ಪ್ರಕೃತಿ ವಿಕೋಪದಿಂದ ನಷ್ಟ; ಶಾಸಕ ಡಾ.ಭರತ್ ಶೆಟ್ಟಿ ಪರಿಶೀಲನೆ; ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡಲು ಮನವಿ

Monday, July 26th, 2021
Bharath-Shetty

ಮಂಗಳೂರು : ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲ್ ವಾರ್ಡಿನ ಅತ್ರೆಬೈಲ್ ಏರಿಯಾದಲ್ಲಿ ಭಾರೀ ಮಳೆಯ ಕಾರಣ ಫಲ್ಗುಣಿ ನದಿ ತೀರ ಪ್ರದೇಶದಲ್ಲಿ ಮಣ್ಣು ಕುಸಿದಿದ್ದು, ಕೃಷಿಭೂಮಿ ಹಾಗೂ ಮನೆಗಳಿಗೆ ಹಾನಿ ಸಂಭವಿಸಿತ್ತು. ಪ್ರಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ಪ್ರದೇಶಗಳಿಗೆ ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿದರು. ಅತ್ರೆಬೈಲಿಗೆ ಹೋಗುವ ನಾಗರಿಕರಿಗೆ ಸೂಕ್ತವಾದ ರಸ್ತೆ ಇಲ್ಲ. ಇಲ್ಲಿ ಉತ್ತಮ ರಸ್ತೆಯನ್ನು ಮಾಡಲು ತಾವು ತಯಾರಿದ್ದು, ಜನರು ರಸ್ತೆಗೆ ಜಾಗ ಬಿಟ್ಟುಕೊಟ್ಟರೆ ರಸ್ತೆ ನಿರ್ಮಾಣಕ್ಕೆ ಆದಷ್ಟು […]

ಫಲ್ಗುಣಿ ನದಿಯ ಸಂಪರ್ಕ ಹಳ್ಳದಲ್ಲಿ 25ಕ್ಕಿಂತಲೂ ಅಧಿಕ ನೀರುನಾಯಿಗಳು

Sunday, May 16th, 2021
water Dog

ಉಜಿರೆ : ಬೆಳ್ತಂಗಡಿ ತಾಲ್ಲೂಕಿನ ಗರ್ಡಾಡಿ ಬಳಿಯ ಫಲ್ಗುಣಿ ನದಿಯ ಸಂಪರ್ಕ ಹಳ್ಳದಲ್ಲಿ ಶನಿವಾರ ನೀರುನಾಯಿಗಳ ಹಿಂಡು ಕಂಡುಬಂದಿವೆ. ಇದೇ ಸ್ಥಳದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ರಾತ್ರಿ ಹೊತ್ತು ನೀರುನಾಯಿಗಳು ಕಂಡುಬಂದಿದ್ದವು. ಇದೀಗ ಹಗಲಿನಲ್ಲಿ 25ಕ್ಕಿಂತಲೂ ಅಧಿಕ ನೀರುನಾಯಿಗಳು ಫಲ್ಗುಣಿ ನದಿಯ ಸಂಪರ್ಕ ಹಳ್ಳದಲ್ಲಿ ಕಂಡುಬಂದಿರುವುದು ಆಶ್ಚರ್ಯ ಉಂಟುಮಾಡಿದೆ’

ಫಲ್ಗುಣಿ ನದಿಯಲ್ಲಿ ಈಜಲು ಹೋದ ಯುವಕ ಮೃತ್ಯು

Thursday, May 6th, 2021
Nishanth

ಬೆಳ್ತಂಗಡಿ:  ಯುವಕನೋರ್ವ ಫಲ್ಗುಣಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಮೃತ ಯುವಕನನ್ನು ಕಾರ್ಯಾಣ ದುಗ್ಗಪ್ಪ ಎಂಬವರ ಪುತ್ರ ನಿಶಾಂತ್ (22) ಎಂದು ಗುರುತಿಸಲಾಗಿದೆ. 5 ಮಂದಿ ಸ್ನೇಹಿತರು ಫಲ್ಗುಣಿ ನದಿಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ. ಆದರೆ ನಿಶಾಂತ್ ನೀರಿನಲ್ಲಿ ಮುಳುಗಿದ್ದಾಗಿ ತಿಳಿದುಬಂದಿದ್ದು, ಈ ವೇಳೆ ಆತನ ಸ್ನೇಹಿತರು ನಿಶಾಂತ್ ನನ್ನು ಉಳಿಸುವ ಪ್ರಯತ್ನ ನಡೆಸಿ ದಡಕ್ಕ ತಂದಿದ್ದು, ಆ ವೇಳೆಗಾಗಲೇ ನಿಶಾಂತ್ ಮೃತಪಟ್ಟಿದ್ದ ಎಂದು ಯುವಕರು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ […]

