“ಕಾನದ ಬೊಲ್ಪು ಶ್ರೀ ಮಹಾಲಿಂಗೇಶ್ವರ” ತುಳು, ಕನ್ನಡ ಭಕ್ತಿಗೀತೆ ಬಿಡುಗಡೆ

Monday, January 18th, 2021
kanadabolpu

ಮಂಜೇಶ್ವರ : ಇತಿಹಾಸ ಪ್ರಸಿದ್ಧವಾದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಧನು ಪೂಜಾ ಸಮಾರೋಪದ ಮಕರ ಸಂಕ್ರಮಣದಂದು “ಕಾನದ ಬೊಲ್ಪು ಶ್ರೀ ಮಹಾಲಿಂಗೇಶ್ವರ” ಎಂಬ ತುಳು, ಕನ್ನಡ ಭಕ್ತಿಗೀತೆ  ಬಿಡುಗಡೆಗೊಂಡಿತು. ತುಳುನಾಡ ತುಡರ್ ಕ್ರಿಯೇಷನ್ ಅರ್ಪಿಸಿದ ಎ.ಡಿ.ಕೊರಗಪ್ಪ ಹಾಗೂ ಕಾರ್ತಿಕ್ ಲಾಲ್ ಭಾಗ್ ಸಾಹಿತ್ಯ ರಚಿಸಿ  ಡಿ.ಪ್ರವೀಣ್ ಕುಮಾರ್  ನಿರ್ದೇಶಿಸಿದ ಈ ಗೀತೆಯನ್ನ  ಯೂಟ್ಯೂಬ್ ನ ಕೀಲಿಮಣೆಯನ್ನ ಅದುಮುವ ಮೂಲಕ ಕ್ಷೇತ್ರದ ತಂತ್ರಿವರೇಣ್ಯರಾದ ಬ್ರಹ್ಮ ಶ್ರೀ ಗಣೇಶ ತಂತ್ರಿ ಬಿಡುಗಡೆಗೊಳಿಸಿದರು. ಈ ವೇಳೆ ಕ್ಷೇತ್ರದ ಆಡಳಿತ ಸಮಿತಿಯ ಪಧಾಧಿಕಾರಿಗಳು, […]

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮನಮೋಹಕ‌ ಆಕಾಶ ಬುಟ್ಟಿಗಳ ಸ್ಪರ್ಧೆ

Tuesday, November 6th, 2018
deepavali

ಮಂಗಳೂರು: ನಗರದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮನಮೋಹಕ‌ ಆಕಾಶ ಬುಟ್ಟಿಗಳ ಸ್ಪರ್ಧೆ ನಡೆಯಿತು. ವಿವಿಧ ಪ್ರಕಾರದ ಆಕಾಶ ಬುಟ್ಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸೆಗಣಿ, ವ್ಯಾಲ್ವೇಟ್, ರಬ್ಬರ್ ಬ್ಯಾಂಡ್, ಶಂಖ, ಧಾನ್ಯಗಳು, ಭತ್ತ, ಹುಣಸೆ ಬೀಜ, ಕಡಲೆಕಾಳು, ಕ್ಯಾಸೇಟ್ ರೀಲ್, ಕ್ರೇಯಾನ್ಸ್, ಬಿದಿರಿನ ಕೋಲು, ನ್ಯೂಸ್ ಪೇಪರ್ ಹೀಗೆ ವಿವಿಧ ಪ್ರಕಾರದ ವಸ್ತುಗಳಿಂದ ತಯಾರಿಸಿದ ಆಕಾಶ ಬುಟ್ಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ವಿಭಾಗ ಹೀಗೆ ಮೂರು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಸುಮಾರು […]

ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ಪ್ರಸಾದ ಭೋಜನಾಲಯ ‘ಅನ್ನಪೂರ್ಣ’ ಲೋಕಾರ್ಪಣೆ

Monday, August 29th, 2016
Annapoorna

ಮಂಜೇಶ್ವರ: ಇತಿಹಾಸ ಪ್ರಸಿದ್ಧ ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ಕ್ಷೇತ್ರದಲ್ಲಿ ಸುಸಜ್ಜಿತ ಶ್ರೀ ಮಹಾಲಿಂಗೇಶ್ವರ ಪ್ರಸಾದ ಭೋಜನಾಲಯ ‘ಅನ್ನಪೂರ್ಣ’ ಸಂಭ್ರಮ ಸಡಗರದೊಂದಿಗೆ ನಾಡಿನ ವೈದಿಕರು, ಹಿರಿಯರು, ಧಾರ್ಮಿಕ ನೇತಾರರು ಹಾಗೂ ಸಹಸ್ರಾರು ಭಕ್ತಾದಿಗಳ ಸಮಕ್ಷಮ ಶನಿವಾರ ಲೋಕಾರ್ಪಣೆಗೊಂಡಿತು. ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳೊಂದಿಗೆ ದಿನವಿಡೀ ನಡೆದ ಸಮಾರಂಭವನ್ನು ಭಕ್ತಾದಿಗಳು ಕಣ್ತುಂಬಿಕೊಂಡರು. ಸಭಾ ಸಮಾರಂಭವನ್ನು ಕ್ಷೇತ್ರ ತಂತ್ರಿವರ್ಯ […]