ಖಾಸಗಿ ಹೊಟೇಲ್‌ನ ಈಜು ಕೊಳದಲ್ಲಿ ಬ್ಯಾಂಕ್‌ ಅಧಿಕಾರಿಯೊಬ್ಬರ ಮೃತದೇಹ ಪತ್ತೆ

Monday, September 11th, 2023
Gopu-nairr

ಮಂಗಳೂರು : ನಗರದ ಖಾಸಗಿ ಹೊಟೇಲ್‌ನ ಈಜು ಕೊಳದಲ್ಲಿ ಬ್ಯಾಂಕ್‌ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್. ನಾಯರ್ ಮೃತಪಟ್ಟ ಅಧಿಕಾರಿ. ಬ್ಯಾಂಕ್‌ ಅಧಿಕಾರಿ ಭಾನುವಾರ ಮಂಗಳೂರಿಗೆ ಆಗಮಿಸಿ ಹೊಟೇಲ್‌ನಲ್ಲಿ ತಂಗಿದ್ದು, ಇಂದು ಬೆಳಿಗ್ಗೆ 4 ಗಂಟೆಗೆ ಹೊಟೇಲ್ ರೂಮ್ ನಿಂದ ಈಜುಕೊಳಕ್ಕೆ ಹೋಗಿದ್ದರು. ಮದ್ಯ ಸೇವಿಸಿರುವುದರಿಂದ ಈಜಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ ಇನ್ನು ಘಟನೆ ನಡೆದ ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ರವಿವಾರ ಏಳು ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

Sunday, March 29th, 2020
Kasaragod Corona

ಕಾಸರಗೋಡು :  ರವಿವಾರ ಕೇರಳ ರಾಜ್ಯದಲ್ಲಿ 20 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ, ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ  ರವಿವಾರದಂದು ಏಳು ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಸೋಕಿತರೆಲ್ಲರೂ ವಿದೇಶದಿಂದ ಬಂದವರಾಗಿದ್ದಾರೆ. ಶನಿವಾರ ಒಂದು ಪ್ರಕರಣ ಮಾತ್ರ ದೃಢ ಪಟ್ಟಿದ್ದರೆ. ಆದರೆ, ರವಿವಾರ ಏಳು ಪ್ರಕರಣ ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 89ಕ್ಕೇರಿಕೆಯಾಗಿದೆ. ಕಾಸರಗೋಡು ಏಳು, ಕಣ್ಣೂರು ಎಂಟು, ತಿರುವನಂತಪುರ, ತ್ರಿಶೂರು, ಪಾಲಕ್ಕಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಂಡು ಬಂದಿದೆ. ಈ ಪೈಕಿ ಹದಿನೆಂಟು ಮಂದಿ […]

ಖಾಸಗಿ ಬಸ್ಸಿನಲ್ಲಿ ಮಹಿಳೆಗೆ ಕಿರುಕುಳ : ಆರೋಪಿ ಬಂಧನ

Thursday, November 28th, 2019
Munavvar

ಕಾಸರಗೋಡು : ಖಾಸಗಿ ಬಸ್ಸಿನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಮಲಪ್ಪುರಂ ಕೋಟಕ್ಕಲ್ ಪೊಲೀಸರು ಬಂಧಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಬಂಧಿತನನ್ನು ಕೂಡ್ಲು ನಿವಾಸಿ ಮುನವ್ವರ್ (32) ಎಂದು ಗುರುತಿಸಲಾಗಿದೆ. ಕಾಸರಗೋಡಿನಲ್ಲಿ ನಡೆಯುತ್ತಿರುವ ಶಾಲಾ ಕಲೋತ್ಸವಕ್ಕೆ ತಿರುವನಂತಪುರದಿಂದ ಬರುತ್ತಿದ್ದ ಕೊಲ್ಲಮ್ ನಿವಾಸಿಯಾದ ಯುವತಿಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ ಎನ್ನಲಾದ ಘಟನೆ ಮುಂಜಾನೆ ಎರಡು ಗಂಟೆಯ ಸುಮಾರಿಗೆ ನಡೆದಿದೆ. ಆರೋಪಿಯನ್ನು ಕೋಟಕ್ಕಲ್ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಈತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.  

