ಹೈದರಾಬಾದ್: ಒಲಿಂಪಿಕ್ಸ್ ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಗೆದ್ದು, ಸೋಮವಾರ ತಾಯ್ನಾಡಿಗೆ ಆಗಮಿಸಿರುವ ಪಿ.ವಿ. ಸಿಂಧು ಅವರನ್ನು ಹೈದರಾಬಾದ್ನಲ್ಲಿ ಸಂಭ್ರಮದಿಂದ ಸ್ವಾಗತಕೋರಿ, ಮೆರವಣಿಗೆ ನಡೆಸಲಾಯಿತು.
ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಿಗ್ಗೆ ಬಂದಿಳಿದ ಸಿಂಧು ಹಾಗೂ ಕೋಚ್ ಪುಲ್ಲೇಲ ಗೋಪಿಚಂದ್ ಅವರನ್ನು ಸ್ವಾಗತಿಸಿ, ಹೂವುಗಳಿಂದ ಅಲಂಕರಿಸಿರುವ ತೆರೆದ ವಾಹನದಲ್ಲಿ ವಿಮಾನನಿಲ್ದಾಣದಿಂದ ಗಚ್ಚಿಬೌಲಿ ಮೈದಾನದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು.
ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ತಂದೆ ಪಿ.ವಿ. ರಮಣ ಹಾಗೂ ಪಿ. ವಿಜಯಾ ಮತ್ತು ತೆಲಂಗಾಣ ಸರ್ಕಾರದ ಸಚಿವರು ಸೇರಿದಂತೆ ಉಪ ಮುಖ್ಯಮಂತ್ರಿ ಹಾಜರಿದ್ದು, ಸಿಂಧು ಹಾಗೂ ಕೋಚ್ ಪುಲ್ಲೇಲ ಗೋಪಿಚಂದ್ ಅವರನ್ನು ಸ್ವಾಗತಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದ ಸಾವಿರಾರು ಜನ, ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಸಿಂಧುಗೆ ಜಯಘೋಷ ಕೂಗಿ, ಚಪ್ಪಾಳೆತಟ್ಟಿ ಹರ್ಷ ವ್ಯಕ್ತಪಡಿಸಿದರು. ಅಷ್ಟೇ ಅಭಿಮಾನದಿಂದ ಸಿಂಧು ಬೆಳ್ಳಿ ಪದಕವನ್ನು ತೋರಿಸುತ್ತಾ ಎಲ್ಲರತ್ತ ಕೈ ಬೀಸಿದರು.
ಗಚ್ಚಿಬೌಲಿ ಮೈದಾನದಲ್ಲಿ ಅದ್ದೂರಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
Click this button or press Ctrl+G to toggle between Kannada and English