ಫಲ್ಗುಣಿ ನದಿ : ತಪ್ಪು ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ : ತಹಶೀಲ್ದಾರ್

5:51 PM, Friday, May 26th, 2017
Share
1 Star2 Stars3 Stars4 Stars5 Stars
(No Ratings Yet)
Loading...

TP meetingಮಂಗಳೂರು  : ಗುರುಪುರದ ಫಲ್ಗುಣಿ ನದಿ ನೀರು ಕಪ್ಪಾಗಿರುವ ಬಗ್ಗೆ ಕಾಲಮಿತಿಯೊಳಗೆ ಸಮರ್ಪಕ ವರದಿ ಸಲ್ಲಿಸುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರ ಸಂಬಂಧಿತ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಇತ್ತೀಚೆಗೆ ಸಭೆ ಕರೆದು ಸೂಚಿಸಿದ್ದಾರೆ. ತಪ್ಪು ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ಮಹದೇವಯ್ಯ ಭರವಸೆ ನೀಡಿದ್ದರು.

ಫಲ್ಗುಣಿ ನದಿಗೆ ಕಟ್ಟಲಾಗಿರುವ ಮರವೂರು ಡ್ಯಾಂ ನೀರು ಕಲುಷಿತಗೊಳ್ಳಲು ಕಾರಣರಾದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿ  ಮಂಗಳೂರು ತಾಪಂ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳ ಲಾಯಿತು. ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಫಲ್ಗುಣಿ ನದಿ ನೀರು ಮತ್ತೆ ಕಪ್ಪಾಗಿದೆ. ಇಲ್ಲಿನ ನೀರು ಪ್ರಾಣಿಗಳು ಉಪಯೋಗಿಸಲು ಕೂಡ ಯೋಗ್ಯವಾಗಿಲ್ಲ ಎನ್ನುವುದು ವೈಜ್ಞಾನಿಕ ವರದಿ ತಿಳಿದು ಬಂದಿದೆ. ಸುಮಾರು 50 ಸಾವಿರ ಜನರ ಬಳಕೆಗೆ 43 ಕೋಟಿ ರೂ. ವೆಚ್ಚದಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಆದ್ದ ರಿಂದ ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಬೇಕೆಂದು ಮಳವೂರು ಗ್ರಾಪಂ ಅಧ್ಯಕ್ಷರು ಆಗ್ರಹಿಸಿದರು.

ಗುರುಪುರ ಸೇತುವೆಗೆ ತ್ಯಾಜ್ಯ ಎಸೆಯುತ್ತಿ ರುವುದನ್ನು ತಪ್ಪಿಸಲು ಅಂತಹವರನ್ನು ಪತ್ತೆ ಹಚ್ಚಲು ಸೇತುವೆ ಸಮೀಪ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.

ಗ್ರಾಮ ಲೆಕ್ಕಿಗರ ಕೊರತೆಯ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ಮಕ್ಕಳಿಗೆ ಆದಾಯ, ಜಾತಿ ಪ್ರಮಾಣ ಪತ್ರ ದಾಖಲೆ ಪಡೆಯಲು ಸಮಸ್ಯೆ ಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಸದಸ್ಯರೊಬ್ಬರ ಆಗ್ರಹಕ್ಕೆ ಪ್ರತಿಕ್ರಿಯಿಸಿದರು. ಗ್ರಾಮ ಲೆಕ್ಕಿಗರು ಇಲ್ಲದೆ ಇರುವ ಕಡೆ ಶೀಘ್ರದಲ್ಲೇ ಪರ್ಯಾಯ ವ್ಯವಸ್ಥೆ ಕಲ್ಪಿಸ ಲಾಗುವುದು. ಅಲ್ಲದೆ ಶಾಲಾ-ಕಾಲೇಜು ಮಕ್ಕ ಳಿಗೆ ಅವಶ್ಯ ಪ್ರಮಾಣಪತ್ರ ವಿತರಣೆಗೆ ಆದ್ಯತೆ ನೀಡ ಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಇದೇ ಸಂದರ್ಭ ಸರಕಾರಿ ಭೂಮಿಗಾಗಿ ಗ್ರಾಮೀಣ ಪ್ರದೇಶದಲ್ಲಿ ಕಲಂ 94 ಸಿಸಿ ಹಾಗೂ ನಗರ ಪ್ರದೇಶದಲ್ಲಿ ಕಲಂ 94 ಸಿಸಿ ಅಡಿ ಸಾರ್ವ ಜನಿಕರು ಅರ್ಜಿ ಸಲ್ಲಿಸಲು ಇರುವ ಅವಧಿ ಯನ್ನು ಎರಡು ತಿಂಗಳು ವಿಸ್ತರಿಸಲಾಗಿದೆ ಎಂದು ತಹಶೀಲ್ದಾರ್ ಮಹದೇವಯ್ಯ ಹೇಳಿದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್ ಪೂಜಾರಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ರೀಟಾ, ಸದಾನಂದ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English