ಎಂಎಸ್‌ಇಝಡ್ ಕಾಮಗಾರಿ ವಿರೋದಿಸಿ ಪೆರ್ಮುದೆ ಗ್ರಾಮಸ್ಥರಿಂದ ಪಂಚಾಯತ್ ಮುತ್ತಿಗೆ

3:39 PM, Friday, July 22nd, 2011
Share
1 Star2 Stars3 Stars4 Stars5 Stars
(No Ratings Yet)
Loading...

Permude Grama Panchayathಮಂಗಳೂರು : ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡುಬಿ ಪದವಿನಲ್ಲಿ  ಮಂಗಳೂರು ವಿಶೇಷ ಆರ್ಥಿಕ ವಲಯ ದಿಂದ ಅಕ್ರಮವಾಗಿ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ಗುರುವಾರ ಬೆಳಗ್ಗೆ  ಗ್ರಾಮಸ್ಥರು ಪೆರ್ಮುದೆ ಗ್ರಾಪಂಗೆ ಮುತ್ತಿಗೆ ಹಾಕಿದರು.

ಸೆಝ್‌ನ ದ್ವಿತೀಯ ಹಂತಕ್ಕಾಗಿ ಅಧಿಸೂಚನೆಗೊಂಡಿದ್ದ 2,035 ಎಕರೆ ಯಲ್ಲಿ ಸರಕಾರ ಇತ್ತೀಚೆಗೆ 1988 ಎಕರೆಯ ಅಧಿಸೂಚನೆಯನ್ನು ರದ್ದು ಗೊಳಿಸಿತ್ತು. ಅಧಿಸೂಚನೆ ರದ್ದುಗೊಳ್ಳದ 38 ಎಕರೆ ಭೂಮಿಯಲ್ಲಿ ಕಳೆದ ವರ್ಷ ಎಂಎಸ್‌ಇಝಡ್ ರಸ್ತೆಗೆಂದು ಹೇಳಿ ಸ್ವಾಧೀನಪಡಿಸಿದ್ದ ನಾಲ್ಕು ಎಕರೆ ಭೂಮಿಯೂ ಸೇರಿದೆ. ಸರಕಾರದಿಂದ ಅಧಿಸೂಚನೆ ರದ್ದು ಆದೇಶ ಹೊರಬಿದ್ದ ಎರಡು ದಿನಗಳಲ್ಲೇ ಎಂಎಸ್‌ಇಝಡ್ ಈ ಪ್ರದೇಶದಲ್ಲಿ ಕಾಮಗಾರಿ ಆರಂಭಿಸಿತ್ತು. ಆ ಪ್ರದೇಶ ಅಧಿಸೂಚನೆಗೆ ಒಳಪಟ್ಟ ಪ್ರದೇಶವಾದ್ದರಿಂದ ಕಾನೂನು ಪ್ರಕಾರವಾಗಿಯೇ ಅಲ್ಲಿ ಕಾಮಗಾರಿ ನಡೆಸುತ್ತಿದ್ದೇವೆ ಎಂದು ಎಂಎಸ್‌ಇ ಝಡ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವ ವೇಳೆ ಸಂಬಂಧಪಟ್ಟ ಗ್ರಾ.ಪಂ.ನಿಂದ ಪರವಾನಿಗೆ ಪಡೆಯ ಬೇಕೆಂಬ ಕನಿಷ್ಠ ಮಾಹಿತಿಯೂ ಇಲ್ಲದ ರೀತಿಯಲ್ಲಿ ಅಕ್ರಮವಾಗಿ ಎಂಎಸ್‌ಇ ಝಡ್ ಕಾಮಗಾರಿ ಆರಂಭಿಸಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ‘‘ಕುಡುಬಿಪದವಿನಲ್ಲಿ ಎಂಎಸ್‌ಇ ಝಡ್ ನಡೆಸುತ್ತಿರುವ ಕಾಮಗಾರಿಗಾಗಿ ಅದು ಪಂಚಾಯತ್‌ನಿಂದ ಯಾವುದೇ ಲೈಸೆನ್ಸ್ ಪಡೆದಿಲ್ಲ.ಈ ಬಗ್ಗೆ ಎಂಎಸ್‌ಇ ಝಡ್‌ಗೆ ನೋಟಿಸ್ ನೀಡಿದ್ದೇವೆ.ಈ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೂ ತಿಳಿಸಲಾಗಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಇಂದು ನಾನು ಖುದ್ದಾಗಿ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ್ದೇನೆ. ಬಜ್ಪೆ ಇನ್ಸ್‌ಪೆಕ್ಟರ್ ಕೂಡಾ ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ್ದಾರೆ’’ ಎಂದು ಪೆರ್ಮುದೆ ಗ್ರಾಪಂ ಕಾರ್ಯದರ್ಶಿ ಮುರ್ನಾಲು ತಿಳಿಸಿದ್ದಾರೆ. ಅಧಿಸೂಚನೆ ರದ್ದುಗೊಂಡ ಕಾಮಗಾರಿ ಶುರುವಿಟ್ಟುಕೊಂಡ ಎಂಎಸ್‌ಇಝಡ್ ಈ ಬಗ್ಗೆ ಸ್ಥಳೀಯ ಕುಡುಬಿಗಳ ವಿರೋಧವನ್ನೂ ಲೆಕ್ಕಿಸಿರಲಿಲ್ಲ. ಹಿಗ್ಗಾ ಮುಗ್ಗವಾಗಿ ಜೆಸಿಬಿ ನುಗ್ಗಿಸಿದ ಪರಿಣಾಮವಾಗಿ ಕುಡುಬಿಗಳು ಬೆಳೆದಿದ್ದ ಸಾಕಷ್ಟು ತರಕಾರಿ ಬೆಳೆಗಳು ಮಣ್ಣು ಪಾಲಾಗಿತ್ತು. ಇದು ಕುಡುಬಿಗಳು ಮಾತ್ರವಲ್ಲದೆ ಸ್ಥಳೀಯರನ್ನೂ ರೊಚ್ಚಿ ಗೆಬ್ಬಿಸಿದ್ದು, ಪಂಚಾಯತ್‌ಗೆ ಮುತ್ತಿಗೆ ಹಾಕುವ ಮೂಲಕ ಸ್ಥಳೀಯರು ಇಂದು ತಮ್ಮ ವಿರೋಧ ವ್ಯಕ್ತಪಡಿಸಿದರು.

