26 ಪಾಸ್‍ಪೋರ್ಟ್‍ಗಳನ್ನು ಹಿಡಿದುಕೊಂಡು ದುಬೈಗೆ ಹೋಗುತ್ತಿದ್ದವನ ಬಂಧನ

12:42 PM, Thursday, August 18th, 2016
Share
1 Star2 Stars3 Stars4 Stars5 Stars
(No Ratings Yet)
Loading...

Abdulla-Pallakkanಮಂಗಳೂರು: ಒಂದು ಪಾಸ್‍ಪೋರ್ಟ್ ಪಡೆಯಬೇಕಾದರೆ ದಿನಪೂರ್ತಿ ಸರತಿಯಲ್ಲಿ ನಿಲ್ಲಬೇಕು. ತಿಂಗಳುಗಟ್ಟಲೆ ಕಾಯಬೇಕು. ಅಂಥದ್ದರಲ್ಲಿ 26 ಬೇರೆಯವರ ಪಾಸ್‍ಪೋರ್ಟ್‍ಗಳನ್ನು ಹಿಡಿದುಕೊಂಡು ದುಬೈಗೆ ಹೋಗುತ್ತಿದ್ದವನನ್ನು ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಿಡಿದು ಬಜ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಲ್ಲಕನ್ ಅಬ್ದುಲ (43) ಎಂಬಾತ ಆರೋಪಿ. 26 ಪಾಸ್‍ಪೋರ್ಟ್‍ಗಳ ಪೈಕಿ ಎರಡು ಅಮೆರಿಕಾಗೆ ಸೇರಿದ್ದಾಗಿವೆ. ಕಣ್ಣೂರಿನ ತಾಲಿಪ್ಪರಂಬು ನಿವಾಸಿಯಾದ ಮಹಮ್ಮದ್ ಪನವಪಿಲ್ ದುಬೈಯ ಕದಕ್-ಉತ್-ಲ್ಲ ಎಂಬಾತನ ಮಾಲೀಕತ್ವದ ಟ್ರಾವೆಲ್ ಏಜೆನ್ಸಿಯಲ್ಲಿ ಉದ್ಯೋಗದಲ್ಲಿದ್ದ. ಭಾರತದಿಂದ ವಿಶೇಷ ಪ್ಯಾಕೇಜ್‍ನಡಿ ಹಜ್‍ಗೆ ಹೋಗಿ ದುಬೈಗೆ ಬರುವವರ 26 ಪಾಸ್‍ಪೋರ್ಟ್‍ಗಳು ಈತನ ಕೈಯಲ್ಲಿದ್ದವು.

ಇದರ ವೆರಿಫಿಕೇಶನ್‍ಗಾಗಿ ಮಹಮ್ಮದ್ ಆಗಸ್ಟ್ 5ರಂದು ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ್ದಾನೆ. ಬಳಿಕ ದುಬೈನಲ್ಲಿರುವ ಝಮ್‍ಝಮ್ ಎಂಬ ಟ್ರಾವೆಲ್ ಏಜೆನ್ಸಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಇಂತಹ ಪ್ಯಾಕೇಜ್ ಅವಧಿ ಮುಗಿದಿರುವುದರಿಂದ ಇದೀಗ ಯಾವುದೇ ವಿಶೇಷ ಪ್ಯಾಕೇಜ್ ಇಲ್ಲ ಎಂದು ಹೇಳಿದ್ದಾರೆ. ಈ ಸಲುವಾಗಿ ಇಂದು ಮಹಮ್ಮದ್ ಮಂಗಳೂರು ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣ ಬೆಳೆಸಿದ್ದ.

ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಾಸ್‍ಪೋರ್ಟ್ ಹೊಂದಿರುವುದು ಅಕ್ರಮವಾಗಿರುವುದರಿಂದ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದಿದ್ದರು. ಕೇರಳದ ಕೆಲ ಯುವಕರು ಐಸಿಸ್‍ನಂತಹ ಉಗ್ರ ಸಂಘಟನೆ ಸೇರಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರ ರೂಪ ಪಡೆದುಕೊಳ್ಳುತ್ತಿದೆ. ಸದ್ಯ ಬಜ್ಪೆ ಪೊಲೀಸರು ಈತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English