ಬೆಂಗಳೂರು: ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ತರಲೆಂದೇ ನೇಮಕವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕೆಲಸ ಮಾಡುವ ಬದಲು ಕಣ್ಮುಚ್ಚಿ ಕುಳಿತಿದೆ. ಹೀಗಾದರೆ ಮುಂದೊಂದು ದಿನ ಕನ್ನಡ ಭಾಷೆ, ಕನ್ನಡ ಜನರ ಅಸ್ತಿತ್ವವೇ ಇರಲಾರದು.
ಇದು ಸರೋಜಿನಿ ಮಹಿಷಿ ವರದಿ ಜಾರಿಯಾಗಲೇಬೇಕೆಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹನಡೆಸುತ್ತಿರುವ ‘ಕನ್ನಡಿಗರ ಉದ್ಯೋಗ ವೇದಿಕೆ’ ಅಧ್ಯಕ್ಷೆ ವಿನುತಾ ಅವರ ಮಾತು.
ಉಪವಾಸ ಸತ್ಯಾಗ್ರಹದ ಒಂಬತ್ತನೇ ದಿನವಾದರೂ ಸರ್ಕಾರದಿಂದ ಯಾವುದೇ ಭರವಸೆ ಕೇಳಿ ಬಂದಿಲ್ಲ. ಸಾಹಿತಿಗಳೇ, ನೀವು ಕೂಡ ವರದಿ ಅನುಷ್ಠಾನಕ್ಕೆ ಹೋರಾಟ ನಡೆಸದಿದ್ದರೆ ಮುಂದೊಂದು ದಿನ ನಿಮ್ಮ ಕಥೆ, ಕಾದಂಬರಿ, ಪುಸ್ತಕಗಳನ್ನು ಓದಲು ಕನ್ನಡಿಗರೇ ಇರುವುದಿಲ್ಲ. ಚಿತ್ರರಂಗದವರು ಕೂಡ ಈ ಬಗ್ಗೆ ಮೌನವಾಗಿದ್ದರೆ ಮುಂದೆ ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಜಾಗ ದೊರಕದಂತಾಗದು. ಎಂದು ಹೇಳಿದರು.
ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆಂದೇ 1993ರಲ್ಲಿ ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಚ ನೆಯಾಯಿತು. ಆದರೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಈ ಬಗ್ಗೆ ಮೌನವಹಿಸಿದ್ದಾರೆ. ಪ್ರಾಧಿಕಾರಕ್ಕೆಂದೇ ವರ್ಷಕ್ಕೆ 8 ಕೋಟಿ ಹಣ ಬರುತ್ತದೆ. ಆದರೆ ಈ ಹಣ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ 2-3 ವರ್ಷಗಳಲ್ಲಿ ಕನ್ನಡಿಗರು ಭಿಕ್ಷೆ ಬೇಡುವ ಪರಿಸ್ಥಿತಿ ಒದಗಿ ಬರಲಿದೆ. ಸರೋಜಿನಿ ಮಹಿಷಿ ವರದಿ ಯಥಾವತ್ತಾಗಿ ಜಾರಿಯಾದರೆ ಮುಂದೆ ಕರ್ನಾಟಕದಲ್ಲಿ ಕನ್ನಡ ಅಳಿದು ಹೋಗುತ್ತದೆ ಎಂಬ ಬಗ್ಗೆಯೂಯೋಚಿಸಬೇಕಾಗಿಲ್ಲ ಎಂದರು.
Click this button or press Ctrl+G to toggle between Kannada and English