ಎಂಡೋಸಲ್ಫಾನ್ ಪೀಡಿತೆಯ ಮೇಲೆ ಅತ್ಯಾಚಾರ, ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ

Tuesday, September 12th, 2023
ಎಂಡೋಸಲ್ಫಾನ್ ಪೀಡಿತೆಯ ಮೇಲೆ ಅತ್ಯಾಚಾರ, ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ

ವಿಟ್ಲ : ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ರವರು ಎಂಡೋಸಲ್ಫಾನ್ ಪೀಡಿತೆಯ ಮೇಲೆ ಅತ್ಯಾಚಾರ ವೆಸಗಿದ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ರಾಜೇಶ್ ರೈ (33 ) ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. 2015ರ ಅ.1ರಂದು ತನ್ನದೇ ಊರಿನ 19 ವರ್ಷ ಪ್ರಾಯದ ಎಂಡೋಸಲ್ಫಾನ್ ಪೀಡಿತೆಯನ್ನು ಆರೋಪಿ ರಾಜೇಶ್ ಅತ್ಯಾಚಾರವೆಸಗಿದ್ದನೆಂದು ಆರೋಪಿಸಿ ಪ್ರಕರಣ […]

ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ಪ್ರಾರಂಭ

Saturday, December 15th, 2018
karyagara

ಮಂಗಳೂರು: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಟಿ.ವಿ 9 ದೃಶ್ಯ ಮಾಧ್ಯಮ ಹಾಗೂ ಸಾನಿಧ್ಯ, ಭಿನ್ನ ಸಾಮಥ್ರ್ಯ ಮಕ್ಕಳ ತರಬೇತಿ ಸಂಸ್ಥೆ, ಮಂಗಳೂರು ವತಿಯಿಂದ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ 2019 ಜನವರಿಯಲ್ಲಿ ಮೊದಲ ವಾರದಲ್ಲಿ ಪ್ರಾರಂಭಗೊಳ್ಳಲಿದೆ. ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಕೌಶಲ್ಯ ತರಬೇತಿದಾರರು, ವಿಶೇಷ ಶಿಕ್ಷಕಿಯರು, ಫಿಸಿಯೋಥೆರಪಿಸ್ಟ್ /ಸ್ಫೀಚ್‍ಥೆರಪಿಸ್ಟ್ /ಆಕ್ಯುಪೇಶನಲ್‍ಥೆರಪಿಸ್ಟ್/ ಸೈಕಾಲಾಜಿಸ್ಟ್ ರ ಸೇವೆ, ವಾಹನ, ಆಹಾರ ಹಾಗೂ […]

ಎಂಡೋಸಲ್ಫಾನ್‌ ಪೀಡಿತ ಪ್ರದೇಶಗಳ ಬಾವಿ ಹಾಗೂ ಬೋರ್‌ವೆಲ್‌ಗ‌ಳ ನೀರಿನ ಪರೀಕ್ಷೆಗೆ ಸೂಚನೆ

Thursday, November 15th, 2018
karnataka-3

ಮಂಗಳೂರು: ಎಂಡೋಸಲ್ಫಾನ್‌ ಪೀಡಿತ ಪ್ರದೇಶಗಳ ಬಾವಿ ಹಾಗೂ ಬೋರ್‌ವೆಲ್‌ಗ‌ಳ ನೀರಿನಲ್ಲಿ ಇನ್ನೂ ವಿಷಕಾರಿ ಅಂಶಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಜಂಟಿ ಸಮಿತಿ ರಚಿಸುವಂತೆ ವಿಧಾನ ಪರಿಷತ್‌ ಸರಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಕೆ.ಸಿ. ಕೊಂಡಯ್ಯ ಜಿಲ್ಲಾಧಿಕಾರಿಗೆ ಸೂಚಿಸಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಂಡೋ ಸಂತ್ರಸ್ತರಿಗೆ ಹಾಗೂ ಮೃತ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ವಿಧಾನ ಪರಿಷತ್ತಿನ ಸರಕಾರಿ ಭರವಸೆಗಳ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ 92 ಗ್ರಾಮಗಳಲ್ಲಿ ಎಂಡೋ ಸಿಂಪಡಿಸಲಾಗಿದ್ದು, ಆ ಪ್ರದೇಶದ ಪ್ರತಿಯೊಂದು […]