ಎರಡು ದಿನದ ನವಜಾತ ಶಿಶುವನ್ನು ಫಲ್ಗುಣಿ ನದಿಗೆ ಎಸೆದ ಪಾಪಿಗಳು

Sunday, January 3rd, 2021
Palguni River

ಮಂಗಳೂರು : ಎರಡು ದಿನದ ನವಜಾತ ಶಿಶುವಿನ ಮೃತದೇಹವು ಪಣಂಬೂರು ಪೊಲೀಸ್‌ ಠಾಣೆ ವ್ಯಾಪ್ತಿಯ ತೋಟಬೆಂಗ್ರೆಯ ಫಲ್ಗುಣಿ ನದಿಯಲ್ಲಿ ಶನಿವಾರದಂದು ತೇಲುತ್ತಿರುವುದು ಕಂಡು ಬಂದಿದೆ. ಮೀನುಗಾರಿಕೆ ನಡೆಸಿ ಫಲ್ಗುಣಿ ನದಿಯ ದಂಡಕ್ಕೆ ಮರಳುವ ಸಂದರ್ಭದಲ್ಲಿ ನವಜಾತ ಶಿಶುವಿನ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ. ದೋಣಿಯಲ್ಲಿದ್ದ ಫೈಜಲ್ ಮತ್ತು ರಹೀಮ್ ನವಜಾತ ಶಿಶುವಿನ ಮೃತದೇಹ ನೀರಿನ ಮೇಲೆ ತೇಲುತ್ತಿರುವುದನ್ನು ಗಮನಿಸಿದ್ದು ತಕ್ಷಣ, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನವಜಾತ ಶಿಶುವು ಹೆಣ್ಣಾಗಿದ್ದು ಒಂದು ಅಥವಾ ಎರಡು ದಿನದ್ದಾಗಿದೆ ಎಂದು ಅಂದಾಜಿಸಲಾಗಿದೆ. ಜೀವಂತ  ಮಗುವನ್ನು ಅಥವಾ […]

ಯುವ ಛಾಯಾಗ್ರಾಹಕ ಫಲ್ಗುಣಿ ನದಿಯಲ್ಲಿ ಮುಳುಗಿ ಸಾವು

Saturday, May 9th, 2020
kaushik

ಮಂಗಳೂರು : ಕಾವೂರು ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಯುವ ಛಾಯಾಗ್ರಾಹಕ ಕೌಶಿಕ್ (22) ಮರವೂರಿನಲ್ಲಿ ಫಲ್ಗುಣಿ ನದಿಯಲ್ಲಿ ಮುಳುಗಿ ಶನಿವಾರ ಮೃತಪಟ್ಟಿದ್ದಾರೆ. ಕಾವೂರು ಪಳನೀರ್ ಕಟ್ಟೆ ನಿವಾಸಿಯಾಗಿದ್ದ ಕೌಶಿಕ್ ತಾಯಿಯೊಂದಿಗೆ ವಾಸವಿದ್ದರು. ತಾಯಿಯ ಏಕೈಕ ಪುತ್ರನಾಗಿದ್ದ ಈತ ಕುಟುಂಬದ ಆಧಾರ ಸ್ತಂಭವಾಗಿದ್ದರು. ಪ್ರಥಮ ಪಿಯುಸಿ ಬಳಿಕ ವಿದ್ಯಾಭ್ಯಾಸ ತೊರೆದು ಕಾವೂರಿನ ದಿಯಾ ಸ್ಟುಡಿಯೋದಲ್ಲಿ ಕೆಲಸ ಮಾಡಲಾರಂಭಿಸಿದ್ದ ಕೌಶಿಕ್ ಫೋಟೊ ಹಾಗು ವೀಡಿಯೋ ತೆಗೆಯುವುದರಲ್ಲಿ ಪರಿಣತಿ ಹೊಂದಿದ್ದರು. ತಾನೊಬ್ಬ ಉತ್ತಮ ಛಾಯಾಗ್ರಾಹಕನಾಗಬೇಕೆಂಬ ಕನಸು ಕಂಡಿದ್ದ ಕೌಶಿಕ್ ಸಾಧು ಸ್ವಭಾವದ […]

