ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Friday, September 17th, 2021
Shobha Karandlaje

ಉಡುಪಿ : ಯಾವುದೇ ಸಮುದಾಯ- ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ, ದೇವಸ್ಥಾನ, ಮಸೀದಿ, ಚರ್ಚುಗಳು ನಮ್ಮ ಶ್ರದ್ಧಾ ಕೇಂದ್ರಗಳಾಗಿವೆ ಅವುಗಳ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಉಡುಪಿಯಲ್ಲಿಂ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು ಅಕ್ರಮ ಸ್ಥಳದಲ್ಲಿ ಶೃದ್ಧಾ ಕೇಂದ್ರಗಳಿದ್ದರೆ ಪೂರ್ವ ಸೂಚನೆ ನೀಡಿ, ಸ್ಥಳೀಯ ಜನರ ಮನವೊಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಮಾಡುವ ಬಗ್ಗೆ ಸರಕಾರ ಯೋಚಿಸಬೇಕು ಎಂದು ಅವರು ಮನವಿ ಮಾಡಿದರು. ಜನರ ನಂಬಿಕೆ, ಭಕ್ತಿ  ಭಾವನೆಗೆ ನೋವಾದಾಗ […]

ಕೊರೋನಾದ ನಡುವೆ ದೀಪಾವಳಿಯನ್ನು ಆಚರಿಸುವುದು ಹೇಗೆ ?

Friday, November 13th, 2020
shail ahet

ಮಂಗಳೂರು  : ಕೊರೋನಾದ ನಡುವೆ ದೀಪಾವಳಿಯನ್ನು ಆಚರಿಸುವುದರೊಂದಿಗೆ ಸರಳತೆ ಮತ್ತು ಎಚ್ಚರಿಕೆ ಪಾಠವನ್ನು ನಾವು ಕಲಿಯಬೇಕಿದೆ.  ಈ ಬಾರಿ ದೀಪಾವಳಿಯನ್ನು ಆಚರಿಸುವಾಗ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವುದರೊಂದಿಗೆ ಪರಿಸರಕ್ಕೆ ಹಾನಿಯಾಗದ ಹಸಿರು ಪಟಾಕಿಗಳನ್ನು ಸುಡಲು ಸರಕಾರ ಆದೇಶಿಸಿದೆ. ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಈ ವರ್ಷ ದೀಪಾವಳಿಯನ್ನು ನವೆಂಬರ್‌ 14 ರಿಂದ 16 ರವರೆಗೆ  ಆಚರಿಸಲಾಗುತ್ತಿದೆ. ದೀಪಗಳ ಹಬ್ಬ ಎಂದು ಕರೆಯಲಾಗುವ ಈ ಹಬ್ಬವು ಚಂದ್ರಮಾನ ಪಂಚಾಂಗದ ಪ್ರಕಾರ ಕಾರ್ತಿಕ ಮಾಸದಲ್ಲಿ ಅಂದರೆ […]

‘ಕೊರೋನಾ ದಂತಹ ಆಪತ್ಕಾಲದಲ್ಲಿ ‘ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ರಾತ್ರಿ 12 ಗಂಟೆಗೆ ಹೇಗೆ ಮಾಡಬೇಕು ?

Tuesday, August 11th, 2020
krishnanshtami

ಪ್ರತಿವರ್ಷ ಭಾರತದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಉತ್ಸವವನ್ನು ಆಚರಿಸುವಾಗ ಪ್ರಾಂತಗಳಿಗನುಸಾರ ಉತ್ಸವವನ್ನು ಆಚರಿಸುವ ಪದ್ಧತಿಯಲ್ಲಿ ಭಿನ್ನತೆ ಇರುತ್ತದೆ. ಉತ್ಸವದ ನಿಮಿತ್ತ ಬಹಳಷ್ಟು ಜನರು ಒಟ್ಟು ಸೇರಿ ಭಕ್ತಿಭಾವದಿಂದ ಈ ಉತ್ಸವವನ್ನು ಆಚರಿಸುತ್ತಾರೆ. ಈ ವರ್ಷ ಕೊರೋನಾ ವಿಷಾಣುಗಳ ಸಂಕಟದಿಂದಾಗಿ ಸಂಚಾರ ಸಾರಿಗೆ ನಿರ್ಬಂಧವಿದ್ದುದರಿಂದ ಮನೆಯಿಂದ ಹೊರಗೆ ಬರಲು ಅನೇಕ ಬಂಧನಗಳಿವೆ. ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಈ ಉತ್ಸವವನ್ನು ಆಚರಿಸುವಲ್ಲಿ ಮಿತಿ ಬಂದಿದೆ. ಕೊರೋನಾ ವೈರಾಣುಗಳ ಹರಡುವಿಕೆಯಿಂದಾಗಿ […]

