ಮಂಗಳೂರಿನಲ್ಲಿ 29 ಗರ್ಭಿಣಿಯರಲ್ಲಿ ಮತ್ತು ಎರಡು ನವಜಾತ ಶಿಶುಗಳಲ್ಲಿ ಕೊರೊನಾ ಸೋಂಕು

Thursday, May 13th, 2021
corona

ಮಂಗಳೂರು :  ಮಂಗಳೂರಿನ ಸರ್ಕಾರಿ ಲೇಡಿ ಗೋಶನ್ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕು  25 ಗರ್ಭಿಣಿಯರಲ್ಲಿ ಮತ್ತು ಹೊಸ ತಾಯಂದಿರಲ್ಲಿ ಕಾಣಿಸಿಕೊಂಡಿದ್ದು ಅವರಿಗಾಗಿ ಹೆಚ್ಚುವರಿ 14 ಹಾಸಿಗೆಗಳ ವಾರ್ಡ್ ನ್ನು ಮೀಸಲಿರಿಸಲಾಗಿದೆ. ಈ ರೋಗಿಗಳ ಆರೋಗ್ಯದ ಮೇಲ್ವಿಚಾರಣೆಗಾಗಿ ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು ತಾಲೂಕು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಕಿರಿಯ ಆರೋಗ್ಯ ಸಹಾಯಕರ ಮೂಲಕ ಈ ರೋಗಿಗಳನ್ನು ಪರಿಶೀಲಿಸಲಾಗುತ್ತದೆ . ಎರಡು ನವಜಾತ ಶಿಶುಗಳಿಗೆ ಸೋಂಕು ದೃಢಪಟ್ಟಿದೆ ಎಂದು ಲೇಡಿ ಗೊಸ್ಚೆನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ […]

ಎರಡು ದಿನದ ನವಜಾತ ಶಿಶುವನ್ನು ಫಲ್ಗುಣಿ ನದಿಗೆ ಎಸೆದ ಪಾಪಿಗಳು

Sunday, January 3rd, 2021
Palguni River

ಮಂಗಳೂರು : ಎರಡು ದಿನದ ನವಜಾತ ಶಿಶುವಿನ ಮೃತದೇಹವು ಪಣಂಬೂರು ಪೊಲೀಸ್‌ ಠಾಣೆ ವ್ಯಾಪ್ತಿಯ ತೋಟಬೆಂಗ್ರೆಯ ಫಲ್ಗುಣಿ ನದಿಯಲ್ಲಿ ಶನಿವಾರದಂದು ತೇಲುತ್ತಿರುವುದು ಕಂಡು ಬಂದಿದೆ. ಮೀನುಗಾರಿಕೆ ನಡೆಸಿ ಫಲ್ಗುಣಿ ನದಿಯ ದಂಡಕ್ಕೆ ಮರಳುವ ಸಂದರ್ಭದಲ್ಲಿ ನವಜಾತ ಶಿಶುವಿನ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ. ದೋಣಿಯಲ್ಲಿದ್ದ ಫೈಜಲ್ ಮತ್ತು ರಹೀಮ್ ನವಜಾತ ಶಿಶುವಿನ ಮೃತದೇಹ ನೀರಿನ ಮೇಲೆ ತೇಲುತ್ತಿರುವುದನ್ನು ಗಮನಿಸಿದ್ದು ತಕ್ಷಣ, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನವಜಾತ ಶಿಶುವು ಹೆಣ್ಣಾಗಿದ್ದು ಒಂದು ಅಥವಾ ಎರಡು ದಿನದ್ದಾಗಿದೆ ಎಂದು ಅಂದಾಜಿಸಲಾಗಿದೆ. ಜೀವಂತ  ಮಗುವನ್ನು ಅಥವಾ […]

