ಸರಕಾರಿ ಬಸ್‌ ಇನ್ಮೇಲೆ ರಾತ್ರಿಯೂ ಓಡುತ್ತವೆ, 30 ಪ್ರಯಾಣಿಕರಿಗೆ ಮಾತ್ರ ಅವಕಾಶ

1:48 PM, Wednesday, May 27th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Ksrtc ಹುಬ್ಬಳ್ಳಿ : ರಾಜ್ಯದ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ ಗಳಲ್ಲಿ ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಕೇವಲ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಅವರು ಮೇ.26 ರಂದು ನಗರದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದದರು.

savadiಲಾಕ್‌ ಡೌನ್‌ ನಿಂದ ಸಾಮಾಜಿಕ ಅಂತರ ನಿಯಮ ಪಾಲನೆ ಅತೀ ಅಗತ್ಯವಾಗಿದ್ದರಿಂದ ಬಸ್‌ ಗಳಲ್ಲಿನ ಎಲ್ಲ ಸೀಟ್‌ ಗಳನ್ನು ಭರ್ತಿ ಮಾಡದೇ ಕೇವಲ 30 ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುವುದು. ನಿಗದಿತ 30 ಪ್ರಯಾಣಿಕರು ಲಭ್ಯವಿದ್ದರೆ ರಾತ್ರಿಯ ಸಮಯದಲ್ಲೂ ಬಸ್‌ ಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಸಾರಿಗೆ ನಿಗಮಗಳಿಗೆ 1800 ಕೋಟಿ ರೂ. ನಷ್ಟವಾಗಿದ್ದರೂ ಬೆಲೆ ಹೆಚ್ಚಳ ಮಾಡುವುದಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಸಾರಿಗೆ ಸಂಸ್ಥೆಯ ಎಲ್ಲ ನಾಲ್ಕೂ ವಿಭಾಗಗಳಲ್ಲಿ1,30,000 ಸಿಬ್ಬಂದಿ ಇದ್ದಾರೆ. ಇವರ ಎಪ್ರಿಲ್‌ ತಿಂಗಳ ವೇತನಕ್ಕೆ 3.26  ಕೋ.ರೂ. ನೀಡಲಾಗಿದೆ. ಮೇ ತಿಂಗಳ ವೇತನದ ಅನುದಾನ ಒಂದನೇ ಹಂತದಲ್ಲಿ ಬಿಡುಗಡೆ ಮಾಡಲಾಗಿದ್ದು, ಎರಡನೇ ಹಂತದ ಹಣವನ್ನು ಬೇಗನೇ ಬಿಡುಗಡೆ ಮಾಡಲಾಗುವುದು ಸಿಬ್ಬಂದಿಗಳು ಆತಂಕ ಪಡುವುದು ಬೇಡ ಎಂದರು.

ಸವದಿಗೆ ಸನ್ಮಾನ
ಸಾರಿಗೆ ಸಂಸ್ಥೆ ಸಿಬ್ಬಂದಿಗಳ ವೇತನ ಬಿಡುಗಡೆ ಮಾಡಿರುವುದಕ್ಕೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಕೆಎಸ್ಸಾರಿಟಿಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ವೈ. ನಾಯಕ್‌ ಸನ್ಮಾನಿಸಿದರು.

ಮೇ.26 ರಂದು ನಗರದ ಸಂಸ್ಥೆಯ ಕೇಂದ್ರ ಕಚೇರಿಗೆ ಆಗಮಿಸಿ ಪ್ರಗತಿ ಪರಿಶೀಲಿಸಿದ ಸವದಿ, ನಂತರ ಸಂಸ್ಥೆಯ ನೌಕರರ ಬೇಡಿಕೆಯನ್ನು ಸ್ವೀಕರಿಸಿ ಶೀಘ್ರ ಅದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

savadi

ನೌಕರರ ಬೇಡಿಕೆಗಳಿವು :
ಇದೇ ಸಂದರ್ಭದಲ್ಲಿ ಸಚಿವರಿಗೆ ತಮ್ಮ ಮನವಿ ನೀಡಿದ ನೌಕರರು ತಮಗೆ, ಲಾಕ್ ಡೌನ್‌ ಅವಧಿಯ ಎರಡು ತಿಂಗಳೂ ಕೂಡ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೇವಲ ಚಾಲಕರಿಗೆ ಮಾತ್ರ ವಿಶೇಷ ರಜೆ ಎಂದು ಪರಿಗಣಿಸಲಾಗಿದೆ. ಇದೇ ರೀತಿ ಅಧಿಕಾರಿಗಳಿಗೂ ಮತ್ತು ಇತರ ಸಿಬ್ಬಂದಿಗಳಿಗೂ ಈ ಸೌಲಭ್ಯ ನೀಡಬೇಕು. ಕರ್ತವ್ಯ ನಿರತ ಚಾಲಕರು ಮತ್ತು ನಿರ್ವಾಹಕರು ಕೊರೋನಾ ಪಿಡುಗಿಗೆ ಬಲಿಯಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ30 ಲಕ್ಷ. ರೂ. ವಿಮೆ ನೀಡಲಾಗುವುದು ಎಂದು ಸರಕಾರ ಹೇಳಿದೆ. ಅದರಂತೆ ಸಂಸ್ಥೆಯ ಮೆಕ್ಯಾನಿಕ್‌ ಹಾಗೂ ಅಧಿಕಾರಿ, ಸಿಬ್ಬಂದಿಗೆ ೩೦ ರಿಂದ ೫೦ ಲಕ್ಷ ರೂ.ಗಳಿಗೆ ಏರಿಸಬೇಕು.

ವರದಿ : ಶಂಭು
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English