ತನಗಾಗಿ ಬದುಕುವವನ ಬದುಕು ನಿಷ್ಪ್ರಯೋಜಕ : ಖ್ಯಾತ ವಾಗ್ಮಿ ಶ್ರೀಕೃಷ್ಣ

Saturday, January 11th, 2020
alvas

ಮೂಡುಬಿದಿರೆ : ಯಾರು ಇತರರಿಗಾಗಿ ಬದುಕುತ್ತಾನೋ ಅವನದೆ ನಿಜವಾದ ಬದುಕು. ತನಗಾಗಿ ಬದುಕುವವನ ಬದುಕು ನಿಷ್ಪ್ರಯೋಜಕ ಎಂದು ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯ ಹೇಳಿದರು. ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಪಿಯುಸಿ ವಾಣಿಜ್ಯ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭ ಹಾಗೂ ವಿವೇಕಾನಂದ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿದ್ಯಾರ್ಥಿ ಜೀವನವು ಬ್ರಹ್ಮಚರ್ಯದಿಂದ ಕೂಡಿರಬೇಕು. ಆಗ ಮಾತ್ರ ಏಕಾಗ್ರತೆಯಿಂದ ಕಲಿಯಲು ಸಾಧ್ಯ. ನಾವು ಬದುಕುವ ದಿನಗಳಷ್ಟು ವಿವೇಕಾನಂದರಂತೆ ಎಲ್ಲರಿಗೂ ಮಾದರಿಯಾಗಿ ಜೀವಿಸಬೇಕು […]

ವಿದ್ವತ್ ಮೇಲೆ ಹಲ್ಲೆ ಪ್ರಕರಣ: 3ನೇ‌ ಆರೋಪಿ ಶ್ರೀಕೃಷ್ಣನಿಂದ ವಿದ್ವತ್​ಗೆ ನಿರಂತರ ಕರೆ?

Thursday, November 22nd, 2018
nalapad

ಬೆಂಗಳೂರು: ವಿದ್ವತ್ ಮೇಲೆ ನಲಪಾಡ್ ಗ್ಯಾಂಗ್ ಯುಬಿ ಸಿಟಿಯಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಶ್ರೀಕೃಷ್ಣ ಪ್ರಕರಣದಲ್ಲಿ ರಾಜಿ ಮಾಡಿಕೋ ಎಂದು ಪದೇ ಪದೆ ವಿದ್ವತ್ಗೆ ಕರೆ ಮಾಡುತ್ತಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇದರಿಂದ ವಿದ್ವತ್ ತನಗೆ ಜೀವ ಬೆದರಿಕೆ ಇದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಈ ಹಿನ್ನೆಲೆ ವಿದ್ವತ್ಗೆ ಭದ್ರತೆ ನೀಡುವಂತೆ ಸಂಜಯ್ ನಗರ ಪೊಲೀಸರಿಗೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಜೊತೆಗೆ ಆರೋಪಿ […]