ಬಂಟ್ವಾಳದಲ್ಲಿ 45 ವರ್ಷಗಳಷ್ಟು ಹಳೆಯ ಮೂಲರಪಟ್ಣದ ಸೇತುವೆ ಕುಸಿತ

Monday, June 25th, 2018
Mularapatna Bridge

ಮಂಗಳೂರು: ಸುಮಾರು 45 ವರ್ಷಗಳಷ್ಟು ಹಳೆಯದಾದ ಮೂಲರಪಟ್ಣದ ಸೇತುವೆ ಕಳೆದ ಮೂರುನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನೀರಿನ ಒಳ ಹರಿವು ಹೆಚ್ಚಾದುದರಿಂದ ಸೋಮವಾರ ಸಂಜೆ 5.30ರ ಸುಮಾರಿಗೆ ಕುಸಿದಿದೆ. ಬಿ.ಸಿ. ರೋಡ್ ಮತ್ತು ಕುಪ್ಪೆಪದವು ಸಂಪರ್ಕಿಸುವ ರಸ್ತೆಯ ನಡುವೆ ಫಲ್ಗುಣಿ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಲಾಗಿದೆ. ಇದೇ ವೇಳೆಗೆ ಸೀಗಲ್ ಎಂಬ ಬಸ್ಸು ಮೂಲರಪಟ್ಣ ದಿಂದ ಸುರತ್ಕಲ್ ಗೆ ಹೋಗುತಿತ್ತು. ಕೇವಲ ಒಂದೆರಡು ನಿಮಿಷಗಳ ವ್ಯತ್ಯಾಸದಲ್ಲಿ ಈ ಘಟನೆ ಸಂಭವಿಸಿದೆ . ಫಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ […]

ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಕುಸಿತ.. ದೊಡ್ಡಿಕಟ್ಟ ಪ್ರದೇಶದಲ್ಲಿ ಅವಾಂತರ ಸೃಷ್ಟಿ!

Friday, June 22nd, 2018
mangaluru

ಮಂಗಳೂರು: ಇಲ್ಲಿನ ಹೊರವಲಯದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಕುಸಿದ ಪರಿಣಾಮ ಬಜ್ಪೆ ಬಳಿಯ ದೊಡ್ಡಿಕಟ್ಟ ಪ್ರದೇಶಕ್ಕೆ ನೀರು ನುಗ್ಗಿ ದೊಡ್ಡಿಕಟ್ಟ ಪ್ರದೇಶ ಸೃಷ್ಠಿಯಾಗಿದೆ. ಅಂಬ್ಲಮೊಗರು ಮದಕ ಜಂಕ್ಷನ್ ಬಳಿ ಗುಡ್ಡ ಕುಸಿತ ಇಂದು ಶುಕ್ರವಾರ ಬೆಳ್ಳಂಬೆಳಿಗ್ಗೆ ಈ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಎಸ್ಇ ಝಡ್ ವಲಯಕ್ಕೆ ನೀರು ಹರಿಯುವ ನಾಲೆಗೆ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಇಂದು ಮುಂಜಾನೆ ತೆಡೆಗೋಡೆ ಕುಸಿದಿದ್ದು, ನದಿ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ […]

