ಮಂಗಳೂರು: ತಾಲೂಕಿನಲ್ಲಿ ಅಪರೂಪದ ತೂಗು ಸೇತುವೆಯೊಂದು ಗಂಜಿಮಠ ಸಮೀಪದ ಮುತ್ತೂರಿನಲ್ಲಿ ಉದ್ಘಾಟನೆಗೊಂಡಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಫಲ್ಗುಣಿ ನದಿಗೆ ನಿರ್ಮಿಸಲಾಗಿರುವ ಈ ತೂಗು ಸೇತುವೆಯ ಒಂದು ತುದಿ ಮಂಗಳೂರು ತಾಲೂಕು, ಇನ್ನೊಂದು ತುದಿ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು, ಮಂಗಳೂರು ಉತ್ತರ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಈ ಸೇತುವೆ ಸೇರಲಿದೆ.
ಎರಡು ತಾಲೂಕುಗಳನ್ನು ಬೆಸೆಯುವ ಕೊಂಡಿಯಾಗಿರುವ ಇದು ಮಂಗಳೂರಿನ ಪ್ರಥಮ ತೂಗು ಸೇತುವೆಯಾಗಿದೆ. ಈ ಸೇತುವೆಯಿಂದಾಗಿ ಬಡಗಬೆಳ್ಳೂರು ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರಕ್ಕೆ ಬರಲು ಇನ್ನಷ್ಟು ಹತ್ತಿರವಾಗಲಿದೆ. ‘ತೂಗು ಸೇತುವೆ ಪ್ರವೀಣ’ ಸುಳ್ಯದ ಗಿರೀಶ್ ಈ ತೂಗು ಸೇತುವೆ ನಿರ್ಮಿಸಿದ್ದಾರೆ.
ನೂತನ ಸೇತುವೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮುತ್ತೂರು ಮತ್ತು ಬಡಗಬೆಳ್ಳೂರು ಪಂಚಾಯತ್ ಅಧ್ಯಕ್ಷರಾದ ಜಯಂತಿ, ನಾಗಮ್ಮ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English