ಮಂಗಳೂರು : ಎರಡು ದಿನದ ನವಜಾತ ಶಿಶುವಿನ ಮೃತದೇಹವು ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ತೋಟಬೆಂಗ್ರೆಯ ಫಲ್ಗುಣಿ ನದಿಯಲ್ಲಿ ಶನಿವಾರದಂದು ತೇಲುತ್ತಿರುವುದು ಕಂಡು ಬಂದಿದೆ.
ಮೀನುಗಾರಿಕೆ ನಡೆಸಿ ಫಲ್ಗುಣಿ ನದಿಯ ದಂಡಕ್ಕೆ ಮರಳುವ ಸಂದರ್ಭದಲ್ಲಿ ನವಜಾತ ಶಿಶುವಿನ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ.
ದೋಣಿಯಲ್ಲಿದ್ದ ಫೈಜಲ್ ಮತ್ತು ರಹೀಮ್ ನವಜಾತ ಶಿಶುವಿನ ಮೃತದೇಹ ನೀರಿನ ಮೇಲೆ ತೇಲುತ್ತಿರುವುದನ್ನು ಗಮನಿಸಿದ್ದು ತಕ್ಷಣ, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನವಜಾತ ಶಿಶುವು ಹೆಣ್ಣಾಗಿದ್ದು ಒಂದು ಅಥವಾ ಎರಡು ದಿನದ್ದಾಗಿದೆ ಎಂದು ಅಂದಾಜಿಸಲಾಗಿದೆ. ಜೀವಂತ ಮಗುವನ್ನು ಅಥವಾ ಮಗುವಿನ ಮೃತದೇಹವನ್ನು ನದಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿದ್ದಾರೆ.
Click this button or press Ctrl+G to toggle between Kannada and English