ಬದಿಯಡ್ಕ : ಕಾರಡ್ಕ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಆಶ್ರಯದಲ್ಲಿ ಪಾಲ್ಪಟ್ಟಿ ದೃಢಪತ್ರದ ಬೆಲೆಯೇರಿಕೆ ವಿರುದ್ಧ ಬದಿಯಡ್ಕ ಉಪನೋಂದಾವಣಾ ಕಚೇರಿಗೆ ನಡೆಸಿದ ಧರಣಿ ಸತ್ಯಾಗ್ರಹವನ್ನು ಕೇರಳ ಪ್ರದೇಶ್ ಕಾಂಗ್ರೆಸ್ಸ್ ಕಾರ್ಯದರ್ಶಿ ನೀಲಕಂಠನ್ ಉದ್ಘಾಟಿಸಿ, ಮಾತನಾಡಿ ಅಧಿಕಾರಕ್ಕೆ ಬಂದು 2 ತಿಂಗಳಲ್ಲೇ ಜನತೆಯನ್ನು ವಂಚಿಸಲು ಈ ಸರಕಾರ ಹೊರಟಿದೆ. ಸ್ಟಾಂಪ್ ಪೇಪರ್‌ನ ಬೆಲೆ ಹೆಚ್ಚಳವು ಜನಸಾಮಾನ್ಯರಿಗೆ ದೊಡ್ಡ ಹೊಡೆತವಾಗಿದೆ ಎಂದರು.
ಈ ತೀರ್ಮಾನವನ್ನು ಕೂಡಲೇ ಹಿಂತೆಗೆದು ಸಾರ್ವಜನಿಕರಿಗಾಗುವ ತೊಂದರೆಯನ್ನು ನಿವಾರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಕಾರಡ್ಕ ಬ್ಲಾಕ್ ಅಧ್ಯಕ್ಷ ವಾರಿಜಾಕ್ಷನ್ ಅಧ್ಯಕ್ಷತೆ ವಹಿಸಿದ್ದರು. ಈಲ್ಲಾ ಕಾಂಗ್ರೆಸ್ಸ್ ಕಾರ್ಯದರ್ಶಿ ಕಲ್ಲಗ ಚಂದ್ರಶೇಖರ ರಾವ್ ಮಾತನಾಡಿ ಎಲ್ ಡಿ ಎಫ್ ಅಧಿಕಾರಕ್ಕೆ ಬಂದರೆ ಎಲ್ಲವೂ ಸರಿಯಾಗುವುದೆಂಬ ವಾಕ್ಯದೊಂದಿಗೆ ಅಧಿಕಾರವೇರಿ ಜನರನ್ನು ವಂಚಿಸಿರುವುದು ದೌರ್ಭಾಗ್ಯಕರ ಎಂದರು.
ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಶಂಕರ ಕಾರಡ್ಕ, ಎ.ಜಿ. ನಾಯರ್ ಮೊದಲಾದವರು ಮಾತನಾಡಿದರು.
ಚಂದ್ರಹಾಸ ರೈ, ಶ್ಯಾಮಭಟ್ ಕಳೆಯತ್ತೋಡಿ, ಜಯಶ್ರೀ, ಗಂಗಾಧರ ಗೋಳಿಯಡ್ಕ, ಶ್ಯಾಮಪ್ರಸಾದ ಮಾನ್ಯ, ಆನಂದ ಮವ್ವಾರು ಮೊದಲಾದವರು ಉಪಸ್ಥಿತರಿದ್ದರು. ಸತ್ಯಾಗ್ರಹಕ್ಕೆ ಮೊದಲು ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆಯನ್ನು ನಡೆಸಲಾಯಿತು.
ಖಾದರ್ ಮಾನ್ಯ ಸ್ವಾಗತಿಸಿ, ರಾಮ ಪಾಟಾಳಿ ವಂದಿಸಿದರು.
Click this button or press Ctrl+G to toggle between Kannada and English