ದಾಖಲೆ ನೀಡುವಲ್ಲಿ ಕಾರ್ಮಿಕರನ್ನು ಸತಾಯಿಸುತ್ತಿರುವ ಪಿಎಫ್ ಕಚೇರಿಯ ಅಧಿಕಾರಿಗಳ ವಿರುದ್ಧ ಸಾಮೂಹಿಕ ಧರಣಿ ಸತ್ಯಾಗ್ರಹ

Tuesday, December 28th, 2021
pf-office

ಮಂಗಳೂರು  : ಕೆವೈಸಿ ಹಾಗೂ ಇ ನೋಮಿ ನೇಷನ್ ಗಾಗಿ ದಾಖಲೆ ಒದಗಿಸುವ ನೆಪದಲ್ಲಿ ಕಾರ್ಮಿಕರನ್ನು ಸತಾಯಿಸುತ್ತಿರುವ ಭವಿಷ್ಯನಿಧಿ ಕಚೇರಿಯ ಅಧಿಕಾರಿಗಳ ದುರ್ವರ್ತನೆಗಳ ವಿರುದ್ದ CITU ದ.ಕ.ಜಿಲ್ಲಾ ಸಮಿತಿ ನೇತ್ರತ್ವದಲ್ಲಿ ನಗರದಲ್ಲಿಂದು(28-12-2021)ಭವಿಷ್ಯನಿಧಿ ಕಚೇರಿಯೆದುರು ಸಾಮೂಹಿಕ ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು ಕೇಂದ್ರ ಸರಕಾರ ಹಾಗೂ ಪಿಎಫ್ ಕಚೇರಿಯ ಅಧಿಕಾರಿಗಳ ವಿರುದ್ದ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು . ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು, *ಒಳ್ಳೆಯ ದಿನಗಳನ್ನು ತರುವುದಾಗಿ ಪೊಳ್ಳು […]

ಗ್ರಾ.ಪಂ ನೌಕರರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭ

Tuesday, February 25th, 2020
protest

ಮಡಿಕೇರಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾ.ಪಂ ನೌಕರರ ಸಂಘ ಅನಿರ್ದಿಷ್ಟಾವಧಿ ಧರಣಿ ಮುಷ್ಕರವನ್ನು ಆರಂಭಿಸಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾ.ಪಂ ನೌಕರರ ಸಂಘದ ಜಿಲ್ಲಾ ಘಟಕ ಸರ್ಕಾರಗಳ ನಿರ್ಲಕ್ಷ್ಯ ಮನೋಭಾವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನೌಕರರಿಂದ ದುಡಿಸಿಕೊಳ್ಳುವ ಆಸಕ್ತಿಯನ್ನು ತೋರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೌಕರರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲವೆಂದು ಆರೋಪಿಸಿದರು. ರಾಜ್ಯದಲ್ಲಿ 6 ಸಾವಿರಕ್ಕೂ ಅಧಿಕ ಗ್ರಾ.ಪಂ.ಗಳಲ್ಲಿ ಸುಮಾರು 65 ಸಾವಿರ ಸಿಬ್ಬಂದಿಗಳು ಕೆಲಸ […]

ಮಾತೃಭಾಷಾ ದಿನಾಚರಣೆ : ಕೊಡವ ಭಾಷೆಯನ್ನು 8ನೇ ಶೆಡ್ಯೂಲ್‌ಗೆ ಸೇರಿಸಲು ಒತ್ತಾಯ; ಸಿಎನ್‌ಸಿಯಿಂದ ಧರಣಿ ಸತ್ಯಾಗ್ರಹ

Saturday, February 22nd, 2020
CNC-protest

ಮಡಿಕೇರಿ : ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಹಿನ್ನೆಲೆ ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ನ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು ಮತ್ತು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಪ್ರತೀ ವರ್ಷ ಆಕ್ಸ್‌ಫರ್ಡ್ ಡಿಕ್ಷ್ನರಿಯೂ ಜಗತ್ತಿನ ವಿವಿಧ ಭಾಷೆಗಳ 15 ಸಾವಿರ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಪ್ರಕ್ರಿಯೆ […]

ಬೆಂಗಳೂರು : ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ

Thursday, August 29th, 2019
Congress-pratibhatane

ಬೆಂಗಳೂರು : ಅತಿವೃಷ್ಟಿ ಬಗ್ಗೆ ರಾಜ್ಯ ಸರಕಾರದ ನಿರ್ಲಕ್ಷ ಮತ್ತು ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಧರಣಿ ನಡೆಸುತ್ತಿದೆ . ನಗರದ ಮೌರ್ಯ ಸರ್ಕಲ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಕಾಂಗ್ರೆಸ್ ಶಾಸಕರು, ನಾಯಕರು ಸಾಥ್ ನೀಡಿದ್ದಾರೆ. ಇಂದು ಸಂಜೆ 5ವರೆಗೂ ಈ ಧರಣಿ ಸತ್ಯಾಗ್ರಹ ನಡೆಯಲಿದ್ದು ಬಳಿಕ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಭೇಟಿಯಾಗಿ ಮನವಿ ಪತ್ರ ನೀಡಲಿದ್ದಾರೆ.    

