ನಿಫಾ ಬಳಿಕ ವರುಣನ ಭೀತಿಯಲ್ಲಿ ಕೇರಳ , ಒಂದೇ ದಿನ ಮಳೆಗೆ 9 ಮಂದಿ ಬಲಿ..!

2:52 PM, Friday, June 15th, 2018
Share
1 Star2 Stars3 Stars4 Stars5 Stars
(No Ratings Yet)
Loading...

thiruvanthapuramತಿರುವನಂತಪುರಂ: ಉತ್ತರ ಭಾರತದಲ್ಲಿ ಅಬ್ಬರಿಸಿದ್ದ ಮಳೆ-ಗಾಳಿ, ಗುಡುಗು-ಸಿಡಿಲು, ಧೂಳು ದಕ್ಷಿಣ ಭಾರತದತ್ತಲೂ ಆರ್ಭಟಿಸಿದೆ. ನಿಫಾ ಭಯದಿಂದ ಹೊರ ಬಂದು ಮುಂಗಾರಿನ ಖುಷಿಯಲ್ಲಿದ್ದ ಕೇರಳದ ಜನರಲ್ಲಿ ಸೂತಕ ಮನೆ ಮಾಡಿದೆ. ನಿನ್ನೆ ಒಂದೇ ದಿನ ಮಳೆಯ ರೌದ್ರನರ್ತನಕ್ಕೆ 9 ಮಂದಿ ಅಸುನೀಗಿದ್ದಾರೆ. ಕಳೆದೊಂದು ತಿಂಗಳಿನಿಂದ ಮಳೆಗೆ ಬಲಿಯಾದವರ ಸಂಖ್ಯೆ 43 ಮುಟ್ಟಿದೆ.

ಭಾರೀ ಮಳೆಗೆ ತತ್ತರಿಸಿರುವ ಉತ್ತರ ಕೇರಳದ ಜಿಲ್ಲೆಗಳಾದ ಕಾಜಿಕೋಡ, ಕನ್ನೂರು, ಪಾಲ್ಕಾಡ್‌, ಕಾಸರಗೂಡು ಹಾಗೂ ಮಲ್ಲಾಪುರಂನಲ್ಲಿ ಹೈ ಅಲರ್ಟ್‌‌ ಘೋಷಿಸಲಾಗಿದೆ. ನಿನ್ನೆ ಮಳೆಯಿಂದ ಸಂಭವಿಸಿ ಭೂಕುಸಿತಕ್ಕೆ ಐವರು ಬಲಿಯಾಗಿದ್ದಾರೆ. ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ದುರಂತ ಅಂತ್ಯ ಕಂಡಿದ್ದಾರೆ. ಮತ್ತೊಬ್ಬ ವ್ಯಕ್ತಿ ಕಾಜಿಕೋಡದ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.

ಕೇರಳದ ವಿವಿಧ ಜಿಲ್ಲೆಗಳಲ್ಲಿ ಮಳೆ ಅನಾಹುತಕ್ಕೆ ಸಂಬಂಧಿಸಿದಂತೆ 18 ಮಂದಿ ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ. ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಮಳೆ ಆಪಾರ ಪ್ರಮಾಣದ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾಗಿದೆ. ಆಪಾಯದ ಮಟ್ಟ ಮೀರಿ ನದಿಗಳು ಹರಿಯುತ್ತಿದ್ದು, ಜಲಾಶಯಗಳು ತುಂಬಿ ತುಳುಕುತ್ತಿವೆ. ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English