ಮಂಗಳೂರು: `ಸ್ತ್ರೀಲೋಲರನ್ನು ಶ್ರೀಕೃಷ್ಣ’ ಎಂದು ಕರೆಯುತ್ತಿರುವುದು ವಿಷಾದಕರ ಎಂದು ಕರ್ನಾಟಕ ಸರ್ಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕಿ ಶಕುಂತಲಾ ಟಿ. ಶೆಟ್ಟಿ ಹೇಳಿದ್ದಾರೆ.
ದ.ಕ. ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಇಂದು ನಗರದ ಪುರಭವನದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಶ್ರೀಕೃಷ್ಣ ಹೆಣ್ಣುಮಕ್ಕಳ ರಕ್ಷಕ. ಅವನು ಸ್ತ್ರೀಯನ್ನು ಮಾತೃ ಸ್ವರೂಪವಾಗಿ ನೋಡಿದವನು.
ಹೆಣ್ಣು ಎಂದರೆ ಪವಿತ್ರ ಎಂದು ಸಮಾಜಕ್ಕೆ ಸಂದೇಶ ಕೊಟ್ಟವನು. ಆದರೆ ಸ್ತ್ರೀಲೋಲರನ್ನು ಶ್ರೀ ಕೃಷ್ಣ ಎಂದು ಕರೆಯುತ್ತಿರುವುದು ವಿಷಾದನೀಯ ಎಂದರು.
ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಕೃಷ್ಣ ಜಯಂತಿಯ ಸಂದೇಶ ನೀಡಿದರು.
Click this button or press Ctrl+G to toggle between Kannada and English