ಮಹಾಮಾರಿ ಎಂಡೋಸಲ್ಫಾನ್‌ನಿಂದ ಜಿಲ್ಲೆಯಲ್ಲಿ ಮತ್ತೋರ್ವ ಎಂಡೋಸಲ್ಫಾನ್‌ ಪೀಡಿತೆ ಸಾವು

1:10 PM, Tuesday, September 6th, 2016
Share
1 Star2 Stars3 Stars4 Stars5 Stars
(No Ratings Yet)
Loading...

Ayishad-Rilaಪುತ್ತೂರು: ಮಹಾಮಾರಿ ಎಂಡೋಸಲ್ಫಾನ್‌ ಅಂದ್ರೆ ಸಾಕು, ಅದರ ಹೆಸರು ಕೇಳುತ್ತಲೇ ದಕ್ಷಿಣ ಕನ್ನಡ ಜಿಲ್ಲೆಯ ಜನ ಬೆಚ್ಚಿ ಬೀಳ್ತಾರೆ. ಹೌದು, ಎಂಡೋಸಲ್ಫಾನ್‌ ದುಷ್ಪರಿಣಾಮದಿಂದ ಈವರೆಗೆ ಹಲವರು ಸಾವನ್ನಪ್ಪಿದ್ದಾರೆ. ಇಂದು ಜಿಲ್ಲೆಯಲ್ಲಿ ಮತ್ತೋರ್ವ ಎಂಡೋಸಲ್ಫಾನ್‌ ಪೀಡಿತೆ ಸಾವನ್ನಪ್ಪಿದ್ದಾಳೆ.

ಹುಟ್ಟಿನಿಂದಲೇ ಎಂಡೋಸಲ್ಫಾನ್ ಸಂತ್ರಸ್ತೆಯಾಗಿದ್ದ ನರಿಮೊಗರುವಿನ ಆಯೈಷದ್ ರಿಲಾ(17) ಎಂಬ ಬಾಲಕಿ ಇಂದು ಕೊನೆಯುಸಿರೆಳೆದಿದ್ದಾಳೆ.

ನರಿಮೊಗರು ಗ್ರಾಮದ ಇಸ್ಮಾಯಿಲ್ ಎಂಬುವರ ಪುತ್ರಿ ಆಯೈಷದ್, ಮೃತ ಎಂಡೋಸಂತ್ರಸ್ತೆ. ಆಯೈಷದ್‌ನಂತೆ ಜಿಲ್ಲೆಯಲ್ಲಿ ಇನ್ನೂ ನೂರಾರು ಜನರು ಎಂಡೋಸ್‌ಲ್ಫಾನ್‌ ಪೀಡಿತರಿದ್ದಾರೆ. ಅವರು ಅಂಗವೈಕಲ್ಯ ಸೇರಿದಂತೆ ಹಲವು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English