ಉಡುಪಿ: ಈ ಬಾರಿ ಧರ್ಮ ಅಧರ್ಮದ ನಡುವಿನ ಚುನಾವಣೆ ನಡೆಯುತ್ತಿದೆ. ನಮ್ಮದು ಧರ್ಮ- ಬಿಜೆಪಿದ್ದು ಅಧರ್ಮ ಎಂದು ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಶ್ರೀಕೃಷ್ಣ ಒಬ್ಬ ರಾಜಕಾರಣಿ. ರಾಜಕಾರಣಿಯನ್ನು ದೇವರ ಹೆಸರಲ್ಲಿ ಧರ್ಮ ಸ್ಥಾಪನೆಗೆ ಪ್ರತಿಷ್ಠಾಪಿಸಲಾಗಿದೆ. ಮಠಕ್ಕೆ ಯಾರು ಬಂದ್ರು ಯಾರು ಬರಲಿಲ್ಲ ಮುಖ್ಯವಲ್ಲ. ನನಗೆ ಕೃಷ್ಣನ ಮೇಲೆ ಬಹಳ ನಂಬಿಕೆಯಿದೆ ಎಂದು ಹೇಳಿದರು.
ಪಕ್ಷದ ಪರವಾಗಿ, ವೈಯುಕ್ತಿಕವಾಗಿ ಸರ್ಕಾರದ ಪರವಾಗಿ ಬಂದಿದ್ದೇನೆ. ಭಕ್ತನ -ಭಗವಂತನ ವ್ಯವಹಾರ ನಮ್ಮಿಬ್ರಿಗೆ ಗೊತ್ತಿದೆ. ಪೂಜ್ಯಶ್ರೀಗಳೂ ಆಶೀರ್ವಾದ ಮಾಡಿದ್ದಾರೆ. ನಾನು ಅದನ್ನೆಲ್ಲಾ ಬಹಿರಂಗ ಮಾಡಲ್ಲ. ಶ್ರೀಕೃಷ್ಣ ನನಗೆ ಮಾದರಿಯಾಗಿದ್ದಾನೆ ಎಂದು ಡಿಕೆಶಿ ಹೇಳಿದರು.
ಮಠಕ್ಕೆ ಬರುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ. ಸಿದ್ದರಾಮಯ್ಯ ಮಠಕ್ಕೆ ಬರಲಿಲ್ಲ ಎಂಬುದು ಸತ್ಯ. ಸಿದ್ದರಾಮಯ್ಯ ಮುಜರಾಯಿ ಇಲಾಖೆ ಮುಚ್ಚಲಿಲ್ಲವಲ್ಲ. ಮುಜರಾಯಿ ಇಲಾಖೆಗೆ ಹೆಚ್ಚಿನ ಶಕ್ತಿ ಕೊಟ್ಟಿದ್ದೇವೆ. ಎಲ್ಲಾ ಧರ್ಮಗಳನ್ನು ಉಳಿಸಿಕೊಂಡು ಬಂದಿದ್ದೇವೆ ಎಂದು ಡಿಕೆಶಿ ಹೇಳಿದರು.
ಮೋದಿ ದೇವೇಗೌಡರನ್ನು ಹೊಗಳಲಿ. ಅಮಿತ್ ಶಾ ಕೂಡಾ ಹೊಗಳಲಿ. ದೇವೇಗೌಡರನು ಬಿಜೆಪಿಗಿರುವ ಅಂತರ ವ್ಯಕ್ತಪಡಿಸಿದ್ದಾರೆ. ಪುತ್ರ ಕುಮಾರಸ್ವಾಮಿಗೂ ಮಾರ್ಗದರ್ಶನ ಕೊಟ್ಟಿದ್ದಾರೆ. ಯಾವ ಗರ್ಭಗುಡಿಯಲ್ಲಿ ಏನು ಅಡಗಿದ್ಯೋ ನಾನು ಚರ್ಚೆ ಮಾಡಲ್ಲ. ಕಾಂಗ್ರೆಸ್ 130 ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತದೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.
ಐಟಿ ಇಲಾಖೆ ಕಾಂಗ್ರೆಸ್ ಮೇಲೆ ನಿರಂತರ ದಾಳಿ ಮಾಡಿದೆ. ಇದಕ್ಕೆ ಬಿಜೆಪಿ ಉತ್ತರ ಕೊಡಬೇಕು. ಡಿ.ಕೆ ಶುದ್ಧ ನೀರು ಮಾಡಿ 5 ವರ್ಷವಾಯ್ತು. ಈಗ ವಾಟರ್ ಕ್ಯಾನ್ ಮಾಡಿದ್ದಲ್ಲ. ವಾಟರ್ ಕ್ಯಾನ್ ಹಂಚುವ ಅವಶ್ಯಕತೆ ನಮಗಿಲ್ಲ ಎಂದು ಉಡುಪಿಯಲ್ಲಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.
Click this button or press Ctrl+G to toggle between Kannada and English