ಕೊರೋನಾದ ನಡುವೆ ದೀಪಾವಳಿಯನ್ನು ಆಚರಿಸುವುದು ಹೇಗೆ ?

11:11 PM, Friday, November 13th, 2020
Share
1 Star2 Stars3 Stars4 Stars5 Stars
(9 rating, 2 votes)
Loading...

shail ahet ಮಂಗಳೂರು  : ಕೊರೋನಾದ ನಡುವೆ ದೀಪಾವಳಿಯನ್ನು ಆಚರಿಸುವುದರೊಂದಿಗೆ ಸರಳತೆ ಮತ್ತು ಎಚ್ಚರಿಕೆ ಪಾಠವನ್ನು ನಾವು ಕಲಿಯಬೇಕಿದೆ.  ಈ ಬಾರಿ ದೀಪಾವಳಿಯನ್ನು ಆಚರಿಸುವಾಗ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವುದರೊಂದಿಗೆ ಪರಿಸರಕ್ಕೆ ಹಾನಿಯಾಗದ ಹಸಿರು ಪಟಾಕಿಗಳನ್ನು ಸುಡಲು ಸರಕಾರ ಆದೇಶಿಸಿದೆ.

ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಈ ವರ್ಷ ದೀಪಾವಳಿಯನ್ನು ನವೆಂಬರ್‌ 14 ರಿಂದ 16 ರವರೆಗೆ  ಆಚರಿಸಲಾಗುತ್ತಿದೆ. ದೀಪಗಳ ಹಬ್ಬ ಎಂದು ಕರೆಯಲಾಗುವ ಈ ಹಬ್ಬವು ಚಂದ್ರಮಾನ ಪಂಚಾಂಗದ ಪ್ರಕಾರ ಕಾರ್ತಿಕ ಮಾಸದಲ್ಲಿ ಅಂದರೆ ಅಕ್ಟೋಬರ್‌ ಮಧ್ಯೆ ಅಥವಾ ನವೆಂಬರ್‌ ಮಧ್ಯೆ ಬರುತ್ತದೆ.

ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.

ದೀಪಾವಳಿಗೂ ಮೊದಲು ಜನರು ತಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಕೆಲವರು ನವೀಕರಣ ಕಾರ್ಯಗಳನ್ನು ಸಹ ಮಾಡಿಸುತ್ತಾರೆ. ಜನರು ತಮ್ಮ ಮನೆ ಮತ್ತು ಕಚೇರಿಯಲ್ಲಿ ದೀಪಗಳು, ರಂಗೋಲಿ ಮತ್ತು ಹೂವುಗಳಿಂದ ಅಲಂಕರಿಸುತ್ತಾರೆ. ದೀಪಾವಳಿ ಮುನ್ನಾದಿನದಂದು ಜನರು ದೀಪಗಳನ್ನು ಬೆಳಗಿಸಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ.   ಕತ್ತಲೆಯ ವಿರುದ್ಧ ಬೆಳಕಿನ ಜಯ, ಕೆಟ್ಟದ್ದರ ವಿರುದ್ಧ ಉತ್ತಮದ ಮತ್ತು ಅಜ್ಞಾನದ ಮೇಲಿನ ಜ್ಞಾನದ ಜಯವನ್ನು ಇದು ಪ್ರತಿನಿಧಿಸುತ್ತದೆ.

ದೀಪಾವಳಿಯಂದು ಜನರು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಮಾತೆ ಲಕ್ಷ್ಮಿಯನ್ನು ಪೂಜಿಸುತ್ತಾರೆ.  ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ.  ದೀಪಾವಳಿಯ ಕೊನೆಯ ದಿನ  ಗೋಪೂಜೆಗಳನ್ನು  ಮಾಡುತ್ತಾರೆ.

ರೂಪದರ್ಶಿ : ಶೈಲ್ ಶೆಟ್
ಛಾಯಾಗ್ರಹಣ : ಭಾಸ್ಕರ್ ಅಮ್ಟೂರ್

shail ahet

shail ahet

image description

1 ಪ್ರತಿಕ್ರಿಯೆ - ಶೀರ್ಷಿಕೆ - ಕೊರೋನಾದ ನಡುವೆ ದೀಪಾವಳಿಯನ್ನು ಆಚರಿಸುವುದು ಹೇಗೆ ?

  1. Apoorva shenoy, Mangalore

    Meaningful and informative article. Pics are also wonderful

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English