ಮಂಗಳೂರು: ಡಿ.ವೈ.ಎಫ್.ಐ ನೇತೃತ್ವದಲ್ಲಿ ಜೈಲ್ ರೋಡ್ ನಿಂದ ಏರ್ ಇಂಡಿಯಾ ಕಛೇರಿ ತನಕ ಪ್ರತಿಭಟನಾ ಮೆರವಣಿಗೆ ನಿನ್ನೆ ಬೆಳಿಗ್ಗೆ ನಡೆಯಿತು.
ಬಜಪೆಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಾಂಟ್ರಿಯಲ್ ಒಪ್ಪಂದದ ಪ್ರಕಾರ ನ್ಯಾಯಯುತವಾದ ಪರಿಹಾರ ಸಿಗಬೇಕೆಂದು ಆಗ್ರಹಿಸಿ ಬ್ರಹತ್ ಏರ್ ಇಂಡಿಯಾ ಕಛೇರಿ ಚಲೋ ಜರಗಿತು.
ಕಾಸರಗೋಡು ಲೋಕಸಭಾ ಸದಸ್ಯ ಪಿ. ಕರುಣಾಕರನ್ ಸಭೆಯನ್ನು ಉದ್ಘಾಟಿಸಿದರು , ಬಳಿಕ ಮಾತನಾಡಿದ ಅವರು ಸಂತ್ರಸ್ತರಿಗೆ ಆಗಿರುವ ಅನ್ಯಾಯದ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು. ಏರ್ ಇಂಡಿಯಾ ದುರಂತದ ದಿನ ನಾಗರಿಕ ವಿಮಾನ ಯಾನ ಸಚಿವ ಪ್ರಫುಲ್ ಪಾಟೇಲ್ ಅವರು 10 ಲಕ್ಷ ರೂ. ಮಧ್ಯಂತರ ಪರಿಹಾರ, ಹಾಗೂ 76 ಲಕ್ಷ ರೂ. ಅಂತಿಮ ಪರಿಹಾರ ನೀಡುವುದಾಗಿ ಮಾದ್ಯಮದ ಮುಂದೆ ಹೇಳಿದ್ದರು. ಇಂದು ಏರ ಇಂಡಿಯಾ ಅಧಿಕಾರಿಗಳು ವಿಮಾ ಕಂಪೆನಿಗಳ ಜೊತೆ ಸೇರಿ ದುರಂತದಲ್ಲಿ ಮಡಿದ ಕುಟುಂಬದವರನ್ನು ವಂಚಿಸುತ್ತಿದ್ದಾರೆ ಎಂದು ಅವರು ಹೇಳಿದರು. ಈ ಬಗ್ಗೆ ಸರಕಾರ ವಿಮಾ ಕಂಪೆನಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಅಂತರಾಷ್ಟ್ರೀಯಮಾನದಂಡದ ಪ್ರಕಾರ ನ್ಯಾಯಯುತವಾದ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಉಪಾಧ್ಯಕ್ಷ ನಾರಾಯಣನ್ ಮಾತನಾಡಿ, ಏರ್ ಇಂಡಿಯಾ ಮತ್ತು ವಿಮಾ ಕಂಪೆನಿಗಳು ಸಂತ್ರಸ್ತ ಕುಟುಂಬದ ಅಸಹಾಯಕತೆ ಹಾಗೂ ತಿಳುವಳಿಕೆ ಕೊರತೆಯ ಲಾಭ ಪಡೆಯುತ್ತಿದೆ. ಎಂದು ಅವರು ಆರೋಪಿಸಿದರು.
ಡಿ.ವೈ.ಎಫ್.ಐ ಕಾಸರಗೋಡು ಜಿಲ್ಲಾ ಅಧ್ಯಕ್ಷ ಸಾಬು ಅಬ್ರಹಾಂ ಅದ್ಯಕ್ಷತೆ ವಹಿಸಿದ್ದರು. ಡಿ.ವೈ.ಎಫ್.ಐ ಅಖಿಲ ಭಾರತ ಉಪಾಧ್ಯಕ್ಷ ಟಿ.ವಿ. ರಾಜೇಶ್, ಕೇಂದ್ರ ಸಮಿತಿ ಸದಸ್ಯ ಪಿ.ವಿ ರಮೇಶನ್, ಸಿ.ಪಿ.ಐ (ಎಂ) ದ.ಕ ಜಿಲ್ಲಾ ಕಾರ್ಯದರ್ಶಿ ಬಿ. ಮಾಧವ ಮುಂತಾದವರು ಮಾತನಾಡಿದರು.
ಡಿ.ವೈ.ಎಫ್.ಐ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದಯಾನಂದ ಶೆಟ್ಟಿ, ಮುಖಂಡರಾದ ಬಿ.ಕೆ. ಇಮ್ತಿಯಾಜ್, ಮಹಾಬಲ, ಗುರುಚರಣ್ ರಾಜ್, ವಿಜಯ ಕುಮಾರ್ ಹೆಗ್ಡೆ ಪ್ರಮೀಳಾ ಕೆ. ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English