ಮಂಗಳೂರು : ನಗರದ ಖಾಸಗಿ ಹೊಟೇಲ್ನ ಈಜು ಕೊಳದಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್. ನಾಯರ್ ಮೃತಪಟ್ಟ ಅಧಿಕಾರಿ.
ಬ್ಯಾಂಕ್ ಅಧಿಕಾರಿ ಭಾನುವಾರ ಮಂಗಳೂರಿಗೆ ಆಗಮಿಸಿ ಹೊಟೇಲ್ನಲ್ಲಿ ತಂಗಿದ್ದು, ಇಂದು ಬೆಳಿಗ್ಗೆ 4 ಗಂಟೆಗೆ ಹೊಟೇಲ್ ರೂಮ್ ನಿಂದ ಈಜುಕೊಳಕ್ಕೆ ಹೋಗಿದ್ದರು. ಮದ್ಯ ಸೇವಿಸಿರುವುದರಿಂದ ಈಜಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ
ಇನ್ನು ಘಟನೆ ನಡೆದ ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English