ಅಯ್ಯಪ್ಪನ ದರ್ಶನಕ್ಕಾಗಿ 10 ರಿಂದ 50 ವರ್ಷದವರೆಗಿನ 550 ಮಹಿಳೆಯರು ಆನ್​ಲೈನ್​ನಲ್ಲಿ ಬುಕ್ಕಿಂಗ್​..!

Saturday, November 10th, 2018
ayyappa-swami

ತಿರುವನಂತಪುರ: ಗಲಭೆ ಹಾಗೂ ಭಕ್ತರ ನಿರ್ವಹಣೆ ದೃಷ್ಟಿಯಿಂದ ಕೇರಳ ಪೊಲೀಸರು ಅಯ್ಯಪ್ಪನ ದರ್ಶನಕ್ಕಾಗಿ ಆರಂಭಿಸಿರುವ ಆನ್ಲೈನ್ ಬುಕ್ಕಿಂಗ್ನಲ್ಲಿ 550 ಮಹಿಳೆಯರು ನೋಂದಣಿ ಮಾಡಿದ್ದಾರೆ. ಇದೇ 16ರಂದು ಶಬರಮಲೆಯಲ್ಲಿ ಹಬ್ಬ ಆರಂಭವಾಗಲಿದ್ದು, ಅಯ್ಯಪ್ಪನ ದರ್ಶನಕ್ಕಾಗಿ 10ರಿಂದ 50 ವರ್ಷದವರೆಗಿನ 550 ಮಹಿಳೆಯರು ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿದ್ದಾರೆ ಎಂದು ತಿರುವಂಕೂರು ದೇವಸಂ ಮಂಡಳಿ ಮಾಹಿತಿ ನೀಡಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಅಯ್ಯಪ್ಪನ ದೇಗುಲ ಪ್ರವೇಶಿಸಲು ಮುಂದಾದ ಮಹಿಳೆಯರು ಹಾಗೂ ಅಯ್ಯಪ್ಪನ ಭಕ್ತರ ನಡುವೆ ಗಲಭೆ ಸಂಭವಿಸಿ ದೇಶಾದ್ಯಂತ ಸುದ್ದಿಯಾಗಿತ್ತು. ಮತ್ತೆ ಇಂತಹ […]

ಮಗಳ ಸಾವಿನ ಬೆನ್ನಲ್ಲೇ ಅಪ್ಪನ ದುರ್ಮರಣ: ಸಂಗೀತ ನಿರ್ದೇಶಕನ ದುರಂತ ಅಂತ್ಯ

Tuesday, October 2nd, 2018
film-artist

ತಿರುವನಂತಪುರಂ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ ನಿರ್ದೇಶಕ ಬಾಲಭಾಸ್ಕರ್ ಕೊನೆಯುಸಿರೆಳೆದಿದ್ದಾರೆ.ಅವರು ಸೋಮವಾರ ಮಧ್ಯರಾತ್ರಿ 12.55 ಗಂಟೆ ಸುಮಾರಿಗೆ ನಿಧನರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಳೆದ ಮಂಗಳವಾರ ದೇವಸ್ಥಾನದಿಂದ ವಾಪಸ್ ಆಗುತ್ತಿದ್ದ ವೇಳೆ ಪಲ್ಲಿಪುರಂ ಎಂಬಲ್ಲಿ ಅಪಘಾತಕ್ಕೀಡಾಗಿದ್ದರು. ದುರ್ಘಟನೆಯಲ್ಲಿ ಭಾಸ್ಕರ್ ಅವರ ಪುಟ್ಟ ಮಗಳು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಭಾಸ್ಕರ್ ಹಾಗೂ ಅವರ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ವಾರದಿಂದ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, […]

ನಿಫಾ ಬಳಿಕ ವರುಣನ ಭೀತಿಯಲ್ಲಿ ಕೇರಳ , ಒಂದೇ ದಿನ ಮಳೆಗೆ 9 ಮಂದಿ ಬಲಿ..!

