ಕಾಸರಗೋಡು : ರವಿವಾರ ಕೇರಳ ರಾಜ್ಯದಲ್ಲಿ 20 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ, ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ರವಿವಾರದಂದು ಏಳು ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಸೋಕಿತರೆಲ್ಲರೂ ವಿದೇಶದಿಂದ ಬಂದವರಾಗಿದ್ದಾರೆ.
ಶನಿವಾರ ಒಂದು ಪ್ರಕರಣ ಮಾತ್ರ ದೃಢ ಪಟ್ಟಿದ್ದರೆ. ಆದರೆ, ರವಿವಾರ ಏಳು ಪ್ರಕರಣ ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 89ಕ್ಕೇರಿಕೆಯಾಗಿದೆ.
ಕಾಸರಗೋಡು ಏಳು, ಕಣ್ಣೂರು ಎಂಟು, ತಿರುವನಂತಪುರ, ತ್ರಿಶೂರು, ಪಾಲಕ್ಕಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಂಡು ಬಂದಿದೆ. ಈ ಪೈಕಿ ಹದಿನೆಂಟು ಮಂದಿ ವಿದೇಶದಿಂದ ಬಂದವರಾಗಿದ್ದಾರೆ. ಕೇರಳದಲ್ಲಿ 202 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 181 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ.
Click this button or press Ctrl+G to toggle between Kannada and English