ತಿರುವನಂತಪುರ: ಗಲಭೆ ಹಾಗೂ ಭಕ್ತರ ನಿರ್ವಹಣೆ ದೃಷ್ಟಿಯಿಂದ ಕೇರಳ ಪೊಲೀಸರು ಅಯ್ಯಪ್ಪನ ದರ್ಶನಕ್ಕಾಗಿ ಆರಂಭಿಸಿರುವ ಆನ್ಲೈನ್ ಬುಕ್ಕಿಂಗ್ನಲ್ಲಿ 550 ಮಹಿಳೆಯರು ನೋಂದಣಿ ಮಾಡಿದ್ದಾರೆ.
ಇದೇ 16ರಂದು ಶಬರಮಲೆಯಲ್ಲಿ ಹಬ್ಬ ಆರಂಭವಾಗಲಿದ್ದು, ಅಯ್ಯಪ್ಪನ ದರ್ಶನಕ್ಕಾಗಿ 10ರಿಂದ 50 ವರ್ಷದವರೆಗಿನ 550 ಮಹಿಳೆಯರು ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿದ್ದಾರೆ ಎಂದು ತಿರುವಂಕೂರು ದೇವಸಂ ಮಂಡಳಿ ಮಾಹಿತಿ ನೀಡಿದೆ.
ಸುಪ್ರೀಂಕೋರ್ಟ್ ತೀರ್ಪಿನಂತೆ ಅಯ್ಯಪ್ಪನ ದೇಗುಲ ಪ್ರವೇಶಿಸಲು ಮುಂದಾದ ಮಹಿಳೆಯರು ಹಾಗೂ ಅಯ್ಯಪ್ಪನ ಭಕ್ತರ ನಡುವೆ ಗಲಭೆ ಸಂಭವಿಸಿ ದೇಶಾದ್ಯಂತ ಸುದ್ದಿಯಾಗಿತ್ತು. ಮತ್ತೆ ಇಂತಹ ಘಟನೆಗಳು ಸಂಭವಿಸದಂತೆ ಹಾಗೂ ದೇಗುಲಕ್ಕೆ ಹರಿದುಬರುವ ಭಕ್ತರ ದಂಡನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಉದ್ದೇಶದಿಂದ ಕೇರಳ ಪೊಲೀಸರು ಈ ವೆಬ್ಸೈಟ್ಗೆ ಚಾಲನೆ ನೀಡಿದ್ದರು. ಒಟ್ಟು 3.50 ಲಕ್ಷ ಭಕ್ತರು ವೆಬ್ಸೈಟ್ ಮೂಲಕ ನೋಂದಣಿ ಮಾಡಿಸಿದ್ದು, ಇದರಲ್ಲಿ 550 ಮಹಿಳೆಯರಿದ್ದಾರೆ ಎಂದು ತಿಳಿದುಬಂದಿದೆ.
ಅಯ್ಯಪ್ಪನ ಭಕ್ತರು ಹಾಗೂ ಮಹಿಳಾ ಭಕ್ತರ ನಡುವೆ ಭಾರಿ ಸಂಘರ್ಷ ಏರ್ಪಟ್ಟರೂ ಮಹಿಳೆಯರು ದೇಗುಲ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿಯಾದರೂ ಮಹಿಳೆಯರು ದೇಗುಲ ಪ್ರವೇಶಿಸುವರೇ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.
Click this button or press Ctrl+G to toggle between Kannada and English