ಮೂಡುಬಿದಿರೆ : ಯಾರು ಇತರರಿಗಾಗಿ ಬದುಕುತ್ತಾನೋ ಅವನದೆ ನಿಜವಾದ ಬದುಕು. ತನಗಾಗಿ ಬದುಕುವವನ ಬದುಕು ನಿಷ್ಪ್ರಯೋಜಕ ಎಂದು ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯ ಹೇಳಿದರು.
ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಪಿಯುಸಿ ವಾಣಿಜ್ಯ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭ ಹಾಗೂ ವಿವೇಕಾನಂದ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿ ಜೀವನವು ಬ್ರಹ್ಮಚರ್ಯದಿಂದ ಕೂಡಿರಬೇಕು. ಆಗ ಮಾತ್ರ ಏಕಾಗ್ರತೆಯಿಂದ ಕಲಿಯಲು ಸಾಧ್ಯ. ನಾವು ಬದುಕುವ ದಿನಗಳಷ್ಟು ವಿವೇಕಾನಂದರಂತೆ ಎಲ್ಲರಿಗೂ ಮಾದರಿಯಾಗಿ ಜೀವಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಾದ ಚಿರಂಜೀವಿ ಹಾಗೂ ಆದಿತ್ಯ ರಾಮ್, ರಾಷ್ಟ್ರೀಯ ಸೇವಾ ದಳದ ಅನುಭವಗಳನ್ನು ಹಂಚಿಕೊಂಡರು. ಆ ಸಂದರ್ಭದಲ್ಲಿ ೨೦೧೯ನೇ ಸಾಲಿನಲ್ಲಿ ನಡೆದ ರಾಷ್ಟ್ರೀಯ ಸೇವಾ ದಳದ ಕಾರ್ಯಗಳ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಶುಂಪಾಲರಾದ ಪ್ರೋ. ರಮೇಶ್ ಶೆಟ್ಟಿ, ಕಲಾ ನಿಖಾಯದ ಮುಖ್ಯಸ್ಥ ಪ್ರೋ ವೇಣುಗೋಪಾಲ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ದಾಮೋದರ್ ಹಾಗೂ ಇನ್ನಿತರ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಶಲಟ್ ಮೊನೀಸ್ ನಿರೂಪಿಸಿ, ಉಪನ್ಯಾಸಕಿ ಚೈತ್ರಾ ಐತಾಳ್ ವಂದಿಸಿದರು.
Click this button or press Ctrl+G to toggle between Kannada and English