ಮಹಾಮಾರಿ ಎಂಡೋಸಲ್ಫಾನ್‌ನಿಂದ ಜಿಲ್ಲೆಯಲ್ಲಿ ಮತ್ತೋರ್ವ ಎಂಡೋಸಲ್ಫಾನ್‌ ಪೀಡಿತೆ ಸಾವು

Tuesday, September 6th, 2016
Ayishad-Rila

ಪುತ್ತೂರು: ಮಹಾಮಾರಿ ಎಂಡೋಸಲ್ಫಾನ್‌ ಅಂದ್ರೆ ಸಾಕು, ಅದರ ಹೆಸರು ಕೇಳುತ್ತಲೇ ದಕ್ಷಿಣ ಕನ್ನಡ ಜಿಲ್ಲೆಯ ಜನ ಬೆಚ್ಚಿ ಬೀಳ್ತಾರೆ. ಹೌದು, ಎಂಡೋಸಲ್ಫಾನ್‌ ದುಷ್ಪರಿಣಾಮದಿಂದ ಈವರೆಗೆ ಹಲವರು ಸಾವನ್ನಪ್ಪಿದ್ದಾರೆ. ಇಂದು ಜಿಲ್ಲೆಯಲ್ಲಿ ಮತ್ತೋರ್ವ ಎಂಡೋಸಲ್ಫಾನ್‌ ಪೀಡಿತೆ ಸಾವನ್ನಪ್ಪಿದ್ದಾಳೆ. ಹುಟ್ಟಿನಿಂದಲೇ ಎಂಡೋಸಲ್ಫಾನ್ ಸಂತ್ರಸ್ತೆಯಾಗಿದ್ದ ನರಿಮೊಗರುವಿನ ಆಯೈಷದ್ ರಿಲಾ(17) ಎಂಬ ಬಾಲಕಿ ಇಂದು ಕೊನೆಯುಸಿರೆಳೆದಿದ್ದಾಳೆ. ನರಿಮೊಗರು ಗ್ರಾಮದ ಇಸ್ಮಾಯಿಲ್ ಎಂಬುವರ ಪುತ್ರಿ ಆಯೈಷದ್, ಮೃತ ಎಂಡೋಸಂತ್ರಸ್ತೆ. ಆಯೈಷದ್‌ನಂತೆ ಜಿಲ್ಲೆಯಲ್ಲಿ ಇನ್ನೂ ನೂರಾರು ಜನರು ಎಂಡೋಸ್‌ಲ್ಫಾನ್‌ ಪೀಡಿತರಿದ್ದಾರೆ. ಅವರು ಅಂಗವೈಕಲ್ಯ ಸೇರಿದಂತೆ ಹಲವು […]

ಪತ್ನಿಗೆ ಡಾಕ್ಟರ್ ಕಲಿಯಲು ನೆರವು ಲಭಿಸಿಲ್ಲ- ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Wednesday, February 3rd, 2016
jagadisha

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತೆ ಶ್ರುತಿಯ ಪತಿ ಆದೂರು ಕುಂಟಾರಿನ ನಾರಾಯಣ ಅವರ ಪುತ್ರ ಜಗದೀಶ್(24) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಂಗಳೂರಿನಲ್ಲಿ ಹೋಮಿಯೋ ಡಾಕ್ಟರ್ ವಿಭಾಗದಲ್ಲಿ ಕಲಿಯುತ್ತಿರುವ ಶ್ರುತಿಯ ಕಾಲೇಜು ಫೀಸ್ ಪಾವತಿಸಲು ಸಾಧ್ಯವಾಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಸಂಬಂಧಿಕರು ತಿಳಿಸಿದ್ದಾರೆ. ಶ್ರುತಿಯ ಕಲಿಕೆಗೆ ಎಲ್ಲಾ ನೆರವು ನೀಡುವುದಾಗಿ ಈ ಹಿಂದೆ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ ಈ ವರೆಗೂ ಚಿಕ್ಕಾಸು ಲಭಿಸಿಲ್ಲ. […]

