ಮಂಗಳೂರು : ಮಂಗಳೂರು-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಸಂಚಾರ ಆರಂಭಿಸಿದ ಹಿನ್ನಲೆಯಲ್ಲಿ ಮೊಂಟೆಪದವು ನಾಗರಿಕರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಮಂಗಳೂರಿನಿಂದ ನಾಟೆಕಲ್-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಒದಗಿಸುವಂತೆ ಸುಮಾರು 10 ವರ್ಷಗಳಿಂದ ಈ ಭಾಗದ ಜನರು ಒತ್ತಾಯಿಸುತ್ತಾ ಬಂದಿದ್ದರಲ್ಲದೆ, ಇಲ್ಲಿನ ಸಂಘ ಸಂಸ್ಥೆಗಳು ಹಲವು ಬಾರಿ ಹೋರಾಟವನ್ನೂ ನಡೆಸಿತ್ತು. ಸಂಬಂಧಪಟ್ಟವರಿಗೆ ಮನವಿಯನ್ನೂ ಸಲ್ಲಿಸಿತ್ತು.
10 ವರ್ಷದ ಹೋರಾಟದ ಫಲವಾಗಿ ಸರಕಾರಿ ಬಸ್ ಓಡಾಟ ಆರಂಭಿಸಿದ ಹಿನ್ನೆಲೆಯಲ್ಲಿ ನಾಗರಿಕರು ಸಂಭ್ರಮಿಸಿದರು.
Click this button or press Ctrl+G to toggle between Kannada and English