ಮಂಜೇಶ್ವರ: ಇತಿಹಾಸ ಪ್ರಸಿದ್ಧ ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ಕ್ಷೇತ್ರದಲ್ಲಿ ಸುಸಜ್ಜಿತ ಶ್ರೀ ಮಹಾಲಿಂಗೇಶ್ವರ ಪ್ರಸಾದ ಭೋಜನಾಲಯ ‘ಅನ್ನಪೂರ್ಣ’ ಸಂಭ್ರಮ ಸಡಗರದೊಂದಿಗೆ ನಾಡಿನ ವೈದಿಕರು, ಹಿರಿಯರು, ಧಾರ್ಮಿಕ ನೇತಾರರು ಹಾಗೂ ಸಹಸ್ರಾರು ಭಕ್ತಾದಿಗಳ ಸಮಕ್ಷಮ ಶನಿವಾರ ಲೋಕಾರ್ಪಣೆಗೊಂಡಿತು.
ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳೊಂದಿಗೆ ದಿನವಿಡೀ ನಡೆದ ಸಮಾರಂಭವನ್ನು ಭಕ್ತಾದಿಗಳು ಕಣ್ತುಂಬಿಕೊಂಡರು.
ಸಭಾ ಸಮಾರಂಭವನ್ನು ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ದಿನೇಶ ಕೃಷ್ಣ ತಂತ್ರಿಗಳು ದೀಪ ಪ್ರಜ್ವಲನಗೊಳಿಸಿ ಶುಭಾರಂಭಗೊಳಿಸಿದರು.ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಅನ್ನಪೂರ್ಣ ನಾಡಿನ ಭಕ್ತಾದಿಗಳಿಗೆ ನಿರಂತರ ಅನ್ನ ಉಣಿಸುವ ಕೇಂದ್ರವಾಗಿ ಬೆಳಗಲಿ. ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಾತೆಯರ ಪಾತ್ರ ಹಿರಿದಾದದ್ದು. ಆದರ್ಶನಾರಿ ಆದರ್ಶಸಮಾಜದ ರೂವಾರಿ, ಸಹಬಾಳ್ವೆ, ಸಹಭೋಜನ, ಸಹಚಿಂತನೆ ನಮ್ಮ ಧ್ಯೇಯವಾಗಲಿ ಎಂದು ಅಭಿಪ್ರಾಯ ಪಟ್ಟರು.
ಬ್ರಹ್ಮಶ್ರೀ ಪೊಳ್ಳಕಜೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ವೇದಮೂರ್ತಿ ಬೋಳಂತಕೋಡಿ ರಾಮ ಭಟ್, ವೇದಮೂರ್ತಿ ಗಣೇಶ ನಾವಡ ಚಿಗುರುಪಾದೆ, ಕ್ಷೇತ್ರ ಅರ್ಚಕ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುಸುಮೋದರ ಡಿ.ಶೆಟ್ಟಿ ಮುಂಬೈ, ಶ್ರೀಧರ ಶೆಟ್ಟಿ ಮಂಗಲ್ಪಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಲಯ ಮೇಲ್ವಿಚಾರಕ ವಿಶ್ವನಾಥ, ನಾರಾಯಣ ಹೆಗ್ಡೆ ಕೋಡಿಬೈಲು, ಗೋಪಾಲ ಎಂ.ಬಂದ್ಯೋಡು, ದಾಸಣ್ಣ ಆಳ್ವ ಕುಳೂರು ಬೀಡು, ಗೋಪಾಲ ಶೆಟ್ಟಿ ಅರಿಬೈಲು, ಭಾಸ್ಕರ ರೈ ಮಂಜಲ್ತೋಡಿ, ಕೃಷ್ಣ ಶಿವಕೃಪಾ ಕುಂಜತ್ತೂರು, ಪುಷ್ಪರಾಜ ಶೆಟ್ಟಿ ಮಂಗಳೂರು, ರಂಗನಾಥ ಐತಾಳ್ ಮಂಗಳೂರು, ಎಸ್.ಎನ್.ಕಡಂಬಾರು, ಡಾ.ಶ್ರೀಧರ ಭಟ್ ಎಂ, ನಾರಾಯಣ ಶಂಕರ ಕಣಕೂರು, ಪಿ.ಆರ್.ಶೆಟ್ಟಿ ಪೊಯ್ಯೆಲು ಕುಳೂರು, ರಾಮಪ್ಪ ಮಂಜೇಶ್ವರ, ಕೆ.ಪಿ.ಸುರೇಶ ಮಾಡೂರು ಉಪಸ್ಥಿತರಿದ್ದು ಮಾತನಾಡಿದರು.
ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ಆಧ್ಯಕ್ಷೆ ಪ್ರೇಮಾ ಕೆ.ಭಟ್ ತೊಟ್ಟೆತ್ತೋಡಿ, ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ಸೇವಾಸಮಿತಿ ಅಧ್ಯಕ್ಷ ನಾರಾಯಣ ನಾಕ್ ನಡುಹಿತ್ಲು ಕುಳೂರು, ಮಹಿಳಾ ಘಟಕ ಅಧ್ಯಕ್ಷೆ ಗೀತಾ ಬಾಳ್ಯೂರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ವೈದಿಕ ವಿದ್ವಾಂಸರಿಗೆ ಹಾಗೂ ಅತಿಥಿ ಅಭ್ಯಾಗತರಿಗೆ ಕ್ಷೇತ್ರದ ವತಿಯಿಂದ ಗೌರವ ಪತ್ರ ನೀಡಿ ಗೌರವಿಸಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿದ್ದ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್ ಕ್ಷೇತ್ರಕ್ಕೆ ಅಪರಾಹ್ನ ಭೇಟಿ ನೀಡಿ ಕ್ಷೇತ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ನೂತನ ಭೋಜನ ಶಾಲೆಯ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇತ್ತೀಚೆಗೆ ಲೋಕ ಸೇವಾ ಆಯೋಗ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಅವರನ್ನು ಕ್ಷೇತ್ರದ ವತಿಯಿಂದ ಗಣ್ಯರ ಸಮಕ್ಷಮ ಗೌರವ ಪತ್ರದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ವೇದಮೂರ್ತಿ ಅಶೋಕ ನಾವಡ ಮುಳಿಂಜ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಹಾಗೂ ನಟರಾಜ ಕಲಾವೃಂದ ಚಿಗುರುಪಾದೆ ತಂಡದವರಿಂದ ‘ಬಯ್ಯ ಮಲ್ಲಿಗೆ’ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
Click this button or press Ctrl+G to toggle between Kannada and English