ಎಂಡೋಸಲ್ಫಾನ್ ನಿಷೇಧ ಕೂಡಲೇ ಜಾರಿಗೆ ಆಗ್ರಹಿಸಿ ರೈತಸಂಘಟನೆಗಳ ಪ್ರತಿಭಟನೆ

Tuesday, May 17th, 2011
ಎಂಡೋಸಲ್ಫಾನ್ ನಿಷೇಧ ಕೂಡಲೇ ಜಾರಿಗೆ ಆಗ್ರಹಿಸಿ ರೈತಸಂಘಟನೆಗಳ ಪ್ರತಿಭಟನೆ

ಮಂಗಳೂರು : ಭಾರತೀಯ ಕಿಸಾನ್ ಸಂಘ ಮತ್ತು ದ.ಕ ಜಿಲ್ಲಾ ಸಾವಯವ ಕೃಷಿ ಪರಿವಾರ ಇವರ ಜಂಟಿ ಆಶ್ರಯದಲ್ಲಿ ದಿನಾಂಕ ಇಂದು ಬೆಳಿಗ್ಗೆ 11-00 ರಿಂದ ಜಿಲ್ಲಾಧಿಕಾರಿ ಕಛೇರಿ ಎದುರುಗಡೆ ಎಂಡೋಸಲ್ಫಾನ್ ನಿಷೇಧ ಕೂಡಲೇ ಜಾರಿಗೆ ಆಗ್ರಹಿಸಿ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಾವಯವ ಕೃಷಿಕ ಸುಂದರ್ ರಾವ್ ಅವರು ಎಂಡೋಸಲ್ಫಾನ್ ಎಂಬ ಮಹಾಮಾರಿ ಕೀಟ ನಾಶಕವು ಸಂಪೂರ್ಣ ಜೀವ ಜಗತ್ತಿಗೇ ಮಾರಕವಾಗಿರುವುದು  ಇಂದು ಗುಟ್ಟಾಗಿ ಉಳಿದಿಲ್ಲ. ಜಗತ್ತಿನ 84 ದೇಶಗಳು ಈ ಮಾರಕ […]

‘ಅಡಿಕೆಯಿಂದ ಆಹಾರ ಬೆಳೆಯತ್ತ ಮುಖ ಮಾಡುವ ರೈತರಿಗೆ ಪೈಲಟ್ ಯೋಜನೆ ರೂಪಿಸಿ’

Thursday, April 21st, 2011
ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಸಭೆ

ಮಂಗಳೂರು : ಅಡಿಕೆ ಕೃಷಿಯಿಂದ ಆಹಾರ ಬೆಳೆಯನ್ನು ಬೆಳೆಯಲು ಉತ್ಸುಕರಾಗಿರುವ ರೈತರಿಗೆ ಪ್ರೋತ್ಸಾಹ ನೀಡಲು ಸರ್ಕಾರ ರೈತರಿಗಾಗಿ ಪೈಲಟ್ ಯೋಜನೆಯನ್ನು ರೂಪಿಸಬೇಕು ಎಂದು ರೈತ ಮುಖಂಡರಲ್ಲೊಬ್ಬರಾದ ಶ್ರೀ ರವಿಕಿರಣ ಪುಣಚ ಹೇಳಿದರು. ಅವರಿಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅವರ ಕಚೇರಿಯಲ್ಲಿ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡುತ್ತಿದ್ದರು. ಸಾಲಮನ್ನಾ ಯೋಜನೆ, ಅಡಿಕೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ, ಹಳದಿರೋಗ, ಕೊಳೆ ರೋಗ ತಡೆಗೆ ಕ್ರಮ, ಕುಮ್ಕಿ ಜಮೀನು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ರೈತರು ಜಿಲ್ಲಾಡಳಿತದ ಗಮನ ಸೆಳೆದರು. ರೈತರ […]