ಈಜಲು ತೆರಳಿದ್ದ ಐವರು ಮಕ್ಕಳು ನೀರುಪಾಲು! ಫಲ್ಗುಣಿ ನದಿಯಲ್ಲಿ ಘಟನೆ

Tuesday, November 7th, 2017
palguni river

ಮಂಗಳೂರು: ಬಂಟ್ವಾಳ ತಾಲೂಕಿನ ಮೂಲರಪಟ್ಣದಲ್ಲಿ ಫಲ್ಗುಣಿ ನದಿಗೆ ಸ್ನಾನ ಮಾಡಲು ತೆರಳಿದ್ದ ಐವರು ಮಕ್ಕಳು ನೀರುಪಾಲದ ಘಟನೆ ನಡೆದಿದೆ. ಸೋಮವಾರ ಸಂಜೆ ಮನೆಯಿಂದ ಹೋದವರು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಮಕ್ಕಳ ಪೋಷಕರು ಹುಡುಕಾಟ ನಡೆಸಿದ ವೇಳೆ ನದಿಯ ದಡದ ಮೇಲೆ ಮಕ್ಕಳ ಬಟ್ಟೆಗಳು ಪತ್ತೆಯಾಗಿವೆ. ಅಸ್ಲಾಮ್ ( 17), ರಮೂಜ್ (17), ಅಜಮಾತ್ (18), ಮುಬಾಶಿರ್ (17) ಹಾಗೂ ಸಮಾದ್ (17) ನೀರುಪಾಲಾದ ಮಕ್ಕಳು. ಮುಂಜಾನೆ ಸಮಾದ್ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದ ನಾಲ್ವರ ಮಕ್ಕಳ […]

ಫಲ್ಗುಣಿ ನದಿ : ತಪ್ಪು ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ : ತಹಶೀಲ್ದಾರ್

Friday, May 26th, 2017
TP meeting

ಮಂಗಳೂರು  : ಗುರುಪುರದ ಫಲ್ಗುಣಿ ನದಿ ನೀರು ಕಪ್ಪಾಗಿರುವ ಬಗ್ಗೆ ಕಾಲಮಿತಿಯೊಳಗೆ ಸಮರ್ಪಕ ವರದಿ ಸಲ್ಲಿಸುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರ ಸಂಬಂಧಿತ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಇತ್ತೀಚೆಗೆ ಸಭೆ ಕರೆದು ಸೂಚಿಸಿದ್ದಾರೆ. ತಪ್ಪು ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ಮಹದೇವಯ್ಯ ಭರವಸೆ ನೀಡಿದ್ದರು. ಫಲ್ಗುಣಿ ನದಿಗೆ ಕಟ್ಟಲಾಗಿರುವ ಮರವೂರು ಡ್ಯಾಂ ನೀರು ಕಲುಷಿತಗೊಳ್ಳಲು ಕಾರಣರಾದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ […]

ಎರಡು ತಾಲೂಕುಗಳನ್ನು ಬೆಸೆಯುವ ಕೊಂಡಿ: ಮಂಗಳೂರಿನ ಪ್ರಥಮ ತೂಗು ಸೇತುವೆ

Friday, August 12th, 2016
Hangin-Bridge

ಮಂಗಳೂರು: ತಾಲೂಕಿನಲ್ಲಿ ಅಪರೂಪದ ತೂಗು ಸೇತುವೆಯೊಂದು ಗಂಜಿಮಠ ಸಮೀಪದ ಮುತ್ತೂರಿನಲ್ಲಿ ಉದ್ಘಾಟನೆಗೊಂಡಿತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಫಲ್ಗುಣಿ ನದಿಗೆ ನಿರ್ಮಿಸಲಾಗಿರುವ ಈ ತೂಗು ಸೇತುವೆಯ ಒಂದು ತುದಿ ಮಂಗಳೂರು ತಾಲೂಕು, ಇನ್ನೊಂದು ತುದಿ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು, ಮಂಗಳೂರು ಉತ್ತರ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಈ ಸೇತುವೆ ಸೇರಲಿದೆ. ಎರಡು ತಾಲೂಕುಗಳನ್ನು ಬೆಸೆಯುವ ಕೊಂಡಿಯಾಗಿರುವ ಇದು ಮಂಗಳೂರಿನ ಪ್ರಥಮ ತೂಗು ಸೇತುವೆಯಾಗಿದೆ. ಈ ಸೇತುವೆಯಿಂದಾಗಿ ಬಡಗಬೆಳ್ಳೂರು ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರಕ್ಕೆ ಬರಲು ಇನ್ನಷ್ಟು […]