ಮಂಜೇಶ್ವರ : ಇತಿಹಾಸ ಪ್ರಸಿದ್ಧವಾದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಧನು ಪೂಜಾ ಸಮಾರೋಪದ ಮಕರ ಸಂಕ್ರಮಣದಂದು “ಕಾನದ ಬೊಲ್ಪು ಶ್ರೀ ಮಹಾಲಿಂಗೇಶ್ವರ” ಎಂಬ ತುಳು, ಕನ್ನಡ ಭಕ್ತಿಗೀತೆ ಬಿಡುಗಡೆಗೊಂಡಿತು. ತುಳುನಾಡ ತುಡರ್ ಕ್ರಿಯೇಷನ್ ಅರ್ಪಿಸಿದ ಎ.ಡಿ.ಕೊರಗಪ್ಪ ಹಾಗೂ ಕಾರ್ತಿಕ್ ಲಾಲ್ ಭಾಗ್ ಸಾಹಿತ್ಯ ರಚಿಸಿ ಡಿ.ಪ್ರವೀಣ್ ಕುಮಾರ್ ನಿರ್ದೇಶಿಸಿದ ಈ ಗೀತೆಯನ್ನ ಯೂಟ್ಯೂಬ್ ನ ಕೀಲಿಮಣೆಯನ್ನ ಅದುಮುವ ಮೂಲಕ ಕ್ಷೇತ್ರದ ತಂತ್ರಿವರೇಣ್ಯರಾದ ಬ್ರಹ್ಮ ಶ್ರೀ ಗಣೇಶ ತಂತ್ರಿ ಬಿಡುಗಡೆಗೊಳಿಸಿದರು.
ಈ ವೇಳೆ ಕ್ಷೇತ್ರದ ಆಡಳಿತ ಸಮಿತಿಯ ಪಧಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ತುಳುನಾಡ ಖ್ಯಾತ ಗಾಯಕ ಸೋಮನಾಥ್ ಮಂಗಲ್ಪಾಡಿ, ಕುಮಾರಿ ಅಂಜಲಿ ಡಿ.ಹಾಗೂ ಸದಾನಂದ ಮಂಜತ್ತಡ್ಕ ಹಾಡಿರುವ ಈ ಗೀತೆಗಳು Thulunada Tudar Creation ಯೂಟ್ಯೂಬ್ ಮೂಲಕ ವೀಕ್ಷಿಸಬಹುದಾಗಿದೆ. ಈ ಗೀತೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಖ್ಯಾತಿಯನ್ನ ಪಡೆದಿರುತ್ತದೆ.
Click this button or press Ctrl+G to toggle between Kannada and English