ಸರಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ, ವ್ಯಕ್ತಿಯ ಬಂಧನ

Saturday, March 19th, 2022
Wajid

ಮಂಗಳೂರು : ಸುಳ್ಯದಿಂದ ಸರಕಾರಿ ಬಸ್ ನಲ್ಲಿ  ಪ್ರಯಾಣಿಸುತ್ತಿದ್ದ  ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ವಾಜಿದ್ ಎ. ಜಮಖಾನಿ ಬಂಧಿತ ಆರೋಪಿ. ಮಹಿಳೆ ಸುಳ್ಯದಿಂದ ಮಂಗಳೂರಿಗೆ ಸರಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸೀಟಿನ ಪಕ್ಕದಲ್ಲಿ ಕುಳಿತ ವಾಜಿದ್ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ಮಾನಹಾನಿ ಮಾಡಿ ಕಿರುಕುಳ ನೀಡಿದ್ದಾನೆ ಎಂದು ಕಂಕನಾಡಿ ನಗರ ಠಾಣೆಯಲ್ಲಿ ಯುವತಿ ಪ್ರಕರಣ ದಾಖಲಿಸಿದ್ದಳು. ಯುವತಿಯ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರು-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಸಂಚಾರ ಆರಂಭ

Thursday, August 26th, 2021
ksrtc-bus

ಮಂಗಳೂರು :  ಮಂಗಳೂರು-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಸಂಚಾರ ಆರಂಭಿಸಿದ ಹಿನ್ನಲೆಯಲ್ಲಿ ಮೊಂಟೆಪದವು ನಾಗರಿಕರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಮಂಗಳೂರಿನಿಂದ ನಾಟೆಕಲ್-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಒದಗಿಸುವಂತೆ ಸುಮಾರು 10 ವರ್ಷಗಳಿಂದ ಈ ಭಾಗದ ಜನರು ಒತ್ತಾಯಿಸುತ್ತಾ ಬಂದಿದ್ದರಲ್ಲದೆ, ಇಲ್ಲಿನ ಸಂಘ ಸಂಸ್ಥೆಗಳು ಹಲವು ಬಾರಿ ಹೋರಾಟವನ್ನೂ ನಡೆಸಿತ್ತು. ಸಂಬಂಧಪಟ್ಟವರಿಗೆ ಮನವಿಯನ್ನೂ ಸಲ್ಲಿಸಿತ್ತು. 10 ವರ್ಷದ ಹೋರಾಟದ ಫಲವಾಗಿ ಸರಕಾರಿ ಬಸ್ ಓಡಾಟ ಆರಂಭಿಸಿದ ಹಿನ್ನೆಲೆಯಲ್ಲಿ ನಾಗರಿಕರು ಸಂಭ್ರಮಿಸಿದರು.

ಖಾಸಗಿ ಬಸ್‌ ಓಡುವ ಮಾರ್ಗದಲ್ಲಿ ಸರಕಾರಿ ಬಸ್‌ ಸಂಚಾರ ಬೇಡ

Friday, May 29th, 2020
tumakuru bus

ತುಮಕೂರು : ಲಾಕ್‌ ಡೌನ್‌ ಘೋಷಣೆಯಾದ ಮಾರ್ಚ್ 24 ರಿಂದ ಖಾಸಗಿ ಬಸ್‌ ಗಳು ರಸ್ತೆಗಿಳಿದಿಲ್ಲ ನಾವೆಲ್ಲರೂ ಸಂಕಷ್ಟದಲ್ಲಿದ್ದೇವೆ ಎಂದು ಖಾಸಗಿ ಬಸ್‌ ಮಾಲೀಕರ ಸಂಘದವರು ಗೋಳು ತೋಡಿಕೊಂಡಿದ್ದಾರೆ. ತಮ್ಮ ಹಲವಾರು ಬೇಡಿಕೆಗಳನ್ನು ಸರಕಾರದ ಮುಂದೆ ಸಲ್ಲಿಸಿರುವ ಖಾಸಗಿ ಬಸ್‌ ಮಾಲೀಕರು ತಮ್ಮ ಬೇಡಿಕೆ ಈಡೇರಿಕೆಯ ಬಗ್ಗೆ ಸರಕಾರದಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ. ಅವರ ಬೇಡಿಕೆಗಳೆಂದರೆ : ಖಾಸಗಿ ಬಸ್‌ ಸಂಚಾರಕ್ಕೆ ಸೂಕ್ತ ಮಾರ್ಗಸೂಚಿ ರೂಪಿಸಬೇಕು.ಡಿಸೆಂಬರ್‌ ವರೆಗೆ ತೆರಿಗೆ ಪಡೆಯಲು ವಿನಾಯಿತಿ ನೀಡಬೇಕು. ಡಿಸೆಂಬರ್‌ […]