ಶ್ರೀಕೃಷ್ಣ ವರ್ಣ ವೈಭವ ಚಿತ್ರ ರಚನಾ ಸ್ಪರ್ಧೆ

Thursday, August 23rd, 2018
sri krishna vesha

ಮಂಗಳೂರು : ಶ್ರೀಕೃಷ್ಣ ವೇಷಸ್ಪರ್ಧೆ ರಾಷ್ಟ್ರೀಯ ಮಕ್ಕಳ ಉತ್ಸವದ ಅಂಗವಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಸೆಪ್ಟೆಂಬರ್ 02ಭಾನುವಾರ ಬೆಳಗ್ಗೆ0.30ಕ್ಕೆ ಚಿತ್ರರಚನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಶಿಶು (ಕೆ.ಜಿ. ವಿಭಾಗ), ಬಾಲ (1 ರಿಂದ 3ನೇ ತರಗತಿ), ಬಾಲ ಕಿಶೋರ (4ರಿಂದ 7ನೇ ತರಗತಿ) ಕಿಶೋರ (8ರಿಂದ 10ನೇ ತರಗತಿ), ತರುಣ (ಪಿಯುಸಿ/ತತ್ಸಮಾನ) ಮತ್ತು ಮುಕ್ತ ಸಾರ್ವಜನಿಕ ವಿಭಾಗವಿರುವುದು. ಶಿಶು ವಿಭಾಗ ಮತ್ತು ಬಾಲ ವಿಭಾಗದಲ್ಲಿ ಕೊಟ್ಟ ಚಿತ್ರಕ್ಕೆ ಬಣ್ಣ […]

ಈ ಬಾರಿ ಧರ್ಮ ಅಧರ್ಮದ ನಡುವಿನ ಚುನಾವಣೆ: ಡಿ.ಕೆ. ಶಿವಕುಮಾರ್

Wednesday, May 2nd, 2018
D.k-.shivakumar

ಉಡುಪಿ: ಈ ಬಾರಿ ಧರ್ಮ ಅಧರ್ಮದ ನಡುವಿನ ಚುನಾವಣೆ ನಡೆಯುತ್ತಿದೆ. ನಮ್ಮದು ಧರ್ಮ- ಬಿಜೆಪಿದ್ದು ಅಧರ್ಮ ಎಂದು ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಶ್ರೀಕೃಷ್ಣ ಒಬ್ಬ ರಾಜಕಾರಣಿ. ರಾಜಕಾರಣಿಯನ್ನು ದೇವರ ಹೆಸರಲ್ಲಿ ಧರ್ಮ ಸ್ಥಾಪನೆಗೆ ಪ್ರತಿಷ್ಠಾಪಿಸಲಾಗಿದೆ. ಮಠಕ್ಕೆ ಯಾರು ಬಂದ್ರು ಯಾರು ಬರಲಿಲ್ಲ ಮುಖ್ಯವಲ್ಲ. ನನಗೆ ಕೃಷ್ಣನ ಮೇಲೆ ಬಹಳ ನಂಬಿಕೆಯಿದೆ ಎಂದು ಹೇಳಿದರು. ಪಕ್ಷದ ಪರವಾಗಿ, ವೈಯುಕ್ತಿಕವಾಗಿ ಸರ್ಕಾರದ ಪರವಾಗಿ ಬಂದಿದ್ದೇನೆ. ಭಕ್ತನ -ಭಗವಂತನ ವ್ಯವಹಾರ ನಮ್ಮಿಬ್ರಿಗೆ […]

ಜ. 18ಕ್ಕೆ ನಾಲ್ಕೂವರೆ ಲಕ್ಷ ತುಳಸಿ ಗಿಡ

Wednesday, January 3rd, 2018
basil-plant

ಉಡುಪಿ: ಭಾವೀ ಪರ್ಯಾಯ ಪೀಠ ಅಲಂಕರಿಸಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸಂಕಲ್ಪ ಮಾಡಿರುವ ಪ್ರತಿದಿನ ಲಕ್ಷ ತುಳಸಿ ಯಜ್ಞಕ್ಕಾಗಿ ತುಳಸಿ ವನ ನಿರ್ಮಾಣದ ಕಾರ್ಯ ವೇಗವಾಗಿ ಸಾಗುತ್ತಿದೆ. ಉಡುಪಿಯ ಪೆರಂಪಳ್ಳಿಯಲ್ಲಿ ಸುಮಾರು 6.5 ಎಕ್ರೆ ಪ್ರದೇಶದಲ್ಲಿ ತುಳಸಿ ವನ ನಿರ್ಮಾಣವಾಗುತ್ತಿದ್ದು, ಪ್ರತಿದಿನ ಇಲ್ಲಿ ತುಳಸಿ ಗಿಡ ನೆಡುವ ಹಾಗೂ ಬೀಜ ಹಾಕುವ ಕಾಯಕ ನಡೆಯುತ್ತಿದೆ. ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣನಿಗೆ ನಿರಂತರ 1 ಲಕ್ಷ ತುಳಸಿ ದಳದ ಯಜ್ಞ ಪ್ರಥಮ ಬಾರಿಗೆ ನಡೆಯಲಿದೆ. ಈ ಯಜ್ಞಕ್ಕಾಗಿ […]

