದ್ದಾರೆ.

ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರ ಚಿನ್ನಾಭರಣಗಳನ್ನು ಮತ್ತು ಪರ್ಸ್‌‌ಗಳಲ್ಲಿನ ನಗದು ಸುಲಿಗೆ ಮಾಡುವ ಪ್ರವೃತ್ತಿಯವರು. ಇವರು ಬಸ್‌ನಲ್ಲಿ ಪ್ರಯಾಣಿಸುವ ಸಮಯ ಮಹಿಳಾ ಪ್ರಯಾಣಿಕರ ಬಳಿ ನಿಂತುಕೊಂಡು, ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದು, ಪ್ರಯಾಣಿಕರ ಅರಿವಿಗೆ ಬಾರದಂತೆ ತುಂಬ ಚಾಕಚಕ್ಯತೆಯಿಂದ ಕಳ್ಳತನ ಮಾಡುತ್ತಿದ್ದರು ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಶಾಂತರಾಜು ಸುದ್ದಿಗಾರರಿಗೆ ತಿಳಿಸಿದ್ದಾರೆ.

Tamil-Womans arrestಆರೋಪಿಗಳು ಲೀಲಾವತಿ ಎಂಬವವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 1,58,760 ನಗದು, ಗುಣವಂತಿ ಎಂಬುವರ ಸುಮಾರು 40 ಗ್ರಾಂ ತೂಕದ ಹವಳದ ಚಿನ್ನಾಭರಣ ಹಾಗೂ ಪರಮೇಶ್ವರಿ ಎಂಬವರು ಮಂಗಳೂರು ಕಂಕನಾಡಿ ಬಸ್‌ಸ್ಟಾಪ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಸಮಯದಲ್ಲಿ ಕುತ್ತಿಗೆಯಲ್ಲಿದ್ದ ಸುಮಾರು 16 ಗ್ರಾಂ ತೂಕದ ಚಿನ್ನಾಭರಣ ಕದ್ದಿರುವುದಾಗಿ ತಿಳಿಸಿದರು.

ಪೊಲೀಸ್ ಉಪನಿರೀಕ್ಷಕರುಗಳಾದ ಮಹಮ್ಮದ್ ಶರೀಫ್ ಕೆ, ಅನಂತ ಮುಡರೇಶ್ವರ, ಸಿಬ್ಬಂದಿಗಳಾದ ವಿಶ್ವನಾಥ, ಗಂಗಾಧರ, ಧನಂಜಯ ಗೌಡ, ಶೇಖರ್ ಗಟ್ಟಿ, ಸತ್ಯನಾರಾಯಣ, ನೂತನ್ ಕುಮಾರ್, ಚಂದ್ರಶೇಖರ, ವಿಶ್ವನಾಥ ಬುಡೋಳಿ, ಮಹಿಳಾ ಸಿಬ್ಬಂದಿ ಝರೀನಾ ತಾಝ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Tamil-Womans arrest

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English