ಅಕ್ರಮ ಕಾಮಗಾರಿಯನ್ನು ನಿಲ್ಲಿಸು ವಂತೆ ಆಗ್ರಹಿಸಿ ಪಂಚಾಯತ್‌ನ ನಾಲ್ವರು ಸದಸ್ಯರು ಒತ್ತಡ ಹೇರಿದ ಕಾರಣ ಪಂಚಾಯತ್ ಕಾರ್ಯದರ್ಶಿ ತಕ್ಷಣ ಇಂದು ಎಂಎಸ್‌ಇಝಡ್‌ಗೆ ನೋಟಿಸ್ ಜಾರಿಗೊಳಿಸಿದರು. ಪರವಾ ನಿಗೆ ಇಲ್ಲದೆ ಕಾಮಗಾರಿ ನಡೆಸಲು ಬಿಡಲಾಗದು ಎಂದು ಗ್ರಾಮಸ್ಥರು ಪಟ್ಟುಹಿಡಿದಾಗ ಕಾಮಗಾರಿಯಲ್ಲಿ ನಿರತವಾಗಿದ್ದ ಯಂತ್ರಗಳು ತಮ್ಮ ಅಬ್ಬರವನ್ನು ನಿಲ್ಲಿಸಿದವು. ಕುಡುಬಿಪದವಿನ ನಾಲ್ಕು ಎಕರೆ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಎಂಎಸ್‌ಇಝಡ್ ಗ್ರಾಪಂನಿಂದ ಯಾವುದೇ ಪರವಾನಿಗೆ ಪಡೆದಿಲ್ಲವಾದ್ದರಿಂದ ತಕ್ಷಣ ಕಾಮಗಾರಿ ನಿಲ್ಲಿಸುವಂತೆ ಪೆರ್ಮುದೆ ಗ್ರಾಪಂನಿಂದ ಎಂಎಸ್‌ಇಝಡ್‌ಗೆ ಗುರುವಾರ ನೋಟಿಸ್ ಜಾರಿಗೊಳಿಸಲಾಯಿತು. ಮಾತ್ರವಲ್ಲದೆ ಗ್ರಾಪಂ ಕಾರ್ಯದರ್ಶಿ ಮುರ್ನಾಲು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English