ಮಗಳಿಗೆ ಅಕ್ರಮ ಸಂಭಂದಕ್ಕೆ ಹುಟ್ಟಿದ ನವಜಾತ ಶಿಶುವನ್ನು, ಚೂರಿ, ಬ್ಲೇಡ್ ಗಳಿಂದ ಇರಿದು ಪೊದೆಗೆ ಎಸೆದ ಅಜ್ಜ-ಅಜ್ಜಿ

Saturday, October 3rd, 2020
infant killers

ಭೋಪಾಲ್:  ಊರಿನ ಯುವಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಗಳಿಗೆ ಹುಟ್ಟಿದೆ ಎನ್ನಲಾದ ಮಗುವನ್ನು ಪಾಲಕರು ಚಾಕುವಿನಿಂದ ಇರಿದು ನಂತರ ಬ್ಲೇಡ್ ನಿಂದ ದಾಳಿ ನಡೆಸಿ ದೇವಾಲಯದ ಆವರಣ ಸಮೀಪದ ಪೊದೆ ಯಲ್ಲಿ ಇರಿಸಿದ ಪ್ರಕರಣ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಅಯೋಧ್ಯ ನಗರ ಎಂಬಲ್ಲಿ ನಡೆದಿತ್ತು . ಆದರೆ ಆ ಮಗು ಯಾರದ್ದು ಎಂಬುದನ್ನು ಮೊದಲಿಗೆ ಪೊಲೀಸರಿಗೆ ಪತ್ತೆ ಹಚ್ಚಲು ಸವಾಲಾಗಿತ್ತು. ಕೊಲೆಗಾರನನ್ನು ಪತ್ತೆಹಚ್ಚಲು ಐದು ತಂಡಗಳ ಪೊಲೀಸ್ ಸಿಬ್ಬಂದಿಯನ್ನು ರಚಿಸಿ ಸುತ್ತಮುತ್ತಲಿನ ಹಲವಾರು ನರ್ಸಿಂಗ್ ಹೋಂಗಳ ಸಿಬ್ಬಂದಿಯನ್ನು ಪ್ರಶ್ನಿಸಲಾಯಿತು ಮತ್ತು ಆ  ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು […]

ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ

Friday, December 7th, 2012
Baby found on rly tracks

ಮಂಗಳೂರು :ಇಂದು ಬೆಳಗಿನ ಜಾವ ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದ ಟ್ರ್ಯಾಕ್ ಮದ್ಯೆ ಆಗತಾನೆ ಹುಟ್ಟಿದ ನವಜಾತ ಗಂಡು ಶಿಶುವೊಂದು ಪತ್ತೆಯಾಗಿದೆ. ಎಂದಿನಂತೆ ರೈಲನ್ನು ಪರಿಶೀಲಿಸುತ್ತಿದ್ದ ರೈಲ್ವೆಯ ಪಾರ್ಸೆಲ್ ವಿಭಾಗದ ಸಿಬ್ಬಂದಿ ರಜಾಕ್ ಎಂಬುವವರಿಗೆ ರೈಲಿನ ಟ್ರ್ಯಾಕ್ ಮಧ್ಯೆ ಮಗುವಿನ ಅಳಲು ಕೇಳಿಸಿದಾಗ ಅವರು ಕೂಡಲೇ ಈ ವಿಷಯವನ್ನು ಇತರೆ ಅಧಿಕಾರಿಗಳ ಗಮನಕ್ಕೆ ತಂದು, ಮಗುವನ್ನು ಕೂಡಲೇ ಸರಕಾರೀ ಲೇಡಿಗೋಶನ್ ಆಸ್ಪತ್ರೆಗೆ ಕೊಂಡೊಯ್ದರು. ಮಗುವಿನ ದೇಹ ರಕ್ತ ಸಿಕ್ತ ಸ್ಥಿತಿಯಲ್ಲಿತ್ತು ಇದರಿಂದಾಗಿ ಮಗು ಆಗ ತಾನೆ ಜನಿಸಿದೆ […]