ಸರಕಾರಿ ಬಸ್‌ ಇನ್ಮೇಲೆ ರಾತ್ರಿಯೂ ಓಡುತ್ತವೆ, 30 ಪ್ರಯಾಣಿಕರಿಗೆ ಮಾತ್ರ ಅವಕಾಶ

Wednesday, May 27th, 2020
Ksrtc

ಹುಬ್ಬಳ್ಳಿ : ರಾಜ್ಯದ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ ಗಳಲ್ಲಿ ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಕೇವಲ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಅವರು ಮೇ.26 ರಂದು ನಗರದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದದರು. ಲಾಕ್‌ ಡೌನ್‌ ನಿಂದ ಸಾಮಾಜಿಕ ಅಂತರ ನಿಯಮ ಪಾಲನೆ ಅತೀ ಅಗತ್ಯವಾಗಿದ್ದರಿಂದ ಬಸ್‌ ಗಳಲ್ಲಿನ ಎಲ್ಲ ಸೀಟ್‌ ಗಳನ್ನು […]

ಮಂಜೇಶ್ವರ : ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಸರಕಾರಿ ಬಸ್ ಢಿಕ್ಕಿ; ಓರ್ವ ಮೃತ್ಯು, ಇಬ್ಬರು ಗಂಭೀರ

Wednesday, January 29th, 2020
manjeshwar

ಮಂಜೇಶ್ವರ : ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಪಾದಚಾರಿಯೊಬ್ಬರ ಸಹಿತ ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ಮಂಜೇಶ್ವರದಲ್ಲಿ ನಡೆದಿದೆ. ಮೃತರನ್ನು ಬೈಕ್ ಸವಾರ ಕುಂಜತ್ತೂರು ಮಹಾಲಿಂಗೇಶ್ವರ ನಿವಾಸಿ ಲೊಕೇಶ್ (45) ಎಂದು ಗುರುತಿಸಲಾಗಿದೆ. ಬೈಕ್ ಸಹಸವಾರೆಯಾಗಿದ್ದ ಲೋಕೇಶ್‌ರ ಪತ್ನಿ ಉಪ್ಪಳ ಐಲ ನಿವಾಸಿ ಶೈಲಜಾ(41) ಹಾಗೂ ಅಪಘಾತದಲ್ಲಿ ಸಿಲುಕಿದ್ದ ಪಾದಚಾರಿ ಉದ್ಯಾವರ ಫಸ್ಟ್ ಸಿಗ್ನಲ್ ನಿವಾಸಿ ರವಿ(45) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ […]

ಮಂಡ್ಯದಲ್ಲಿ ವಿವಿಧ ಸಂಘಟನೆಗಳಿಂದ ಜಿಲ್ಲಾ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Tuesday, September 6th, 2016
Mandya-Bund

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ವಿರೋಧಿಸಿ ಮಂಗಳವಾರ ಮಂಡ್ಯ ಜಿಲ್ಲಾ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡ್ಯದಿಂದ ವಿವಿಧೆಡೆ ತೆರಳುವ ಎಲ್ಲಾ ಸರಕಾರಿ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದ್ದು ನೂರಾರು ಪ್ರಯಾಣಿಕರು ಬಸ್‌ಸ್ಟಾಂಡ್‌ನ‌ಲ್ಲಿ ಪರದಾಡುತ್ತಿದ್ದಾರೆ. ಜಿಲ್ಲಾಧ್ಯಂತ ಸಾವಿರಾರು ಹೋರಾಟಗಾರರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ವರದಿಯಾಗಿದ್ದು, ಹಲವೆಡೆ ಬೈಕ್‌ ರಾಲಿ ನಡೆಸಿ ಘೋಷಣೆಗಳನ್ನು ಕೂಗಲಾಗುತ್ತಿದೆ, ಬಾಗಿಲು ತೆರೆದಿದ್ದ ಕೆಲ ಅಂಗಡಿಗಳ ಬಾಗಿಲುಗಳನ್ನು ಬಲವಂತವಾಗಿ ಮುಚ್ಚಿದ ಬಗ್ಗೆ ವರದಿಯಾಗಿದೆ. […]

ಮುಡಿಪು : ಹೆಚ್ಚಿನ ಸರಕಾರಿ ಬಸ್ ಗೆ ಒತ್ತಾಯಿಸಿ ಪ್ರತಿಭಟನೆ

Friday, December 28th, 2012
Bundh in Mudipu

ಮಂಗಳೂರು : ಮುಡಿಪು ಸರಕಾರಿ ಬಸ್ ಹೋರಾಟ ಸಮಿತಿ ವತಿಯಿಂದ ಗುರುವಾರ ಮಂಗಳೂರಿನಿಂದ ಕೊಣಾಜೆ -ಮುಡಿಪು ಮತ್ತು ಆ ಮಾರ್ಗವಾಗಿ ಇತರೆಡೆಗಳಿಗೆ ಹೆಚ್ಚಿನ ಸರಕಾರಿ ಬಸ್ ಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಯನ್ನುಹಮ್ಮಿಕೊಳ್ಳಲಾಗಿತ್ತು. ಹೋರಾಟ ಸಮಿತಿಯ ಅದ್ಯ್ಹಕ್ಷ, ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಮುಡಿಪು ಪರಿಸರದ ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಸಾರಿಗೆ ಸಚಿವರು ಕೆಲ ತಿಂಗಳ ಹಿಂದೆಯಷ್ಟೆ 3 ಬಸ್ ಗಳನ್ನು ಮಂಜೂರು ಮಾಡಿದರು ಆದರೆ ಖಾಸಗಿ ಬಸ್ ಮಾಲಕರ ಲಾಭಿಯಿಂದಾಗಿ […]