Friday, June 15th, 2018
thiruvanthapuram

ತಿರುವನಂತಪುರಂ: ಉತ್ತರ ಭಾರತದಲ್ಲಿ ಅಬ್ಬರಿಸಿದ್ದ ಮಳೆ-ಗಾಳಿ, ಗುಡುಗು-ಸಿಡಿಲು, ಧೂಳು ದಕ್ಷಿಣ ಭಾರತದತ್ತಲೂ ಆರ್ಭಟಿಸಿದೆ. ನಿಫಾ ಭಯದಿಂದ ಹೊರ ಬಂದು ಮುಂಗಾರಿನ ಖುಷಿಯಲ್ಲಿದ್ದ ಕೇರಳದ ಜನರಲ್ಲಿ ಸೂತಕ ಮನೆ ಮಾಡಿದೆ. ನಿನ್ನೆ ಒಂದೇ ದಿನ ಮಳೆಯ ರೌದ್ರನರ್ತನಕ್ಕೆ 9 ಮಂದಿ ಅಸುನೀಗಿದ್ದಾರೆ. ಕಳೆದೊಂದು ತಿಂಗಳಿನಿಂದ ಮಳೆಗೆ ಬಲಿಯಾದವರ ಸಂಖ್ಯೆ 43 ಮುಟ್ಟಿದೆ. ಭಾರೀ ಮಳೆಗೆ ತತ್ತರಿಸಿರುವ ಉತ್ತರ ಕೇರಳದ ಜಿಲ್ಲೆಗಳಾದ ಕಾಜಿಕೋಡ, ಕನ್ನೂರು, ಪಾಲ್ಕಾಡ್‌, ಕಾಸರಗೂಡು ಹಾಗೂ ಮಲ್ಲಾಪುರಂನಲ್ಲಿ ಹೈ ಅಲರ್ಟ್‌‌ ಘೋಷಿಸಲಾಗಿದೆ. ನಿನ್ನೆ ಮಳೆಯಿಂದ ಸಂಭವಿಸಿ ಭೂಕುಸಿತಕ್ಕೆ […]

CBSE 12ನೇ ತರಗತಿ ಫಲಿತಾಂಶ: 500ಕ್ಕೆ 499 ಅಂಕ ಪಡೆದ ಮೇಘನಾಗೆ ಫಸ್ಟ್ ರ‍್ಯಾಂಕ್‌

Saturday, May 26th, 2018
bangaluru

ನವದೆಹಲಿ: ಸಿಬಿಎಸ್‌ಇಯ 12ನೇ ತರಗತಿಯ ಪರೀಕ್ಷಾ ಫಲಿತಾಂಶ ಹೊರ ಬಿದ್ದಿದೆ. ಒಟ್ಟಾರೆ ಶೇ. 83.01ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗಾಜಿಯಾಬಾದ್‌ನ ಮೇಘನಾ ಶ್ರೀವಾತ್ವ 500 ಅಂಕಗಳಿಗೆ 499 ಅಂಕಗಳನ್ನು ಪಡೆದು ಫಸ್ಟ್‌‌ ರ‍್ಯಾಂಕ್‌ ತಮ್ಮದಾಗಿಸಿಕೊಂಡಿದ್ದಾರೆ. 11,86,306 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. ದೇಶಾದ್ಯಂತ 4,138 ಪರೀಕ್ಷಾ ಕೇಂದ್ರಗಳು ಹಾಗೂ ಹೊರದೇಶಗಳ 71 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು ಎಂದು ಸಿಬಿಎಸ್‌ಇಯ ಸೆಕ್ರೆಟರಿ ಅನಿಲ್‌‌ ಸ್ವರೂಪ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಫಲಿತಾಂಶವನ್ನ ಸಮಚಿತ್ತದಿಂದ ಸ್ವೀಕರಿಸಬೇಕು. ಜಗತ್ತಿನಲ್ಲಿ ಪರೀಕ್ಷೆಯೇ ಕೊನೆಯಲ್ಲ ಎಂದು […]

