CBSE 12ನೇ ತರಗತಿ ಫಲಿತಾಂಶ: 500ಕ್ಕೆ 499 ಅಂಕ ಪಡೆದ ಮೇಘನಾಗೆ ಫಸ್ಟ್ ರ‍್ಯಾಂಕ್‌

1:37 PM, Saturday, May 26th, 2018
Share
1 Star2 Stars3 Stars4 Stars5 Stars
(No Ratings Yet)
Loading...

bangaluruನವದೆಹಲಿ: ಸಿಬಿಎಸ್‌ಇಯ 12ನೇ ತರಗತಿಯ ಪರೀಕ್ಷಾ ಫಲಿತಾಂಶ ಹೊರ ಬಿದ್ದಿದೆ. ಒಟ್ಟಾರೆ ಶೇ. 83.01ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗಾಜಿಯಾಬಾದ್‌ನ ಮೇಘನಾ ಶ್ರೀವಾತ್ವ 500 ಅಂಕಗಳಿಗೆ 499 ಅಂಕಗಳನ್ನು ಪಡೆದು ಫಸ್ಟ್‌‌ ರ‍್ಯಾಂಕ್‌ ತಮ್ಮದಾಗಿಸಿಕೊಂಡಿದ್ದಾರೆ.

11,86,306 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. ದೇಶಾದ್ಯಂತ 4,138 ಪರೀಕ್ಷಾ ಕೇಂದ್ರಗಳು ಹಾಗೂ ಹೊರದೇಶಗಳ 71 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು ಎಂದು ಸಿಬಿಎಸ್‌ಇಯ ಸೆಕ್ರೆಟರಿ ಅನಿಲ್‌‌ ಸ್ವರೂಪ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಫಲಿತಾಂಶವನ್ನ ಸಮಚಿತ್ತದಿಂದ ಸ್ವೀಕರಿಸಬೇಕು. ಜಗತ್ತಿನಲ್ಲಿ ಪರೀಕ್ಷೆಯೇ ಕೊನೆಯಲ್ಲ ಎಂದು ವಿದ್ಯಾರ್ಥಿಗಳಿಗೆ ಅನಿಲ್ ಸ್ವರೂಪ್ ಧೈರ್ಯ ತುಂಬಿದ್ದಾರೆ.

ತಿರುವನಂತಪುರಂ, ಚೆನ್ನೈ, ದೆಹಲಿ ಟಾಪರ್ ಸ್ಥಾನಗಳನ್ನು ಪಡೆದುಕೊಂಡಿದೆ. ಇನ್ನು ಸಿಬಿಎಸ್‌ಇ ಪರೀಕ್ಷಾ ಫಲಿತಾಂಶದಲ್ಲೂ ಹೆಣ್ಣು ಮಕ್ಕಳೇ ಮುಂದಿದ್ದಾರೆ.

CBSEಯ 10ನೇ ತರಗತಿ ಪರೀಕ್ಷಾ ಫಲಿತಾಂಶ ಜೂನ್‌ ಮೊದಲ ವಾರದಲ್ಲಿ ಹೊರ ಬೀಳಲಿದೆ. ಮಾ.3ರಿಂದ ಏ.13ರವರೆಗೂ 12ನೇ ತರಗತಿಯ ಪರೀಕ್ಷೆಗಳು ನಡೆದಿದ್ದವು. ಆದರೆ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ವಾಟ್ಸ್‌ಪ್‌‌ನಲ್ಲಿ ಲೀಕ್‌‌ ಆದ ಹಿನ್ನೆಲೆಯಲ್ಲಿ ಏ.25ರಂದು ಮರುಪರೀಕ್ಷೆ ನಡೆಸಲಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English