ಫಲ್ಗುಣಿ ನದಿಯಲ್ಲಿ ಈಜಲು ಹೋದ ಯುವಕ ಮೃತ್ಯು

5:49 PM, Thursday, May 6th, 2021
Share
1 Star2 Stars3 Stars4 Stars5 Stars
(No Ratings Yet)
Loading...

Nishanthಬೆಳ್ತಂಗಡಿ:  ಯುವಕನೋರ್ವ ಫಲ್ಗುಣಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮೃತ ಯುವಕನನ್ನು ಕಾರ್ಯಾಣ ದುಗ್ಗಪ್ಪ ಎಂಬವರ ಪುತ್ರ ನಿಶಾಂತ್ (22) ಎಂದು ಗುರುತಿಸಲಾಗಿದೆ.

5 ಮಂದಿ ಸ್ನೇಹಿತರು ಫಲ್ಗುಣಿ ನದಿಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ. ಆದರೆ ನಿಶಾಂತ್ ನೀರಿನಲ್ಲಿ ಮುಳುಗಿದ್ದಾಗಿ ತಿಳಿದುಬಂದಿದ್ದು, ಈ ವೇಳೆ ಆತನ ಸ್ನೇಹಿತರು ನಿಶಾಂತ್ ನನ್ನು ಉಳಿಸುವ ಪ್ರಯತ್ನ ನಡೆಸಿ ದಡಕ್ಕ ತಂದಿದ್ದು, ಆ ವೇಳೆಗಾಗಲೇ ನಿಶಾಂತ್ ಮೃತಪಟ್ಟಿದ್ದ ಎಂದು ಯುವಕರು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English