ಮಗಳಿಗೆ ಅಕ್ರಮ ಸಂಭಂದಕ್ಕೆ ಹುಟ್ಟಿದ ನವಜಾತ ಶಿಶುವನ್ನು, ಚೂರಿ, ಬ್ಲೇಡ್ ಗಳಿಂದ ಇರಿದು ಪೊದೆಗೆ ಎಸೆದ ಅಜ್ಜ-ಅಜ್ಜಿ

8:56 PM, Saturday, October 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

infant killers ಭೋಪಾಲ್:  ಊರಿನ ಯುವಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಗಳಿಗೆ ಹುಟ್ಟಿದೆ ಎನ್ನಲಾದ ಮಗುವನ್ನು ಪಾಲಕರು ಚಾಕುವಿನಿಂದ ಇರಿದು ನಂತರ ಬ್ಲೇಡ್ ನಿಂದ ದಾಳಿ ನಡೆಸಿ ದೇವಾಲಯದ ಆವರಣ ಸಮೀಪದ ಪೊದೆ ಯಲ್ಲಿ ಇರಿಸಿದ ಪ್ರಕರಣ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಅಯೋಧ್ಯ ನಗರ ಎಂಬಲ್ಲಿ ನಡೆದಿತ್ತು .

ಆದರೆ ಆ ಮಗು ಯಾರದ್ದು ಎಂಬುದನ್ನು ಮೊದಲಿಗೆ ಪೊಲೀಸರಿಗೆ ಪತ್ತೆ ಹಚ್ಚಲು ಸವಾಲಾಗಿತ್ತು. ಕೊಲೆಗಾರನನ್ನು ಪತ್ತೆಹಚ್ಚಲು ಐದು ತಂಡಗಳ ಪೊಲೀಸ್ ಸಿಬ್ಬಂದಿಯನ್ನು ರಚಿಸಿ ಸುತ್ತಮುತ್ತಲಿನ ಹಲವಾರು ನರ್ಸಿಂಗ್ ಹೋಂಗಳ ಸಿಬ್ಬಂದಿಯನ್ನು ಪ್ರಶ್ನಿಸಲಾಯಿತು ಮತ್ತು ಆ  ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕೊನೆಗೂ ಕೊಲೆಗಾರನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

19 ವರ್ಷದ ಮಗಳಿಗೆ ಎರಡು ದಿನಗಳ ಹಿಂದೆ ಹುಟ್ಟಿದ ನವಜಾತ ಶಿಶುವನ್ನು ಬಾಲಕಿಯ ತಾಯಿ ಹತ್ಯೆಗೈದಿದ್ದಾಳೆ.  ಆಕೆಯ ಪತಿ ಪ್ರಕರಣಕ್ಕೆ ಸಹಕರಿಸಿದ್ದಕ್ಕೆ ಆತನನ್ನು ಬಂಧಿಸಲಾಗಿದೆ.

ಮಗಳ ಅಕ್ರಮ ಸಂಬಂಧ ಹೊರಬಂದ್ರೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಪಾಲಕರು ಮಗುವಿನ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಮೊದಲು ಮಗುವಿಗೆ ಚಾಕುವಿನಿಂದ ಇರಿದಿದ್ದಾರೆ. ನಂತರ ಬ್ಲೇಡ್ ನಿಂದ ದಾಳಿ ನಡೆಸಿದ್ದಾರೆ. ಮಗು ಸಾಯುತ್ತಿದ್ದಂತೆ ಅದನ್ನು ಪೊದೆ ಬಳಿ ಎಸೆದು ಹೋಗಿದ್ದಾರೆ. ಪೊದೆ ಬಳಿ ಎರಡು ದಿನಗಳ ಹಿಂದೆ ಮಗುವಿನ ಶವ ಸಿಕ್ಕಿತ್ತು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿ ಟಿವಿ ಕ್ಯಾಮರಾ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

ಪೊಲೀಸರು ಕೊಲೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ಶನಿವಾರ ದಂಪತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English