ಮಂಗಳೂರಿನಲ್ಲಿ 29 ಗರ್ಭಿಣಿಯರಲ್ಲಿ ಮತ್ತು ಎರಡು ನವಜಾತ ಶಿಶುಗಳಲ್ಲಿ ಕೊರೊನಾ ಸೋಂಕು

9:31 PM, Thursday, May 13th, 2021
Share
1 Star2 Stars3 Stars4 Stars5 Stars
(No Ratings Yet)
Loading...

corona ಮಂಗಳೂರು :  ಮಂಗಳೂರಿನ ಸರ್ಕಾರಿ ಲೇಡಿ ಗೋಶನ್ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕು  25 ಗರ್ಭಿಣಿಯರಲ್ಲಿ ಮತ್ತು ಹೊಸ ತಾಯಂದಿರಲ್ಲಿ ಕಾಣಿಸಿಕೊಂಡಿದ್ದು ಅವರಿಗಾಗಿ ಹೆಚ್ಚುವರಿ 14 ಹಾಸಿಗೆಗಳ ವಾರ್ಡ್ ನ್ನು ಮೀಸಲಿರಿಸಲಾಗಿದೆ.

ಈ ರೋಗಿಗಳ ಆರೋಗ್ಯದ ಮೇಲ್ವಿಚಾರಣೆಗಾಗಿ ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು ತಾಲೂಕು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಕಿರಿಯ ಆರೋಗ್ಯ ಸಹಾಯಕರ ಮೂಲಕ ಈ ರೋಗಿಗಳನ್ನು ಪರಿಶೀಲಿಸಲಾಗುತ್ತದೆ .

ಎರಡು ನವಜಾತ ಶಿಶುಗಳಿಗೆ ಸೋಂಕು ದೃಢಪಟ್ಟಿದೆ ಎಂದು ಲೇಡಿ ಗೊಸ್ಚೆನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ಎಂ.ಆರ್. ಮಾಹಿತಿ ನೀಡಿದ್ದಾರೆ.

‘ಕೋವಿಡ್ ರೋಗಿಗಳಿಗೆ ಪ್ರತ್ಯೇಕ ಕೊಠಡಿ ಮತ್ತು ಶಸ್ತ್ರಚಿಕಿತ್ಸಾ ಕೊಠಡಿ ಹೊಂದಿದ್ದು. ಈಗ ಗರ್ಭಿಣಿಯರಿಗೆ 25 ಹಾಸಿಗೆಗಳಿವೆ. ಕೋವಿಡ್-ಶಂಕಿತ ರೋಗಿಗಳಿಗೆ ನಾವು ಇನ್ನೂ 14 ಹಾಸಿಗೆಗಳನ್ನು ಸೇರ್ಪಡೆಗೊಳಿಸಿದ್ದೇವೆ. ಮೇ 1 ಮತ್ತು 12 ರ ನಡುವೆ 200 ಕ್ಕೂ ಹೆಚ್ಚು ಮಹಿಳೆಯರು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು, ಅದರಲ್ಲಿ 29 ಮಹಿಳೆಯರು ಗರ್ಭಿಣಿಯರು ಮತ್ತು ಹೊಸ ತಾಯಂದಿರಲ್ಲಿ ಪಾಸಿಟಿವ್ ಖಂಡುಬಂದಿದೆ “ಎಂದು ದುರ್ಗಾ ಪ್ರಸಾದ್ ಅವರು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English