ಬದಿಯಡ್ಕ ಸಬ್ ರಿಜಿಸ್ಟ್ರಾರ್ ಕಛೇರಿಯ ಮುಂಭಾಗ ಕಾಂಗ್ರೆಸ್ ವತಿಯಿಂದ ಸ್ಟಾಂಪ್ ಪೇಪರ್ ಬೆಲೆಯೇರಿಕೆ ವಿರುದ್ಧ ಧರಣಿ

Friday, August 12th, 2016
Stamp-paper

ಬದಿಯಡ್ಕ : ಕಾರಡ್ಕ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಆಶ್ರಯದಲ್ಲಿ ಪಾಲ್ಪಟ್ಟಿ ದೃಢಪತ್ರದ ಬೆಲೆಯೇರಿಕೆ ವಿರುದ್ಧ ಬದಿಯಡ್ಕ ಉಪನೋಂದಾವಣಾ ಕಚೇರಿಗೆ ನಡೆಸಿದ ಧರಣಿ ಸತ್ಯಾಗ್ರಹವನ್ನು ಕೇರಳ ಪ್ರದೇಶ್ ಕಾಂಗ್ರೆಸ್ಸ್ ಕಾರ್ಯದರ್ಶಿ ನೀಲಕಂಠನ್ ಉದ್ಘಾಟಿಸಿ, ಮಾತನಾಡಿ ಅಧಿಕಾರಕ್ಕೆ ಬಂದು 2 ತಿಂಗಳಲ್ಲೇ ಜನತೆಯನ್ನು ವಂಚಿಸಲು ಈ ಸರಕಾರ ಹೊರಟಿದೆ. ಸ್ಟಾಂಪ್ ಪೇಪರ್‌ನ ಬೆಲೆ ಹೆಚ್ಚಳವು ಜನಸಾಮಾನ್ಯರಿಗೆ ದೊಡ್ಡ ಹೊಡೆತವಾಗಿದೆ ಎಂದರು. ಈ ತೀರ್ಮಾನವನ್ನು ಕೂಡಲೇ ಹಿಂತೆಗೆದು ಸಾರ್ವಜನಿಕರಿಗಾಗುವ ತೊಂದರೆಯನ್ನು ನಿವಾರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ಕಾರಡ್ಕ ಬ್ಲಾಕ್ ಅಧ್ಯಕ್ಷ ವಾರಿಜಾಕ್ಷನ್ ಅಧ್ಯಕ್ಷತೆ […]

ಕಣ್ಮುಚ್ಚಿ ಕುಳಿತ ಕನ್ನಡ ಅಭಿವೃದ್ಧಿ ಪ್ರಾಧಿಕಾರ

Wednesday, February 5th, 2014
upavasa-sathyagraha

ಬೆಂಗಳೂರು: ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ತರಲೆಂದೇ ನೇಮಕವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕೆಲಸ ಮಾಡುವ ಬದಲು ಕಣ್ಮುಚ್ಚಿ ಕುಳಿತಿದೆ. ಹೀಗಾದರೆ ಮುಂದೊಂದು ದಿನ ಕನ್ನಡ ಭಾಷೆ, ಕನ್ನಡ ಜನರ ಅಸ್ತಿತ್ವವೇ ಇರಲಾರದು. ಇದು ಸರೋಜಿನಿ ಮಹಿಷಿ ವರದಿ ಜಾರಿಯಾಗಲೇಬೇಕೆಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹನಡೆಸುತ್ತಿರುವ ‘ಕನ್ನಡಿಗರ ಉದ್ಯೋಗ ವೇದಿಕೆ’ ಅಧ್ಯಕ್ಷೆ ವಿನುತಾ ಅವರ ಮಾತು. ಉಪವಾಸ ಸತ್ಯಾಗ್ರಹದ ಒಂಬತ್ತನೇ ದಿನವಾದರೂ ಸರ್ಕಾರದಿಂದ ಯಾವುದೇ ಭರವಸೆ ಕೇಳಿ ಬಂದಿಲ್ಲ. ಸಾಹಿತಿಗಳೇ, ನೀವು ಕೂಡ ವರದಿ ಅನುಷ್ಠಾನಕ್ಕೆ […]

ಅಡ್ವಾಣಿ ಬ್ಲಾಗ್ ನಲ್ಲಿ ಅಣ್ಣಾ ಹಜಾರೆಗೆ ಖಂಡನೆ

Tuesday, April 12th, 2011
ಎಲ್ .ಕೆ. ಅಡ್ವಾಣಿ

ನವದೆಹಲಿ : ಜನಲೋಕಪಾಲ್ ಮಸೂದೆ ಜಾರಿ ಹೋರಾಟದಲ್ಲಿ ಅಣ್ಣಾ ಹಜಾರೆ ಎಲ್ಲಾ ರಾಜಕಾರಣಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುವ ಅಣ್ಣಾ ಅವರ ಧೋರಣೆ ಬಗ್ಗೆ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಗೂ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಜೆಪಿಸಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸತತ ಎರಡು ತಿಂಗಳ ಕಾಲ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವಾಗಿತ್ತು. ಆದರೆ ಅಣ್ಣಾ ಹಜಾರೆ ಅವರು ಕೇವಲ ನಾಲ್ಕು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ […]