ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಮಂಗಳವಾರ ಮಂಡ್ಯ ಜಿಲ್ಲಾ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಂಡ್ಯದಿಂದ ವಿವಿಧೆಡೆ ತೆರಳುವ ಎಲ್ಲಾ ಸರಕಾರಿ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದ್ದು ನೂರಾರು ಪ್ರಯಾಣಿಕರು ಬಸ್‌ಸ್ಟಾಂಡ್‌ನಲ್ಲಿ ಪರದಾಡುತ್ತಿದ್ದಾರೆ.
ಜಿಲ್ಲಾಧ್ಯಂತ ಸಾವಿರಾರು ಹೋರಾಟಗಾರರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ವರದಿಯಾಗಿದ್ದು, ಹಲವೆಡೆ ಬೈಕ್ ರಾಲಿ ನಡೆಸಿ ಘೋಷಣೆಗಳನ್ನು ಕೂಗಲಾಗುತ್ತಿದೆ, ಬಾಗಿಲು ತೆರೆದಿದ್ದ ಕೆಲ ಅಂಗಡಿಗಳ ಬಾಗಿಲುಗಳನ್ನು ಬಲವಂತವಾಗಿ ಮುಚ್ಚಿದ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ ಯಾವುದೇ ಶಾಲಾ ಕಾಲೇಜು ಗಳು ಬಾಗಿಲು ತೆರೆದಿಲ್ಲ.
ಸಂಜಯ ವೃತ್ತದಲ್ಲಿರುವ ಸರಕಾರಿ ಕಚೇರಿಯಾದ ಆರ್‌ಎಪಿಐಇಎಂಎಸ್ ಗೆ ಪ್ರತಿಭಟನಾ ನಿರತರು ಮುತ್ತಿಗೆ ಹಾಕಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬಂದಿಗಳನ್ನು ಹೊರಕಳುಹಿಸಿದ್ದಾರೆ.
Click this button or press Ctrl+G to toggle between Kannada and English