ಶ್ರೀರಾಮನೂ ಮಾಂಸಾಹಾರಿ ಶ್ರೀಕೃಷ್ಣನೂ ಮಾಂಸಾಹಾರಿ: ಉಡುಪಿಯಲ್ಲಿ ಪ್ರಮೋದ್ ಮಧ್ವರಾಜ್ ವಿವಾದಾತ್ಮಕ ಹೇಳಿಕೆ

Monday, October 17th, 2016
Pramod Madhwaraj

ಉಡುಪಿ: ಶ್ರೀಕೃಷ್ಣನೂ ಮಾಂಸಾಹಾರಿ, ಶ್ರೀರಾಮನೂ ಮಾಂಸಾಹಾರಿ ಎಂದು ಉಡುಪಿಯಲ್ಲಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಆಹಾರ ಪದ್ಧತಿ ಬಗ್ಗೆ ಚರ್ಚೆ ಆಗುತ್ತಿದೆ. ಸಾಕಷ್ಟು ಮಂದಿ ವಿದ್ವಾಂಸರಿದ್ದಾರೆ. ಈ ಬಗ್ಗೆ ಚರ್ಚೆ ಆಗಲಿ. ಉದ್ದೇಶಪೂರ್ವಕವಾಗಿ ಈ ಮಾತನ್ನು ಹೇಳಿದ್ದೇನೆ ಎಂದರು. ಮಹಾಸಾಧನೆ ಮಾಡಲು ಜಾತಿ ಮುಖ್ಯ ಅಲ್ಲ. ಮಹಾಭಾರತ ಬರೆದ ವ್ಯಾಸರಾಯರು ಮದುವೆ ಆಗದ‌ ಮೀನುಗಾರ ಮಹಿಳೆಯ ಪುತ್ರ. ಈ ಕಾಲದಲ್ಲಿ ಅಂತವರು ಇರುತ್ತಿದ್ದರೆ ಸಮಾಜ […]

ಸ್ತ್ರೀಲೋಲರನ್ನು ಶ್ರೀಕೃಷ್ಣ ಎಂದು ಕರೆಯುತ್ತಿರುವುದು ವಿಷಾದಕರ: ಶಕುಂತಲಾ ಟಿ. ಶೆಟ್ಟಿ

Friday, August 26th, 2016
Shakunthala-shetty

ಮಂಗಳೂರು: `ಸ್ತ್ರೀಲೋಲರನ್ನು ಶ್ರೀಕೃಷ್ಣ’ ಎಂದು ಕರೆಯುತ್ತಿರುವುದು ವಿಷಾದಕರ ಎಂದು ಕರ್ನಾಟಕ ಸರ್ಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕಿ ಶಕುಂತಲಾ ಟಿ. ಶೆಟ್ಟಿ ಹೇಳಿದ್ದಾರೆ. ದ.ಕ. ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಇಂದು ನಗರದ ಪುರಭವನದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಶ್ರೀಕೃಷ್ಣ ಹೆಣ್ಣುಮಕ್ಕಳ ರಕ್ಷಕ. ಅವನು ಸ್ತ್ರೀಯನ್ನು ಮಾತೃ ಸ್ವರೂಪವಾಗಿ ನೋಡಿದವನು. ಹೆಣ್ಣು ಎಂದರೆ ಪವಿತ್ರ ಎಂದು ಸಮಾಜಕ್ಕೆ ಸಂದೇಶ ಕೊಟ್ಟವನು. ಆದರೆ ಸ್ತ್ರೀಲೋಲರನ್ನು ಶ್ರೀ […]