ಬಿಜೆಪಿ ಕಾರ್ಯಾಲಯಕ್ಕೆ ಬಾಂಬ್ ಎಸೆತ ಮಂಜೇಶ್ವರದಲ್ಲಿ ಕಾರ್ಯಕರ್ತರ ಪ್ರತಿಭಟನೆ

Friday, September 9th, 2016
manjeshwara-panchayath

ಮಂಜೇಶ್ವರ: ತಿರುವನಂತಪುರದಲ್ಲಿ ಬಿಜೆಪಿಯ ಕಾರ್ಯಾಲಯಕ್ಕೆ ಬಾಂಬೆಸೆದು ಹಾನಿಗೊಳಿಸಿದ ಘಟನೆಯನ್ನು ಪ್ರತಿಭಟಿಸಿ ಮಂಜೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಬಿಜೆಪಿಯ ರಾಜ್ಯ ಘಟಕ ಕಾರ್ಯಾಲಯಕ್ಕೆ ಬಾಂಬ್ ಎಸೆದು ಧ್ವಂಸಗೊಳಿಸಿ ಕೇರಳ ರಾಜ್ಯದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಿಣರಾಯಿ ವಿಜಯನ್ ನೇತೃತ್ವದ ಸರಕಾರದ ವಿರುದ್ಧ ಮಂಜೇಶ್ವರ ಹೊಸಂಗಡಿಯಲ್ಲಿ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಪ್ರತಿಭಟನಾ ಮೆರವಣಿಗೆ ಹಾಗೂ ಖಂಡನಾ ಸಭೆ ಬುಧವಾರ ನಡೆಸಿತು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಹರಿಶ್ಚಂದ್ರ ಮಂಜೇಶ್ವರ ಉದ್ಘಾಟಿಸಿ ಬಾಂಬ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದರೆ ದೇಶದಾದ್ಯಂತ ಸಿಪಿಎಂ […]

ತಿರುವನಂತಪುರ ಬಿಜೆಪಿ ಕಚೇರಿ ಮೇಲೆ ಬಾಂಬ್‌ ಎಸೆತ, ಸಿಪಿಎಂ ಕೃತ್ಯ

Wednesday, September 7th, 2016
Bomb-BJP-office

ತಿರುವನಂತಪುರ : ನಗರ ಹೃದಯಭಾಗದಲ್ಲಿರುವ ಬಿಜೆಪಿ ಕಚೇರಿಯ ಮೇಲೆ ಕಚ್ಚಾ ಬಾಂಬ್‌ ಎಸೆಯಲಾದ ಘಟನೆ ನಡೆದಿದ್ದು ಇದರ ಹಿಂದೆ ಸಿಪಿಐಎಂ ಕಾರ್ಯಕರ್ತರು ಇರುವುದಾಗಿ ಬಿಜೆಪಿ ಆರೋಪಿಸಿದೆ. ಬಾಂಬ್‌ ಎಸೆತದಿಂದ ಯಾರೂ ಗಾಯಗೊಂಡ ವರದಿ ಇಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ಸೆಪ್ಟಂಬರ್‌ 23ರಿಂದ ಮೂರು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಪರಿಷತ್‌ ಸಭೆ ನಡೆಯಲಿರುವ, ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಮೊದಲಾದ ಪಕ್ಷದ ವರಿಷ್ಠರು ಭಾಗವಹಿಸಲಿರುವ, ಕೋಯಿಕ್ಕೋಡ್‌ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ […]

ನಕಲಿ ದಾಖಲೆ ಸೃಷ್ಟಿಸಿ ವಂಚನೆ ಹಿನ್ನಲೆಯಲ್ಲಿ ವಿದ್ಯಾರ್ಥಿ ಬಂಧನ

Saturday, May 11th, 2013
Fazil

ಕಾಸರಗೋಡು : ನಕಲಿ ದಾಖಲೆ ಸೃಷ್ಟಿಸಿ ವಂಚನೆ ನಡೆಸಿರುವ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಬಿಎಂ ಓದುತ್ತಿರುವ ತಿರುವನಂತಪುರ ಮೂಲದ ಫಾಸಿಲ್ ಎಂಬಾತನನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಹೊಸಂಗಡಿಯ ಅಬ್ದುಲ್ ಸುನೈರ್ ಮುನೀರ್ ಎಂಬುವವರ ಡ್ರೈವಿಂಗ್ ಲೈಸನ್ಸನ್ನು ದುರುಪಯೋಗಪಡಿಸಿಕೊಂಡ ಆರೋಪಿ ಫಸೀಲ್, ಸುನೈರ್ ನ ಹೆಸರಲ್ಲಿ ಬ್ಯಾಂಕ್ ನಕಲಿ ದಾಖಲೆ ಸೃಷ್ಟಿಸಿ  ಖಾತೆ ತೆರೆದು ಬ್ಯಾಂಕ್ ನಿಂದ ಹಣ ಪಡೆದು ವಂಚನೆ ನಡೆಸಿದ್ದಾನೆ. ಆರೋಪಿ ಬ್ಯಾಂಕ್ ಗೆ ಸುಮಾರು ೩.೫೦ ಲಕ್ಷ ರೂಪಾಯಿ ವಂಚಿಸಿದ್ದಾಗಿ ತಿಳಿದು ಬಂದಿದೆ. […]