ಮಂಗಳೂರು: ಇಲ್ಲಿನ ಹೊರವಲಯದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಕುಸಿದ ಪರಿಣಾಮ ಬಜ್ಪೆ ಬಳಿಯ ದೊಡ್ಡಿಕಟ್ಟ ಪ್ರದೇಶಕ್ಕೆ ನೀರು ನುಗ್ಗಿ ದೊಡ್ಡಿಕಟ್ಟ ಪ್ರದೇಶ ಸೃಷ್ಠಿಯಾಗಿದೆ. ಅಂಬ್ಲಮೊಗರು ಮದಕ ಜಂಕ್ಷನ್ ಬಳಿ ಗುಡ್ಡ ಕುಸಿತ ಇಂದು ಶುಕ್ರವಾರ ಬೆಳ್ಳಂಬೆಳಿಗ್ಗೆ ಈ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ಎಸ್ಇ ಝಡ್ ವಲಯಕ್ಕೆ ನೀರು ಹರಿಯುವ ನಾಲೆಗೆ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಇಂದು ಮುಂಜಾನೆ ತೆಡೆಗೋಡೆ ಕುಸಿದಿದ್ದು, ನದಿ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದೆ.
ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಈ ತಡೆಗೊಡೆ ಕುಸಿದಿದೆ. ತಗ್ಗು ಪ್ರದೇಶಗಳಿಗೆ ಸಾಕಷ್ಟು, ನೀರು ನುಗಿದ್ದು ತಡೆಗೊಡೆ ಬಳಿಯ ಇರುವ ದೊಡ್ಡಿಕಟ್ಟ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ.
ದೊಡ್ಡಿಕಟ್ಟ ಸಮೀಪದ ದೇವಸ್ಥಾನ, ಪರಿಸರದ ಮನೆಗಳಿಗೆ ನೀರು ನುಗ್ಗಿರುವುದರಿಂದ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಈ ಸ್ಥಳದಲ್ಲಿಯೇ ಇರುವ ಸಾಫ್ಟ್ ವೇರ್ ಕಂಪನಿಯ ಕಚೇರಿಗೂ ನೀರು ನುಗ್ಗಿದೆ.
ಈಗ ನೀರಿನ ಪ್ರಮಾಣ ಇಳಿಮುಖವಾಗಿದ್ದು, ಸ್ಥಳೀಯ ಜನ ಪ್ರತಿನಿಧಿಗಳು ಸೇರಿದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Click this button or press Ctrl+G to toggle between Kannada and English