ತಿರುವನಂತಪುರ : ನಗರ ಹೃದಯಭಾಗದಲ್ಲಿರುವ ಬಿಜೆಪಿ ಕಚೇರಿಯ ಮೇಲೆ ಕಚ್ಚಾ ಬಾಂಬ್ ಎಸೆಯಲಾದ ಘಟನೆ ನಡೆದಿದ್ದು ಇದರ ಹಿಂದೆ ಸಿಪಿಐಎಂ ಕಾರ್ಯಕರ್ತರು ಇರುವುದಾಗಿ ಬಿಜೆಪಿ ಆರೋಪಿಸಿದೆ.
ಬಾಂಬ್ ಎಸೆತದಿಂದ ಯಾರೂ ಗಾಯಗೊಂಡ ವರದಿ ಇಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಇದೇ ಸೆಪ್ಟಂಬರ್ 23ರಿಂದ ಮೂರು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಪರಿಷತ್ ಸಭೆ ನಡೆಯಲಿರುವ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮೊದಲಾದ ಪಕ್ಷದ ವರಿಷ್ಠರು ಭಾಗವಹಿಸಲಿರುವ, ಕೋಯಿಕ್ಕೋಡ್‌ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕುಮ್ಮನಮ್ ರಾಜಶೇಖರನ್ ಅವರು ತೆರಳಿದ ಮಧ್ಯರಾತ್ರಿಯ ಬಳಿಕ ಬಿಜೆಪಿ ಕಚೇರಿಯ ಮೇಲೆ ಬಾಂಬ್ ಎಸೆದ ಘಟನೆ ನಡೆದಿದೆ. ಆ ಹೊತ್ತಿಗೆ ಕನಿಷ್ಠ ನಾಲ್ವರು ಬಿಜೆಪಿ ಕಾರ್ಯಕರ್ತರು ಮೇಲಿನ ಮಹಡಿಯಲ್ಲಿದ್ದರು.
ಬಾಂಬ್ ಎಸೆತದಿಂದ ಕಟ್ಟಡದ ಪ್ರವೇಶ ದ್ವಾರ ಹಾಗೂ ಕಿಟಕಿ ಗಾಜುಗಳು ಧ್ವಂಸವಾಗಿವೆ. ಆದರೆ ಯಾರೂ ಗಾಯಗೊಂಡಿಲ್ಲ ಎಂದು ತಿರುವನಂತಪುರ ಸಿಟಿ ಪೊಲೀಸ್ ಕಮಿಷನರ್ ಎಸ್ ಸ್ಪರ್ಜನ್ ಕುಮಾರ್ ಹೇಳಿದ್ದಾರೆ.
ಕೇರಳದ ಉತ್ತರ ಕಣ್ಣೂರು ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಸಿಪಿಐಎಂ ಮತ್ತು ಬಿಜೆಪಿ ಕಾರ್ಯಕತರ ನಡುವೆ ಮಾರಾಮಾರಿ, ಘರ್ಷಣೆ ನಡೆಯುತ್ತಿರುವ ಬೆನ್ನಿಗೇ ಈ ಬಾಂಬ್ ಎಸೆತದ ಘಟನೆ ನಡೆದಿದೆ.
ಟಿವಿ ಚ್ಯಾನಲ್ ತೋರಿಸಿರು ಸಿಸಿಟಿವಿ ವಿಡಿಯೋ ಚಿತ್ರಿಕೆಯಲ್ಲಿ ಕಂಡು ಬರುವಂತೆ ಬಾಂಬ್ ಸ್ಫೋಟಕ್ಕೆ ಕೆಲವೇ ನಿಮಿಷ ಮುನ್ನ ಸ್ಥಳಕ್ಕೆ ವ್ಯಕ್ತಿಯೊಬ್ಬ ಮೋಟರ್‌ಸೈಕಲ್‌ನಲ್ಲಿ ಬಂದಿರುವುದು ದಾಖಲಾಗಿದೆ. ಪೊಲೀಸರೀಗ ಆತನಿಗಾಗಿ ಹುಡುಕಾಡುತ್ತಿದ್ದಾರೆ.
Click this button or press Ctrl+G to toggle between Kannada and English