ಮಂಗಳೂರು :ಇಂದು ಬೆಳಗಿನ ಜಾವ ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದ ಟ್ರ್ಯಾಕ್ ಮದ್ಯೆ ಆಗತಾನೆ ಹುಟ್ಟಿದ ನವಜಾತ ಗಂಡು ಶಿಶುವೊಂದು ಪತ್ತೆಯಾಗಿದೆ. ಎಂದಿನಂತೆ ರೈಲನ್ನು ಪರಿಶೀಲಿಸುತ್ತಿದ್ದ ರೈಲ್ವೆಯ ಪಾರ್ಸೆಲ್ ವಿಭಾಗದ ಸಿಬ್ಬಂದಿ ರಜಾಕ್ ಎಂಬುವವರಿಗೆ ರೈಲಿನ ಟ್ರ್ಯಾಕ್ ಮಧ್ಯೆ ಮಗುವಿನ ಅಳಲು ಕೇಳಿಸಿದಾಗ ಅವರು ಕೂಡಲೇ ಈ ವಿಷಯವನ್ನು ಇತರೆ ಅಧಿಕಾರಿಗಳ ಗಮನಕ್ಕೆ ತಂದು, ಮಗುವನ್ನು ಕೂಡಲೇ ಸರಕಾರೀ ಲೇಡಿಗೋಶನ್ ಆಸ್ಪತ್ರೆಗೆ ಕೊಂಡೊಯ್ದರು. ಮಗುವಿನ ದೇಹ ರಕ್ತ ಸಿಕ್ತ ಸ್ಥಿತಿಯಲ್ಲಿತ್ತು ಇದರಿಂದಾಗಿ ಮಗು ಆಗ ತಾನೆ ಜನಿಸಿದೆ ಎಂದು ಹೇಳಲಾಗಿದೆ. ಮಗುವನ್ನು ಪರೀಕ್ಷಿಸಿದ ವೈಧ್ಯರು ಮಗು ಇನ್ನೂ ಎರಡು ವಾರಗಳ ಕಾಲ ನಿಗಾ ಘಟಕದಲ್ಲಿಡಬೇಕಾಗಬಹುದು ಎಂದಿದ್ದಾರೆ.
ಮಗು ಟ್ರ್ಯಾಕ್ ಮಧ್ಯೆ ಇದ್ದುದರಿಂದ ಮಗುವಿಗೆ ಯಾವುದೆ ಅಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ ಮಗುವು ರೈಲಿನಲ್ಲಿ ಜನಿಸಿದ್ದು ಮಗಿವನ್ನು ಹೆತ್ತ ತಾಯಿಯು ಆಗ ತಾನೆ ಕಾಸರಗೋಡಿಗೆ ತೆರಳಿದ ಪರಶುರಾಮ ಎಕ್ಸಪ್ರೆಸ್ ಟ್ರೈನಿನಲ್ಲಿ ತೆರಳಿರಬಹುದೆಂದು ಶಂಕಿಸಲಾಗಿದೆ. ಇದರಿಂದ ಪೊಲೀಸರು ಕಾಸರಗೋಡು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಕಾಸರಗೋಡಿನಲ್ಲಿ ಆಕೆಯ ಪತ್ತೆಗೆ ವ್ಯಾಪಕ ಬಲೆ ಬೀಸಲಾಗಿದೆ.
Click this button or press Ctrl+G to toggle between Kannada and English